ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಭಾರತ ದೇಶದ ಇಂದು ಅಪ್ರತಿಮ ರಾಷ್ಟ್ರ ಭಕ್ತನೊಬ್ಬನನ್ನು ಕಳೆದುಕೊಂಡಿದೆ ಎಂದು ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನಕ್ಕೆ ಸಚಿವ ಕೆ.ಎಸ್. ಈಶ್ವರಪ್ಪ ಕಂಬನಿ ಮಿಡಿದಿದ್ದಾರೆ.
ಈ ಕುರಿತಂತೆ ಬೆಂಗಳೂರಿನಿಂದ ಶೋಕ ಸಂದೇಶ ನೀಡಿರುವ ಅವರು, ಸುರೇಶ್ ಅಂಗಡಿಯವರು ಓರ್ವ ಅಪ್ರತಿಮ ರಾಷ್ಟ್ರ ಭಕ್ತ. ಬೆಳಗಾವಿಯಲ್ಲಿ ಕನ್ನಡಿಗರು ಹಾಗೂ ಮರಾಠಿಗರನ್ನು ಒಟ್ಟಾಗಿ ಸೇರಿಸಿಕೊಂಡು ಯಾವುದೇ ರೀತಿಯ ಬೇಧ ಬಾವವಿಲ್ಲದೇ ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುತ್ತಿದ್ದ ವ್ಯಕ್ತಿಯಾಗಿದ್ದರು ಎಂದರು.
ರೈಲ್ವೆ ಇಲಾಖೆಯಿಂದ ನಮ್ಮ ರಾಜ್ಯಕ್ಕೆ ಬಹಳಷ್ಟು ಕೆಲಸಗಳನ್ನು ಸುರೇಶ್ ಅಂಗಡಿ ಮಾಡಿಕೊಟ್ಟಿದ್ದಾರೆ. ಇಂದು ಅವರು ನಮ್ಮನ್ನು ಅಗಲಿರಬಹುದು. ಆದರೆ, ಅವರು ಮಾಡಿರುವ ಕೆಲಸಗಳು ಹಾಗೂ ಅವರ ಚಿಂತನೆಗಳು ನಮಗೆ ಸದಾ ಮಾದರಿಯಾಗಿರುತ್ತವೆ ಎಂದರು.
Get In Touch With Us info@kalpa.news Whatsapp: 9481252093

















