ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನಾವು ಆರಾಧನೆ ಮಾಡುವ ದೇವರ ಚಿತ್ರಗಳನ್ನು ನೋಡಿ. ಶಿವನಿಗೆ ಕಾಳಸರ್ಪ ಕಂಠ ಹಾರ, ಗಣಪತಿಗೆ ಹೊಟ್ಟೆಯಲ್ಲಿ ಸರ್ಪ ಬಂಧನ, ಸುಬ್ರಹ್ಮಣ್ಯನ ಚಿತ್ರದಲ್ಲಿ ಸರ್ಪನನ್ನು ತುಳಿದು ನಿಂತ ಮಯೂರ, ಇನ್ನು ನೃಸಿಂಹ ದೇವರು ಸರ್ಪನ ಆಸನದಲ್ಲೇ ಪವಡಿಸಿದ್ದು, ವಿಷ್ಣುವಂತೂ ಶೇಷ ಶಯನ.
ಮಹಾಕಾಳಿಯ ಕೈಯಲ್ಲೇ ಸರ್ಪನ ಅಸ್ತ್ರ. ಪರಶಿವನ ಕಂಠದಲ್ಲೇ ಸ್ವಲ್ಪ ನೀಲವರ್ಣ ಹಚ್ಚಿದರು. ವಿಷ್ಣು, ಶಿವನನ್ನು ನೀಲವರ್ಣದಲ್ಲೇ ಚಿತ್ರಿಸಿದರು. ಇದೆಲ್ಲಾ ಏನನ್ನು ಸೂಚಿಸಿದೆ? ಭಕ್ತರು ಭಾವನಾತ್ಮಕವಾಗಿ ನೋಡಿದರೆ, ಕಲಾಕಾರರು ಚಿತ್ರ ಕಲೆಯನ್ನು ಗಮನಿಸುತ್ತಾರೆ. ಇದಕ್ಕೆಲ್ಲ ಪ್ರೇರಣೆ ನೀಡಿದವರು ಪುರಾಣ ಋಷಿಮುನಿಗಳು. ಅಂದರೆ ಸಂಶೋಧಕ ವಿಜ್ಞಾನಿಗಳು.
ಜ್ಯೋತಿಷ್ಯ ಚಕ್ರದಲ್ಲಿ ಆದಿತ್ಯಾದಿ ಸಪ್ತ ಗ್ರಹರ ಜತೆಗೆ ರಾಹು ಕೇತುಗಳನ್ನು ಛಾಯಾಗ್ರಹರನ್ನಾಗಿ ಬಳಸಿಕೊಂಡರು. ರಾಹು ಕೇತುಗಳು ಕಾಯ ಇಲ್ಲದ ಗ್ರಹರು.
ಆ ಕಾಲದಲ್ಲಿ ಎಲ್ಲರಿಗೂ ಇದರ ವಿವರಣೆಯ ಅಗತ್ಯ ಇರಲಿಲ್ಲ. ಕೇವಲ ಸಂಶೋಧಕ ಪಂಡಿತರುಗಳಿಗೆ, ವಿಜ್ಞಾನಿಗಳಿಗೆ, ಇದನ್ನು ಅನುಮೋದಿಸುವ ರಾಜನಿಗೆ ಮಾತ್ರ ತಿಳಿದರೆ ಸಾಕಾಗುತ್ತಿತ್ತು. ಆದರೆ ಈಗ ಪ್ರತಿಯೊಬ್ಬರಿಗೂ ತಿಳಿದುಕೊಳ್ಳುವ ಆಸಕ್ತಿ. ತಿಳುವಳಿಕೆ ಇಲ್ಲದಿದ್ದರೆ ನಂಬುವುದೇ ಇಲ್ಲ. ನಂಬದೆ ಹೋದರೆ ಅಪಾಯವು ಕಟ್ಟಿಟ್ಟ ಬುತ್ತಿಯೇ ಆಗುತ್ತದೆ. ಅನಾಚಾರಕ್ಕಿಳಿಯಬಹುದು. ಅನಾಚಾರಕ್ಕೆ ಇಳಿಯುವವರು ತಿಳುವಳಿಕೆ ಇಲ್ಲದ ಅಲ್ಪ ಜ್ಞಾನಿಗಳು.
ಯಾಕೆ ರಾಹು ಕೇತು, ನೀಲ ವರ್ಣ?
ಯಾಕೆ ವಿಷಯುಕ್ತ ಹಾವುಗಳ ಚಿತ್ರದೊಂದಿಗೆ ದೇವಸ್ವರೂಪ? ಜೈನರ ದೇವರಲ್ಲಂತೂ ದೇವತೆಯನ್ನು ಹಾವು ಸುತ್ತಿಕೊಂಡೇ ಇರುತ್ತದೆ. ಯಾಕೆ?
ರಾಹು ಕೇತುಗಳು ಮೋಹ ದುಃಖಗಳ ಸಂಕೇತ. ನಿತ್ಯ ಗೋಚರದಲ್ಲಿ ಈ ಎರಡು ಗುಣಗಳು ಸಂಚರಿಸುತ್ತಿರುತ್ತದೆ. ಹಾವು ಎಂದಾಕ್ಷಣ ನಮಗೆ ನೆನಪಾಗುವುದೇ ವಿಷ. ವಿಷ ಎಂದರೆ ಸೈನೈಡ್. ಇದು ಜೀವಕ್ಕೆ ಅಪಾಯ. ಸೈನೈಡ್ ರೂಪ ಅನೇಕ Organic chemistryಯಲ್ಲಿ ಬರುವಂತಹ product. ಪೊಟೇಸ್ಯಂ, ಅಮೋನ್ಯಂ ಇತ್ಯಾದಿ ಕೆಮಿಕಲ್ ಸೈನೈಡ್’ಗಳಿವೆ. ಝಿಂಕ್ ಸೈನೈಡ್ ಅತ್ಯಂತ ವಿಷಕಾರಿ. ನಾವು ತಿನ್ನುವ ಆಹಾರದಲ್ಲೂ ಇದು ಸೇರಿರುತ್ತದೆ ಮತ್ತು ಉತ್ಪತ್ತಿಯಾಗುತ್ತದೆ. ಹಾಗಾಗಿ ರೋಗಗಳು ಬಂದು ಸಾಯೋದೂ ಕೂಡ. ಇದು ಶರೀರದಲ್ಲಿ ಬೇಕೇ ಬೇಕು. ಆದರೆ ನಿಯಂತ್ರಣದಲ್ಲಿ ಇರಬೇಕು. ನಿಯಂತ್ರಣ ಮೀರಿದರೆ ಮರಣವೇ. ಪ್ರಾಣಿಗಳಲ್ಲೂ ಇರುತ್ತದೆ. ಹೆಚ್ಚಿನ ಪ್ರಾಣಿಗಳಲ್ಲಿ ಇದು ಆಹಾರ ಒಳಹೊಕ್ಕಾಗ ಗಂಟಲಿನ ಭಾಗದಲ್ಲಿ ಸೇರಿಕೊಳ್ಳುತ್ತದೆ.
ಉದಾ: ಮೀನಿನ ತಲೆಯನ್ನು ಅಡುಗೆ ಮಾಡುವುದಿಲ್ಲ. ಬೆಕ್ಕು ನಾಯಿಗಳು ಅದನ್ನು ತಿಂದರೂ ಅವುಗಳ ಆರೋಗ್ಯ ಹಾಳಾಗುತ್ತದೆ. ಇಂತಹ ಪ್ರಾಣಿಗಳನ್ನು ಒಟ್ಟಾರೆ ತಿಂದರೆ ಕೊರೋನದಂತಹ ಮಹಾಮಾರಿಗಳು ಬರದೇ ಇರುತ್ತಾ? ಬೇಯಿಸಿದಾಗ ವಿಷ ಹೋಗುತ್ತದೆ ಎಂಬ ಮಾತಿದೆ. ನಾನು ಇದನ್ನು ಒಪ್ಪಲ್ಲ. ವಿಷವು ಡೈಲ್ಯೂಟ್ ಆಗಬಹುದಷ್ಟೇ ವಿನಃ ವಿಷ ಹೋಗಲಾರದು. ಮಾಂಸ ತಿನ್ನುವವರು ತಿನ್ನಲಿ. ಆದರೆ ಅದಕ್ಕೂ ನಿಯಮಗಳಿವೆ. ಇಂತಹ ಭಾಗವನ್ನೇ ತಿನ್ನಬೇಕು ಎಂದು ಇದೆ. ಮಾಂಸ ಮಾರುಕಟ್ಟೆಯಲ್ಲಿ ಅದನ್ನೇನೂ ಬೇರ್ಪಡಿಸಿ ಇಡುವುದಿಲ್ಲ. ಹಾಗಾಗಿ ವಿಷವೂ ಹೊಟ್ಟೆಗೆ ಹೋಗುತ್ತದೆ. ವಿಷ ಎಂದಾಕ್ಷಣ ಸತ್ತು ಹೋಗುವುದು ಎಂದರ್ಥವಲ್ಲ. ಸಾಯಲು ಶುರುವಾಗುವುದು ಎಂದರ್ಥ. ಚೈನಾ ದೇಶದಲ್ಲಿ ನಾವು ವೀಡ್ಯೋ ಮೂಲಕ ನೋಡಿದಂತೆ, ಹಸಿ ಮಾಂಸದ ಮಾರಾಟ ಕೇಂದ್ರಗಳೇ ಇವೆ. ಹಸಿಹಸಿಯಾಗಿ ತಿನ್ನುವವರಿಗಾಗಿಯೇ ಇದೆಲ್ಲ ಇರೋದು. (wet market) ಕೀಟಗಳಿಂದ ಹಿಡಿದು ಬೃಹತ್ ಗಾತ್ರದ ಪ್ರಾಣಿಗಳವರೆಗೆ ಗಂಟಲಲ್ಲಿ ವಿಷ ಇರುತ್ತದೆ. ಮಾನವನಲ್ಲೂ ಇದೆ. ಇದರ ಸಂಕೇತವನ್ನು ದೇವತಾ ಚಿತ್ರಗಳಲ್ಲಿ ತೋರಿಸಿದ್ದಾರೆ. ಅಂದರೆ ತಿನ್ನುವ ಆಹಾರದಲ್ಲಿ ನಿಯಂತ್ರಣ ಇರಲಿ, ನಿಯಮ ಇರಲಿ ಎಂದರ್ಥ.
ಆಹಾರ ನಿಯಮ
ಒಟ್ಟಾರೆ ಆಹಾರ ಮುಕ್ಕುವುದಕ್ಕೆ ರಾಕ್ಷಸ ಭೋಜನ ಎನ್ನುತ್ತಾರೆ. ಕಂಡ ಕಂಡಲ್ಲಿ ಮುಕ್ಕುವುದಕ್ಕೆ ಪ್ರಾಣಿ ಭೋಜನ ಎನ್ನುತ್ತಾರೆ. ಆದರೆ ಮನುಷ್ಯನ ಭೋಜನ ಹಾಗಲ್ಲ. ನಿಯಮಗಳಿವೆ. ಸಿಕ್ಕ ಸಿಕ್ಕದ್ದನ್ನು, ಕಾಲಾಕಾಲ ಇಲ್ಲದೆ ಮುಕ್ಕುವುದಲ್ಲ.
ನಿಯಮ
ಇದು ಕೇವಲ ಬ್ರಾಹ್ಮಣರಿಗೇ ಸೀಮಿತ ಎಂದು ತಿಳಿದುಕೊಳ್ಳಬೇಡಿ. ಇದು ಬ್ರಾಹ್ಮಣೇತರರೂ ಪಾಲಿಸಲೇ ಬೇಕಾದ ಕನಿಷ್ಟ ಕ್ರಮದ ನಿಯಮ.
1. ಸ್ನಾನ ಮಾಡದೆ ಊಟವಿಲ್ಲ.
2. ನಾವು ಉಣ್ಣುವ ಆಹಾರ ದೇವಾನ್ನ ಆಗಿರಬೇಕು. ದೇವಾನ್ನ ಎಂದರೆ ದೇವರಿಗೆ ಸಮರ್ಪಿಸಿದ್ದಾಗಬೇಕು. ಊಟಕ್ಕೆ ಕುಳಿತು ಮನದಲ್ಲೇ ದೇವರಿಗೆ ಸಮರ್ಪಿಸುವುದೂ ದೇವಾನ್ನವೇ. ಹರಿಪ್ರಿಯತಾಂ ಎಂದು ಊಟ ಶುರುಮಾಡಿ.
3. ಅನ್ನಕ್ಕೆ ನೀರು ಪ್ರೋಕ್ಷಣೆ ಮಾಡಿ ಪುಂಡರೀಕಾಕ್ಷನನ್ನು ನೆನೆಯಿರಿ
(ಅಪವಿತ್ರ ಪವಿತೋವಾ ಸರ್ವಾವಸ್ತಾಂಗತೋಪಿವಾ. ಯಃಸ್ಮರೇತ್ ಪುಂಡರೀಕಾಕ್ಷಂ ಸಭಾಹ್ಯಾಭ್ಯಂತರ ಶುಚಿಃ) ಭಾಹ್ಯ ಅಂತರದಲ್ಲಿ ಶುಚಿಯಾಗಲಿ ಎಂಬ ತಾತ್ಪರ್ಯ. ಬ್ರಾಹ್ಮಣರಲ್ಲಿ ಪರಿಶಿಂಚನ ಕ್ರಮವಿದೆ. ಎಲ್ಲರಿಗೂ, ಎಲ್ಲಾ ಕಡೆಯಲ್ಲೂ ಇದು ಅಸಾಧ್ಯ. ಅದಕ್ಕಾಗಿ ಪುಂಡರೀಕಾಕ್ಷನನ್ನು ನೆನೆದು ಪ್ರೋಕ್ಷಣೆ, ಹರಿಯನ್ನು ನೆನೆದು ಸಮರ್ಪಣೆ. ಇಷ್ಟು ಮಾಡಿದರೂ ಅದು ದೇವಾನ್ನ ಆಗುತ್ತದೆ. ಪ್ರಾಣ ಅಪಾನ, ವ್ಯಾನ, ಉದಾನ ಸಮಾನ ಎಂಬ ಪಂಚ ಪ್ರಾಣಾಹುತಿ ತೆಗೆದುಕೊಳ್ಳುವ ನಿಯಮವಿದೆ. ಅದು ಆಗದಿದ್ದರೆ ಪಂಚ ಪ್ರಾಣಗಳಿಗೆ ಆಹುತಿ ಎಂದು ಮೊದಲ ತುತ್ತು ಸೇವಿಸಿ. ಇದು ದೇವಾನ್ನ ಆಗುತ್ತದೆ.
4. ಪ್ರೇತಾನ್ನವಾಗಕೂಡದು. ಮೇಲೆ ಹೇಳಿದ ನಿಯಮ ತಪ್ಪಿದರೆ ಅದು ಪ್ರೇತಾನ್ನವೂ, ರಾಕ್ಷಸ ಭೋಜನವೂ ಆಗಿ ಅಪಥ್ಯವಾಗಿ, ರೋಗ ನಿರೋಧಕ ಶಕ್ತಿ ಕಳೆದುಕೊಳ್ಳುವಂತೆ ಮಾಡುತ್ತದೆ.
5. ಎಡದ ಕೈಯನ್ನು ಊಟಕ್ಕೆ ಉಪಯೋಗಿಸಬೇಡಿ. ನಾನು ನೋಡಿದ್ದೇನೆ. ಒಂದು ಚಪಾತಿ, ರೊಟ್ಟಿಯನ್ನು ತುಂಡು ಮಾಡಲು ಎರಡು ಕೈ ಉಪಯೋಗಿಸುತ್ತಾರೆ ಕೆಲವರು. ಪ್ರಾಣಿಗಳಿಗೆ ದೋಸೆ ಹಾಕಿದರೆ ಅದು ಅದರ ಕೈಯಿಯಿಂದ ಒತ್ತಿ ಹಿಡಿದು ಹರಿದು ತಿನ್ನುವ ತರಹ ಆ ರೀತಿ ತಿನ್ನುವವರು ಇದ್ದಾರೆ. ಮತ್ತೆ ಆ ಕೈಯನ್ನು ತೊಳೆದುಕೊಳ್ಳುವುದಿಲ್ಲ. ಇದು ಸರಿಯಾದ ಕ್ರಮವಲ್ಲ.
6.ಊಟದ ತಟ್ಟೆಯನ್ನು ಕಾಲ ಮೇಲೆ ಇಟ್ಟು ತಿನ್ನುವಂತದ್ದು. ಯಾಕೆಂದರೆ ಬಾಗಿ ತಿನ್ನಲು ಕಷ್ಟ ಆಗುತ್ತದೆ. ಆಹಾರದಲ್ಲಿ ತಿನ್ನಲಾಗದ ಕೆಲ ಮೆಣಸು ಕರಿಬೇವಿನ ಸೊಪ್ಪು ಇತ್ಯಾದಿಗಳನ್ನು ಅಲ್ಲೇ ಕೆಳಗೆ ಬಿಸಾಡುವುದು. ನಂತರ ಆ ನೆಲವನ್ನು ಶುಚಿ ಮಾಡದೇ ಇರುವುದು. ಇದೆಲ್ಲವೂ ಪ್ರೇತಾನ್ನವಾಗಲು ನಾವು ಮಾಡಿಕೊಳ್ಳುವ ದಾರಿ.
7. ಊಟ ಮುಗಿದ ತಕ್ಷಣ ಎದ್ದೇಳುವುದು. ಒಟ್ಟಿಗೆ ಕುಳಿತವರನ್ನು ಬಿಟ್ಟು ಏಳಬಾರದು. ಒಂದು ವೇಳೆ ಏಳಬೇಕಾಗಿದ್ದರೆ ಉಳಿದವರ ಒಪ್ಪಿಗೆ ಪಡೆಯಬೇಕು.
8. ಊಟ ಮುಗಿಸಿದ ನಂತರ ಸ್ವಲ್ಪ ನೀರು ಕುಡಿಯಬೇಕು. ಇದಕ್ಕೆ ವೈದಿಕರಲ್ಲಿ ತುಂಬಾ ಕ್ರಮವಿದೆ. ಅದಿರಲಿ. ಸಾಮಾನ್ಯರು ಹರಿಪ್ರಿಯತಾಂ ಎಂದು ಒಂದು ಚಮಚ ನೀರು ಕುಡಿದರೂ ಪಥ್ಯವೇ.
9. ಕೈ ತೊಳೆದು, ಕೈಗಳನ್ನು ಒರೆಸಿಕೊಳ್ಳುವುದು ಸಾಮಾನ್ಯ. ಆದರೆ ಇದಾದ ಮೇಲೆ ಅನ್ನಪೂರ್ಣೇಶ್ವರಿಯನ್ನೊಮ್ಮೆ ನೆನೆಯಿರಿ.
10. ಊಟ ಆದ ಮೇಲೆ ಆರು ಘಂಟೆಯ ನಂತರವೇ ಮತ್ತೊಮ್ಮೆ ಊಟ. ಇದು ಜಠರದ ನಿಯಮ. ಹಾಗಾಗಿ ಕನಿಷ್ಟ ಒಂದು ಘಂಟೆಯಾದರೂ ಆಹಾರ ಸೇವಿಸಬಾರದು. ಊಟ ಆದನಂತರ ಹಣ್ಣು ಸೇವನೆ ಆರೋಗ್ಯಕರ.
ಇಂತಹ ನಿಯಮ ಪಾಲಿಸಿಕೊಂಡು ಬಂದರೆ, ರೋಗಗಳು ಬಂದರೂ ಕೂಡಲೇ ಔಷಧಿಯ ಪರಿಣಾಮ ಸಿಗುತ್ತದೆ. ಮಾನಸಿಕ ಸ್ಥಿತಿಯೂ ಉತ್ತಮವಾಗುತ್ತದೆ.
Get in Touch With Us info@kalpa.news Whatsapp: 9481252093
Discussion about this post