ಕಲ್ಪ ಮೀಡಿಯಾ ಹೌಸ್ | ಲಖ್ನೋ |
ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದೇ ಇದ್ದರೆ ಎನ್ಸಿಪಿ ನಾಯಕ ಬಾಬಾ ಸಿದ್ದಿಕ್ ರೀತಿಯಲ್ಲೇ ಅವರನ್ನು ಸಹ ಹತ್ಯೆ ಮಾಡಲಾಗುವುದು ಎಂದು ದುಷ್ಕರ್ಮಿಗಳು ಬೆದರಿಗೆ ಹಾಕಿರುವ ಕುರಿತು ವರದಿಯಾಗಿದೆ.
ಈ ಕುರಿತಂತೆ ಮುಂಬೈ ಪೊಲೀಸರಿಗೆ ಬೆದರಿಕೆ ಸಂದೇಶ ದುಷ್ಕರ್ಮಿಗಳಿಂದ ಬಂದಿದ್ದು, ತನಿಖೆ ನಡೆದಿದೆ.
ಶನಿವಾರ ಸಂಜೆ ಪೊಲೀಸರಿಗೆ ಬಂದಿರುವ ಸಂದೇಶದಲ್ಲಿ ಯೋಗಿ 10 ದಿನದೊಳಗೆ ರಾಜೀನಾಮೆ ನೀಡದಿದ್ದಲ್ಲಿ ಅವರನ್ನು ಉಳಿಸಲಾಗುವುದು ಎಂದು ಹೇಳಲಾಗಿದೆ. ಮುಂಬೈ ಪೊಲೀಸ್ ಟ್ರಾಫಿಕ್ ಕಂಟ್ರೋಲ್ ಸೆಲ್‌ಗೆ ಅಪರಿಚಿತ ಸಂಖ್ಯೆಯಿಂದ ಬೆದರಿಕೆ ಬಂದಿದೆ.
ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಅವರನ್ನು ಅಕ್ಟೋಬರ್ 12 ರಂದು ಮುಂಬೈನ ನಿರ್ಮಲ್ ನಗರ ಪ್ರದೇಶದಲ್ಲಿ ಅವರ ಪುತ್ರ, ಶಾಸಕ ಜೀಶನ್ ಸಿದ್ದಿಕ್ ಅವರ ಕಚೇರಿ ಬಳಿ ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು.
ಎನ್‌ಸಿಪಿ ನಾಯಕನ ಹತ್ಯೆಯ ಹೊಣೆ ಹೊತ್ತಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್, ನಟ ಸಲ್ಮಾನ್ ಖಾನ್‌ನೊಂದಿಗಿನ ರಾಜಕಾರಣಿಯ ನಿಕಟ ಸಂಬಂಧವನ್ನು ಅವರು ಕೊಲ್ಲಲು ಒಂದು ಕಾರಣವೆಂದು ಉಲ್ಲೇಖಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post