ಬೆಂಗಳೂರು: ದರ್ಶನ್ ಹಾಗೂ ಯಶ್ ವಿಚಾರವಾಗಿ ಯಾರು ಏನಾದರೂ ಹೇಳಲಿ, ನಾವು ಪ್ರತಿಕ್ರಿಯಿಸುವುದಿಲ್ಲ ಎಂದು ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಸುಮಲತಾಗೆ ಬಿಜೆಪಿ ಬೆಂಬಲ ಘೋಷಿಸಿರುವ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿ, ಕೃತಜ್ಞತೆ ಸಲ್ಲಿಸಿದ ನಂತರ ಅವರು ಮಾತನಾಡಿದರು.
ದರ್ಶನ್ ಮತ್ತು ಯಶ್ ಬಗ್ಗೆ ಮುಖ್ಯಮಂತ್ರಿ ಏನು ಬೇಕಾದರು ಮಾತಾಡಲಿ, ನಾನು ಅದರ ಬಗ್ಗೆ ಏನನ್ನು ಹೇಳುವುದಿಲ್ಲ. ದರ್ಶನ ಕೂಡ ಇದನ್ನೇ ಹೇಳಿದ್ದು, ಯಾರು ಏನು ಬೇಕಾದರು ಮಾತಾನಾಡಲಿ. ನಾವು ಜನರ ಜತೆಯಲ್ಲೇ ಇರುತ್ತೇವೆ. ಗೆದ್ದ ಬಳಿಕ ಮುಂದೇನು ಎಂಬುದನ್ನು ಕೂಡ ಜನರನ್ನೇ ಕೇಳುತ್ತೇವೆ ಎಂದರು.
ಮಂಡ್ಯದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದೇ ತಮಗೆ ಅಧಿಕೃತ ಬೆಂಬಲ ಘೋಷಿಸಿರುವುದಕ್ಕೆ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಬಿಜೆಪಿಗೆ ಸುಮಲತಾ ಕೃತಜ್ಞತೆ ಸಲ್ಲಿಸಿದ್ದಾರೆ.

















