ಕಲ್ಪ ಮೀಡಿಯಾ ಹೌಸ್ | ಅಯೋಧ್ಯಾ |
ಜ.22ರ ನಾಳೆ ಅಯೋಧ್ಯೆಯಲ್ಲಿ #Ayodhya ನಡೆಯಲಿರುವ ಐತಿಹಾಸಿಕ ರಾಮಲಲ್ಲಾ ಮೂರ್ತಿಯ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ದೇಶದ ಮಾತ್ರವಲ್ಲ ವಿದೇಶಗಳೂ ಸಹ ಕಣ್ತುಂಬಿಕೊಳ್ಳಲು ಕಾಯುತ್ತಿವೆ.
ನಾಳೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ #PMNarendraModi ಸೇರಿದಂತೆ ದೇಶ ವಿದೇಶಗಳ ಗಣ್ಯಾತಿಗಣ್ಯರು ಪಾಲ್ಗೊಳ್ಳಲಿದ್ದು, ಇದರಲ್ಲಿ 19 ಕುಟುಂಬಗಳು ಅತ್ಯಂತ ಪ್ರಮುಖವಾಗಿವೆ.
ಹೌದು…
ಅಯೋಧ್ಯೆಗೆ ತೆರಳಿ ಮರಳುತ್ತಿದ್ದ ಕರಸೇವಕರಿದ್ದ ಗೋಧ್ರಾ ರೈಲಿನ ಸಬರಮತಿ #SabarmatiExpress ಕೋಚ್’ಗಳಿಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದರು. ಈ ದುರಂತದಲ್ಲಿ 39 ಕರಸೇವಕರು ಜೀವಂತವಾಗಿ ದಹನಗೊಂಡಿದ್ದರು.
ರಾಮನಿಗಾಗಿ #LordRama ತಮ್ಮ ಜೀವವನ್ನೇ ತ್ಯಾಗ ಮಾಡಿದ ಈ ಮಹಾನ್ ವ್ಯಕ್ತಿಗಳ ಕುಟುಂಬಸ್ಥರನ್ನು ಪ್ರಾಣಪ್ರತಿಷ್ಠೆಗೆ ಆಹ್ವಾನಿಸಿ, ಗೌರವ ಸೂಚಿಸಲು ಮಂದಿರ ಟ್ರಸ್ಟ್ ತೀರ್ಮಾನ ಮಾಡಿತ್ತು.
39 ಕರಸೇವಕರ ಪೈಕಿ 20 ಮಂದಿ ಕರಸೇವಕರ ಸಂಪರ್ಕ ವಿವರಗಳು ರಾಮ ಜನ್ಮಭೂಮಿ ಟ್ರಸ್ಟ್ ಮುಖ್ಯಸ್ಥರಿಗೆ ದೊರೆತಿದೆ ಎಂದು ವರದಿಯಾಗಿದೆ.
ಹುತಾತ್ಮರಾಗಿದ್ದ ಕರಸೇವಕರ ಪೈಕಿ 20 ಮಂದಿಯ ಕುಟುಂಬಸ್ಥರನ್ನು ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಇದರಲ್ಲಿ 19 ಕುಟುಂಬಗಳು ಪಾಲ್ಗೊಳ್ಳುವುದನ್ನು ಖಚಿತಪಡಿಸಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















