Saturday, March 25, 2023
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಡಾ.ಗುರುರಾಜ ಪೋಶೆಟ್ಟಿಹಳ್ಳಿ

ಉಪನಯನ ಎಂದರೇನು? ಲೇಖನ ಸರಣಿ-5: ಯಜ್ಞೋಪವೀತ(ಜನಿವಾರ)

May 23, 2020
in ಡಾ.ಗುರುರಾಜ ಪೋಶೆಟ್ಟಿಹಳ್ಳಿ
0 0
0
Share on facebookShare on TwitterWhatsapp
Read - 3 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ತಲೆತಲಾಂತರದಿಂದ ಬ್ರಾಹ್ಮಣ ಗಳಿಸುತ್ತಿರುವ ಯಶಸ್ಸಿನ ಗುಟ್ಟು ಬಯಲು. ಅದುವೇ ಯಜ್ಞೋಪವೀತ ಧಾರಣೆ: ಯಜ್ಞೋಪವೀತಕ್ಕೆ ಉಪವೀತ, ಯಜ್ಞಸೂತ್ರ, ವ್ರತಬಂಧ, ಬಲಬಂಧ, ಮೊನೀಬಂಧ ಹಾಗೂ ಬ್ರಹ್ಮಸೂತ್ರ ಎಂಬ ಹಲವಾರು ಹೆಸರುಗಳಿವೆ. ಕನ್ನಡದಲ್ಲಿ ಯಜ್ಞೋಪವೀತಕ್ಕೆ ಜನಿವಾರವೆಂದು ಕರೆಯುತ್ತಾರೆ. ಯಜ್ಞೋಪವೀತವನ್ನು ಧರಿಸುವ ಪರಂಪರೆ ಬಹಳ ಪ್ರಾಚೀನವಾದದ್ದು. ಉಪನಯನದ ಅನಂತರ ಯಜ್ಞೋಪವೀತವನ್ನು ಧರಿಸಲಾಗುತ್ತದೆ.

ಉಪನಯನ ಎಂದರೆ ಹತ್ತಿರಕ್ಕೆ ತರುವುದು. ಯಾರ ಹತ್ತಿರ? ಎಂದರೆ ಬ್ರಹ್ಮಜ್ಞಾನದ ಹತ್ತಿರ. ಹಿಂದೂ ಧರ್ಮದ ಷೋಡಶ ಸಂಸ್ಕಾರಗಳಲ್ಲಿ ಉಪನಯನವೂ ಒಂದು. ಉಪನಯನ ಸಂಸ್ಕಾರದಲ್ಲಿ ಯಜ್ಞೋಪವೀತದ ಧಾರಣೆಯಾಗುತ್ತದೆ. ಉಪನಯನಕ್ಕೆ ಯಜ್ಞೋಪವೀತ ಸಂಸ್ಕಾರ ಎಂಬ ಹೆಸರೂ ಇದೆ. ಮುಂಡನ ಹಾಗೂ ಪವಿತ್ರ ಜಲದಲ್ಲಿ ಸ್ನಾನ ಉಪನಯನ ಸಂಸ್ಕಾರದ ಅಂಗಗಳಾಗಿವೆ.

ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ಅನೇಕ ನಿಯಮಗಳನ್ನು ಅನಿವಾರ್ಯವಾಗಿ ಪಾಲಿಸಲೇಬೇಕಾಗುತ್ತದೆ. ಒಂದು ಸಲ ಜನಿವಾರವನ್ನು ಧರಿಸಿದ ಮೇಲೆ ಯಾವುದೇ ಕಾರಣಕ್ಕೂ ಜನಿವಾರವನ್ನು ಧರಿಸದೇ ಬಿಡುವಂತಿಲ್ಲ. ಜನಿವಾರ ಹಳೆಯದಾದರೆ, ಅದನ್ನು ವಿಸರ್ಜಿಸಿ ಕೂಡಲೇ ಹೊಸ ಜನಿವಾರವನ್ನು ಧರಿಸ ಬೇಕಾಗುತ್ತದೆ.

ಪ್ರತಿಯೊಬ್ಬ ಹಿಂದುವೂ ಜನಿವಾರವನ್ನು ಧರಿಸಬಹುದು. ಅದಕ್ಕೆ ಯಾವುದೇ ಅಡೆತಡೆಗಳಿಲ್ಲ. ಆದರೆ ಜನಿವಾರವನ್ನು ಧರಿಸಿದ ಮೇಲೆ ಅದರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಆಗಲೇ ಯಜ್ಞೋಪವೀತ ಧಾರಣೆಯ ಉದ್ದೇಶ ಸಫಲವಾಗುತ್ತದೆ. ನಿಯಮಗಳನ್ನು ಪಾಲಿಸದ ವ್ಯಕ್ತಿಯ ಯಜ್ಞೋಪವೀತ ಕೇವಲ ನೂಲಿನ ಎಳೆಯಾಗಿರುತ್ತದೆ.

ಬ್ರಹ್ಮಚಾರಿಗಳು ಒಂದು ಯಜ್ಞೋಪವೀತ, ಗೃಹಸ್ಥರು ಎರಡು ಯಜ್ಞೋಪವೀತಗಳನ್ನು ಧರಿಸಬೇಕೆಂದು ಶಾಸ್ತ್ರಗಳು ಹೇಳಿವೆ. ಗೃಹಸ್ಥರ ಒಂದು ಯಜ್ಞೋಪವೀತ ಅವರ ಜೀವನ ಸಂಗಾತಿಗೆ ಮುಡಿಪಾಗಿರುತ್ತದೆ.

ಯಜ್ಞೋಪವೀತದಲ್ಲಿ ಮೂರು ಎಳೆಗಳಿರುತ್ತವೆ. ಮೊದಲನೇ ಎಳೆ ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿಗಳ ಪ್ರತೀಕವಾಗಿದೆ. ಎರಡನೆಯ ಎಳೆ ದೇವ ಋಣ, ಪಿತೃ ಋಣ, ಋಷಿ ಋಣಿಗಳ ಪ್ರತೀಕವಾಗಿದೆ. ಮೂರನೆಯ ಎಳೆ ಸತ್ವ ಗುಣ, ರಜೋ ಗುಣ, ತಮೋ ಗುಣಗಳ ಪ್ರತೀಕವಾಗಿದೆ. ಮೂರು ಪ್ರಮುಖ ಎಳೆಗಳಲ್ಲಿ ಒಂದೊಂದರಲ್ಲಿ ಪುನಃ ಮೂರು ಉಪ ಎಳೆಗಳಿರುತ್ತವೆ. ಹಾಗಾಗಿ ಒಟ್ಟು ಯಜ್ಞೋಪವೀತದಲ್ಲಿರುವ ಎಳೆಗಳು ಒಂಬತ್ತು. ಒಂದು ಮುಖ, ಎರಡು ಮೂಗಿನ ಹೊಳ್ಳೆಗಳು, ಎರಡು ಕಣ್ಣುಗಳು, ಎರಡು ಕಿವಿಗಳು, ಮಲ ಹಾಗೂ ಮೂತ್ರ ದ್ವಾರಗಳಿಂದ ಒಂದು ಶರೀರದ ರಚನೆಯಾಗುತ್ತದೆ. ಹಾಗೇ ಯಜ್ಞೋಪವೀತವೂ ಸಹ ಒಂಬತ್ತು ಎಳೆಗಳಿಂದ ಜೀವಾತ್ಮವನ್ನು ಪ್ರತಿನಿಧಿಸುತ್ತದೆ. ಹಾಗೇ ಬಾಯಿಯಿಂದ ಒಳ್ಳೆಯ ಮಾತು, ಒಳ್ಳೆಯ ಆಹಾರಗಳನ್ನು ಸೇವಿಸಬೇಕು, ಕಣ್ಣಿನಿಂದ ಒಳ್ಳೆಯ ವಿಷಯಗಳನ್ನು ನೋಡಬೇಕು, ಕಿವಿಯಿಂದ ಒಳ್ಳೆಯ ವಿಷಯಗಳನ್ನು ಕೇಳಬೇಕೆಂಬ ತತ್ವವನ್ನೂ ಯಜ್ಞೋಪವೀತ ಸಾರುತ್ತದೆ.

ಯಜ್ಞೋಪವೀತದಲ್ಲಿರುವ ಬ್ರಹ್ಮಗಂಟು ಐದು ಗಂಟುಗಳಿಂದ ಕೂಡಿರುತ್ತದೆ. ಐದು ಗಂಟುಗಳು ಬ್ರಹ್ಮಜ್ಞಾನ, ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷದ ಪ್ರತೀಕವಾಗಿದೆ. ಹಾಗೇ ಪಂಚ ಯಜ್ಞ, ಪಂಚ ಜ್ಞಾನೇಂದ್ರಿಯ, ಪಂಚ ಕರ್ಮಗಳನ್ನು ಪ್ರತಿನಿಧಿಸುತ್ತದೆ.

ಯಜ್ಞೋಪವೀತದ ಉದ್ದ ತೊಂಬತ್ತಾರು ಇಂಚುಗಳಷ್ಟಿರ ಬೇಕು. ಏಕೆಂದರೆ ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿಗೆ ಅರವತ್ತ ನಾಲ್ಕು ಕಲೆಗಳನ್ನು ಹಾಗೂ ಮೂವತ್ತೆರಡು ವಿದ್ಯೆಗಳನ್ನು ಕಲಿಯುವ ಹಂಬಲವಿರ ಬೇಕು. ಆತ ಆ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ನಾಲ್ಕು ವೇದಗಳು, ನಾಲ್ಕು ಉಪವೇದಗಳು, ಆರು ಅಂಗಗಳು, ಆರು ದರ್ಶನಗಳು, ಮೂರು ಸೂತ್ರ ಗ್ರಂಥಗಳು, ಒಂಬತ್ತು ಅರಣ್ಯಕಗಳನ್ನು ಸೇರಿಸಿದರೆ ಮೂವತ್ತೆರಡು ವಿದ್ಯೆಗಳಾಗುತ್ತವೆ. ವಾಸ್ತು ನಿರ್ಮಾಣ, ಚಿತ್ರಕಲೆ, ಸಾಹಿತ್ಯ, ಯಂತ್ರ ನಿರ್ಮಾಣ, ಆಭರಣ ತಯಾರಿಕೆ, ಕೃಷಿ ಜ್ಞಾನ ಮುಂತಾದವು. ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ಈ ವಿದ್ಯೆಗಳನ್ನು ಕಲಿಯಲು ಪ್ರಯತ್ನಿಸಬೇಕೆಂದು ಶಾಸ್ತ್ರಗಳು ತಿಳಿಸುತ್ತವೆ.

ಯಜ್ಞೋಪವೀತದ ಧಾರಣೆ ಗಾಯತ್ರಿ ಮಂತ್ರದಿಂದಾಗುತ್ತದೆ ಗಾಯತ್ರಿ ಮಂತ್ರ ಹಾಗೂ ಯಜ್ಞೋಪವೀತದ ಸಮ್ಮಿಲನವೇ ದ್ವಿಜತ್ವ. ಯಜ್ಞೋಪವೀತದಲ್ಲಿ ಮೂರು ಎಳೆಗಳಿರುತ್ತವೆ. ಹಾಗೇ ಗಾಯತ್ರಿ ಮಂತ್ರದಲ್ಲೂ ಸಹ ಮೂರು ಚರಣಗಳಿವೆ. ತತ್ಸವಿತುರ್ವರೇಣ್ಯಮ್ ಮೊದಲ ಚರಣ. ಭರ್ಗೋ ದೇವಸ್ಯ ಧೀಮಹೀ ಎರಡನೇ ಚರಣ. ಧಿಯೋ ಯೋನಃ ಪ್ರಚೋದಯಾತ್ ಮೂರನೇ ಚರಣ.

ಯಜ್ಞೋಪವೀತವನ್ನು ಧರಿಸುವಾಗ ಹೇಳುವ ಮಂತ್ರ
ಯಜ್ಞೋಪವೀತಂ ಪರಮಂ ಪವಿತ್ರಂ ಪ್ರಜಾಪತೇರ್ಯತ್ಸಹಜಂ ಪುರಸ್ತಾತ್‌
ಆಯುಷ್ಯಮಗ್ರಂ ಪ್ರತಿಮುಂಚ ಶುಭ್ರಂ ಯಜ್ಞೋಪವೀತಂ ಬಲಮಸ್ತು ತೇಜಃ

ಅರ್ಥ
ಯಜ್ಞೋಪವೀತ ಪರಮ ಪವಿತ್ರವಾದದ್ದು, ಪ್ರಜಾಪತಿಗಿಂತಲೂ ಮೊದಲೇ ಉತ್ಪನ್ನಗೊಂಡಿದ್ದು,ಆಯುಷ್ಯವನ್ನು ಹೆಚ್ಚಿಸುವಂತದ್ದು, ಮನುಷ್ಯನನ್ನು ಶುಭ್ರ ಮಾಡುವಂತದ್ದು, ಯಜ್ಞೋಪವೀತ ನಮ್ಮ ಬಲ ಹಾಗೂ ತೇಜಸ್ಸನ್ನು ಹೆಚ್ಚಿಸುವಂತದ್ದು. ಹಾಗಾಗಿ ಯಜ್ಞೋಪವೀತ ಧಾರಣೆಗೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಮಹತ್ವವನ್ನು ನೀಡಲಾಗಿದೆ.

ಯಜ್ಞೋಪವೀತದ ನಿಯಮಗಳು

  • ಮಲ, ಮೂತ್ರಗಳನ್ನು ವಿಸರ್ಜಿಸುವಾಗ ಜನಿವಾರವನ್ನು ಎಡಗಿವಿಯ ಮೇಲೆ ಹಾಕಿಕೊಳ್ಳಬೇಕು. ಕೈ, ಕಾಲುಗಳನ್ನು ತೊಳೆದು ಶುಚಿಯಾದ ಬಳಿಕವಷ್ಟೇ ಅದನ್ನು ಪುನಃ ಸರಿ ಮಾಡಿಕೊಳ್ಳಬೇಕು. ಏಕೆಂದರೆ ಯಜ್ಞೋಪವೀತ ಸೊಂಟದ ಭಾಗಕ್ಕಿಂತ ಮೇಲಿದ್ದರೆ ಅಶುಚಿ ಆಗುವುದಿಲ್ಲ.
  • ಯಜ್ಞೋಪವೀತದ ಎಳೆ ತುಂಡಾದರೆ ತಕ್ಷಣ ಬದಲಿಸಬೇಕು. ತುಂಡಾಗಿರುವ ಜನಿವಾರವನ್ನು ಧರಿಸಿರಬಾರದು. ಯಜ್ಞೋಪವೀತ ಹಳೆಯದಾದರೆ ಆದಷ್ಟು ಬೇಗ ಅದನ್ನು ಬದಲಿಸಬೇಕು.
  • ಜನ್ಮ ಹಾಗೂ ಮರಣದ ಸೂತಕದ ನಂತರ ಯಜ್ಞೋಪವೀತವನ್ನು ಬದಲಿಸ ಬೇಕು.
  • ಯಜ್ಞೋಪವೀತವನ್ನು ಶರೀರದಿಂದ ಹೊರಗೆ ತೆಗೆಯ ಬಾರದು. ಯಜ್ಞೋಪವೀತವನ್ನು ಸ್ವಚ್ಛ ಮಾಡ ಬೇಕೆಂದರೆ ಕತ್ತಿನಲ್ಲಿ ಧರಿಸಿ ತೊಳೆಯ ಬಹುದು.

ಯಜ್ಞೋಪವೀತದ ವೈಜ್ಞಾನಿಕ ಮಹತ್ವ

  • ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ನಿಯಮಗಳಿಂದ ಬಂಧಿತನಾಗುತ್ತಾನೆ. ಅದು ವ್ಯಕ್ತಿಯನ್ನು ಸಾತ್ವಿಕ ಜೀವನದತ್ತ ಕೊಂಡೊಯ್ಯುತ್ತದೆ. ಸಾತ್ವಿಕ ಆಹಾರ ಹಾಗೂ ಸಾತ್ವಿಕ ಜೀವನವನ್ನು ನಡೆಸುವುದರಿಂದ ವ್ಯಕ್ತಿ ದೈಹಿಕ ಆರೋಗ್ಯವನ್ನು ಪಡೆದು ದೀರ್ಘಾಯುಷ್ಯವನ್ನು ಹೊಂದುತ್ತಾನೆ. ಮಲ, ಮೂತ್ರ ವಿಸರ್ಜನೆಯ ನಂತರ ತನ್ನ ಮುಖ, ಹಲ್ಲುಗಳನ್ನು ಸ್ವಚ್ಛಪಡಿಸಿಕೊಳ್ಳುವುದರಿಂದ ವಿಷಾಣುಗಳು ನಾಶಗೊಳ್ಳುತ್ತವೆ.
  • ಬಲಗಿವಿಯ ಭಾಗದಲ್ಲಿರುವ ಒಂದು ವಿಶೇಷ ನರ ಉದರ ಭಾಗವನ್ನುಸಂಪರ್ಕಿಸುತ್ತದೆ. ಮಲ ಮೂತ್ರ ವಿಸರ್ಜನೆಯ ಸಮಯದಲ್ಲಿ ಜನಿವಾರವನ್ನು ಬಲಗಿವಿಯ ಮೇಲೆ ಹಾಕಿ ಕೊಂಡಾಗ ಆ ನರದ ಉತ್ತೇಜನವಾಗುತ್ತದೆ. ಇದರಿಂದ ಜೀರ್ಣ ಸಂಬಂಧಿ ಪ್ರಕ್ರಿಯೆಗಳುಸುಗಮವಾಗಿ ನಡೆಯುತ್ತವೆ. ಎಸಿಡಿಟಿ, ಉದರ ಸಂಬಂಧಿ ರೋಗಗಳು, ಮೂತ್ರೇಂದ್ರಿಯ ರೋಗಗಳು, ರಕ್ತದೊತ್ತಡ, ಹೃದಯ ಸಂಬಂಧಿ ರೋಗಗಳು ಹಾಗೂ ಹಲವು ಸಾಂಕ್ರಾಮಿಕ ರೋಗಗಳಿಂದ ಮುಕ್ತಿ ಸಿಗುತ್ತದೆ.
  • ಚಿಕಿತ್ಸಾ ವಿಜ್ಞಾನದ ಪ್ರಕಾರ ಬಲಗಿವಿಯ ನರ ಗುಪ್ತೇಂದ್ರಿಯಗಳ ಜೊತೆ ಸಂಪರ್ಕವನ್ನು ಹೊಂದಿದೆ. ಮೂತ್ರ ವಿಸರ್ಜನೆಯ ಸಮಯದಲ್ಲಿ ಯಜ್ಞೋಪವೀತವನ್ನು ಬಲಗಿವಿಯ ಮೇಲೆ ಹಾಕಿ ಕೊಂಡಾಗ ಶುಕ್ರಾಣುಗಳ ರಕ್ಷಣೆಯಾಗುತ್ತದೆ.
  • ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿಗೆ ಭಯ ಹಾಗೂ ದುಃಸ್ವಪ್ನಗಳ ಸಮಸ್ಯೆ ಕಾಡುವುದಿಲ್ಲ.
  • ಯಜ್ಞೋಪವೀತವನ್ನು ಧರಿಸುವುದರಿಂದ ದೇಹದಲ್ಲಿರುವ ಸೂರ್ಯ ನಾಡಿ ಜಾಗೃತವಾಗಿರುತ್ತದೆ.
  • ವ್ಯಕ್ತಿಯ ಎಡ ಬೆನ್ನಿನ ಭಾಗದಲ್ಲಿ ಹೊಟ್ಟೆಯ ಕಡೆ ಸಾಗುವ ಒಂದು ಪ್ರಾಕೃತಿಕ ರೇಖೆಯಿರುತ್ತದೆ. ಈ ರೇಖೆ ವಿದ್ಯುತ್ ಪ್ರವಾಹದಂತೇ ಕಾರ್ಯ ನಿರ್ವಹಿಸುತ್ತಿರುತ್ತದೆ. ಯಜ್ಞೋಪವೀತವನ್ನು ಧರಿಸುವುದರಿಂದ ಈ ರೇಖೆಯ ಶಕ್ತಿ ಕಡಿಮೆಯಾಗುತ್ತದೆ. ಆಗ ವ್ಯಕ್ತಿಯ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳು ನಿಯಂತ್ರಣವಾಗುತ್ತವೆ.
  • ಯಜ್ಞೋಪವೀತ ವ್ಯಕ್ತಿಯ ಅಂತಃಪ್ರೇರಣೆಯನ್ನು ಜಾಗೃತಗೊಳಿಸಿ ಸನ್ಮಾರ್ಗದಲ್ಲಿ ನಡೆಯುವಂತೇ ಪ್ರೇರೇಪಿಸುತ್ತದೆ. ವ್ಯಕ್ತಿಯನ್ನು ಅನ್ಯಾಯ, ಅನೀತಿ, ಭ್ರಷ್ಟಾಚಾರಗಳಿಂದ ದೂರವಿರಿಸುತ್ತದೆ.
  • ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಿಸುವಾಗ ಕಿವಿಯನ್ನುಹಿಂಡಲಾಗುತ್ತಿತ್ತು. ಇದಕ್ಕೆ ಕಾರಣ ಕಿವಿಗೂ ಹಾಗೂ ಮೆದುಳಿಗೂ ಇರುವ ಸಂಪರ್ಕ. ಕಿವಿಯನ್ನು ಎಳೆದಾಗ ವಿದ್ಯಾರ್ಥಿಯ ಮೆದುಳು ಜಾಗೃತವಾಗುತ್ತಿತ್ತು. ವಿದ್ಯಾರ್ಥಿಯ ಆಲಸ್ಯತನ ದೂರವಾಗುತ್ತಿತ್ತು. ಹಾಗೇಯಜ್ಞೋಪವೀತವನ್ನೂ ಕಿವಿಯ ಮೇಲೆ ಹಾಕಿ ಕೊಂಡಾಗ ನಮ್ಮಲ್ಲಿರುವ ಆಲಸ್ಯತನ ದೂರಾಗಿ ಶರೀರ ಚಟುವಟಿಕೆಯಿಂದ ಕೂಡಿರುತ್ತದೆ.ಹೀಗೆ ಯಜ್ಞೋಪವೀತ ಸಂಸ್ಕಾರ ಎಂಬುದು ಪರಮ ಪವಿತ್ರ ಹಾಗೂ ವೈಜ್ಞಾನಿಕ ಹಿನ್ನೆಲೆಯಿರುವ ಸಂಸ್ಕಾರ. ಯಜ್ಞೋಪವೀತ ಧಾರಣೆ ಪ್ರತಿಯೊಬ್ಬ ಹಿಂದೂವಿನ ಕರ್ತವ್ಯ. ಇದರಿಂದ ವ್ಯಕ್ತಿಯ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಸಾಧ್ಯ.

ನಾಳೆ ಉಪನಯನ ಎಂದರೇನು? ಲೇಖನ ಸರಣಿ-6: ಪ್ರಾಣಾಯಾಮ ಎಂದರೇನು?


Get in Touch With Us info@kalpa.news Whatsapp: 9481252093

Tags: Dr. Gururaja PoshettihalliJanivaraKannadaNewsWebsiteLatestNewsKannadaUpanayanaಉಪನಯನಜನಿವಾರಪ್ರಾಣಾಯಾಮಯಜ್ಞೋಪವೀತ
Previous Post

ಜೂನ್ 1ರಿಂದ ಜನಶತಾಬ್ದಿ ರೈಲು ಸಂಚಾರ: ಪ್ರಯಾಣಿಕರು ಪಾಲಿಸಬೇಕಾದ ಕಡ್ಡಾಯ ನಿಯಮಗಳೇನು?

Next Post

ಆರೋಗ್ಯ ಸೇತು ಅಪ್ಲಿಕೇಶನ್ ಪ್ರತಿಯೊಬ್ಬ ನಾಗರಿಕನ ಸುರಕ್ಷಾ ಕವಚವಿದ್ದಂತೆ: ಸಚಿವ ಡಾ.ಕೆ.ಸುಧಾಕರ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಆರೋಗ್ಯ ಸೇತು ಅಪ್ಲಿಕೇಶನ್ ಪ್ರತಿಯೊಬ್ಬ ನಾಗರಿಕನ ಸುರಕ್ಷಾ ಕವಚವಿದ್ದಂತೆ: ಸಚಿವ ಡಾ.ಕೆ.ಸುಧಾಕರ್

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/https://kalahamsa.in/services/https://kalahamsa.in/services/

Recent News

ಇನ್ಮುಂದೆ ಕನ್ನಡದಲ್ಲೇ ದೊರೆಯಲಿದೆ ಮೆಡಿಕಲ್, ಇಂಜಿನಿಯರಿಂಗ್ ಶಿಕ್ಷಣ: ಪ್ರಧಾನಿ ಮೋದಿ

March 25, 2023

ಸೇನಾ ಹೆಲಿಕಾಪ್ಟರ್’ನಲ್ಲಿ ಶಿವಮೊಗ್ಗಕ್ಕೆ ಆಗಮಿಸಿ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದ ಪ್ರಧಾನಿ ಮೋದಿ

March 25, 2023

ಕಾಂಗ್ರೆಸ್ ಮೊದಲ ಪಟ್ಟಿ: ಡಿ.ಕೆ. ರವಿ ಪತ್ನಿ ಸೇರಿ ಆರು ಮಹಿಳೆಯರಿಗೆ ಟಿಕೇಟ್

March 25, 2023

ಕೌಂಟರ್’ನಲ್ಲಿ ಟಿಕೇಟ್ ಖರೀದಿಸಿ ಮೆಟ್ರೋದಲ್ಲಿ ಪ್ರಯಾಣಿಸಿದ ಪ್ರಧಾನಿ ಮೋದಿ: ಟಿಕೇಟ್ ನೀಡಿದ್ದು ಯಾರು?

March 25, 2023
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಇನ್ಮುಂದೆ ಕನ್ನಡದಲ್ಲೇ ದೊರೆಯಲಿದೆ ಮೆಡಿಕಲ್, ಇಂಜಿನಿಯರಿಂಗ್ ಶಿಕ್ಷಣ: ಪ್ರಧಾನಿ ಮೋದಿ

March 25, 2023

ಸೇನಾ ಹೆಲಿಕಾಪ್ಟರ್’ನಲ್ಲಿ ಶಿವಮೊಗ್ಗಕ್ಕೆ ಆಗಮಿಸಿ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದ ಪ್ರಧಾನಿ ಮೋದಿ

March 25, 2023

ಕಾಂಗ್ರೆಸ್ ಮೊದಲ ಪಟ್ಟಿ: ಡಿ.ಕೆ. ರವಿ ಪತ್ನಿ ಸೇರಿ ಆರು ಮಹಿಳೆಯರಿಗೆ ಟಿಕೇಟ್

March 25, 2023
  • About
  • Advertise
  • Privacy & Policy
  • Contact

© 2022 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2022 Kalpa News - All Rights Reserved | Powered by Kalahamsa Infotech Pvt. ltd.

Login to your account below

Forgotten Password?

Fill the forms bellow to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!