ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದಕ್ಷಿಣ ಭಾರತದ ಮೊಟ್ಟ ಮೊದಲ ವಂದೇ ಭಾರತ್ ಎಕ್ಸ್’ಪ್ರೆಸ್ ರೈಲಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ.
ಭಾರತೀಯ ರೈಲ್ವೆಯ ಐದನೆಯ ವಂದೇ ಭಾರತ್ ಎಕ್ಸ್’ಪ್ರೆಸ್ ರೈಲು ಇದಾಗಿದ್ದು, ಹಲವು ವಿಶೇಷತೆಗಳನ್ನು ಒಳಗೊಂಡಿದೆ.
ಎಲ್ಲಿಂದ ಎಲ್ಲಿಗೆ ಸಂಚಾರ?
ದಕ್ಷಿಣ ಭಾರತದ ಮೊದಲ ಹೈಸ್ಪೀಡ್ ರೈಲು ಇದಾಗಿದ್ದು, ಚೆನ್ನೈ-ಬೆಂಗಳೂರು-ಮೈಸೂರು ನಡುವೆ ಸಂಚಾರ ಮಾಡಲಿದೆ. ಚೆನ್ನೈ ಸೆಂಟ್ರಲ್’ನಿಂದ ಮೈಸೂರು ಜಂಕ್ಷನ್’ಗೆ ತೆರಳಲಿರುವ ರೈಲಿನ ಸಂಖ್ಯೆ 20608 ಹಾಗೂ ಮೈಸೂರು ಜಂಕ್ಷನ್’ನಿಂದ ಚೆನ್ನೈ ಸೆಂಟ್ರಲ್’ಗೆ ತಲುಪಲಿರುವ ರೈಲು ಸಂಖ್ಯೆ 20607 ಆಗಿದೆ.
ಎಲ್ಲೆಲ್ಲಿ ಸ್ಟಾಪ್?
ಚೆನ್ನೈ-ಮೈಸೂರು ನಡುವೆ ಪೆರಂಬೂರ್, ವೆಪ್ಪಂಪಟ್ಟು, ಕಟ್ಪಾಡಿ ಜಂಕ್ಷನ್, ಗುಡುಪಲ್ಲಿ ಮತ್ತು ಮಾಲೂರು ಬರಲಿದ್ದು, ಬೆಂಗಳೂರು ಸಿಟಿ ಜಂಕ್ಷನ್’ನಲ್ಲಿ ಮಾತ್ರ ಒಂದು ನಿಲುಗಡೆ ಇರಲಿದೆ.
ಯಾವ ದಿನಗಳು ಸಂಚರಿಸಲಿದೆ?
ಚೆನ್ನೈ-ಬೆಂಗಳೂರು-ಮೈಸೂರು ನಡುವಿನ ವಂದೇ ಭಾರತ್ ಎಕ್ಸ್’ಪ್ರೆಸ್ ರೈಲು ವಾರದಲ್ಲಿ ಆರು ದಿನ ಅಂದರೆ ಸೋಮವಾರ, ಮಂಗಳವಾರ, ಗುರುವಾರ, ಶುಕ್ರವಾರ, ಶನಿವಾರ ಹಾಗೂ ಭಾನುವಾರ ಸಂಚರಿಸಲಿದೆ.
ರೈಲು ಸಂಚಾರದ ಸಮಯವೇನು?
ಚೆನ್ನೈ ಸೆಂಟ್ರಲ್’ನಿಂದ ಬೆಳಗ್ಗೆ 5.50ಕ್ಕೆ ಹೊರಡುವ ರೈಲು ಬೆಳಗ್ಗೆ 10.25ಕ್ಕೆ ಬೆಂಗಳೂರು ಸಿಟಿ ಜಂಕ್ಷನ್ ತಲುಪಲಿದೆ. ಐದು ನಿಮಿಷ ನಿಲುಗಡೆ ನಂತರ 10.30ಕ್ಕೆ ಹೊರಟು ಮಧ್ಯಾಹ್ನ 12.30ಕ್ಕೆ ಮೈಸೂರು ತಲುಪಲಿದೆ.
ಮೈಸೂರಿನಿಂದ ಮಧ್ಯಾಹ್ನ 1.05ಕ್ಕೆ ಹೊರಟು, 2.55ಕ್ಕೆ ಬೆಂಗಳೂರು ಸಿಟಿ ಜಂಕ್ಷನ್’ಗೆ ತಲುಪಲಿದೆ. ಐದು ನಿಮಿಷಗಳ ನಿಲುಗಡೆ ನಂತರ 3 ಗಂಟೆಗೆ ಹೊರಟು ರಾತ್ರಿ 7.55ಕ್ಕೆ ಚೆನ್ನೈ ಸೆಂಟ್ರಲ್ ತಲುಪಲಿದೆ.
ಏನು ವಂದೇ ಮಾತರಂ ರೈಲಿನ ವಿಶೇಷತೆ?
- ಭಾರತದ ಮೊಟ್ಟ ಮೊದಲ ಸೆಮಿ ಹೈಸ್ಪೀಡ್ ರೈಲು
- ವಿಶ್ವದರ್ಜೆಯ ಪ್ರಯಾಣಿಕರ ಸೌಕರ್ಯ ಲಭ್ಯ
- ಎಲ್ಲ ಕೋಚ್’ಗಳ ಬಾಗಿಲು ಸ್ವಯಂ ಚಾಲಿತ
- ಜಿಪಿಎಸ್ ಆಧಾರಿತ ಆಡಿಯೋ ದೃಶ್ಯ ಮಾಹಿತಿ ವ್ಯವಸ್ಥೆ
- ಮನರಂಜನೆಗಾಗಿ ಆನ್’ಬೋರ್ಡ್ ಹಾಟ್’ಸ್ಪಾಟ್ ವೈಫೈ
- ಅತ್ಯಂತ ಆರಾಮದಾಯಕ ಆಸನ ವ್ಯವಸ್ಥೆ
- ಎಕ್ಸಿಕ್ಯೂಟಿವ್ ಕ್ಲಾಸ್’ನಲ್ಲಿ ತಿರುಗುವ ಕುರ್ಚಿ ವ್ಯವಸ್ಥೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post