ಕಲ್ಪ ಮೀಡಿಯಾ ಹೌಸ್ | ಯಶವಂತಪುರ |
ಮಹಾ ಶಿವರಾತ್ರಿ ಹಬ್ಬದ #Maha Shivarathri Festival ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ನೈಋತ್ಯ ರೈಲ್ವೆಯು ಯಶವಂತಪುರ ಮತ್ತು ಮಡಗಾಂವ್ ನಡುವೆ ಒಂದು ಟ್ರಿಪ್ ವಿಶೇಷ ರೈಲನ್ನು #Yeshawanthapura-Madgaon Special Train ಓಡಿಸಲಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಮಾಹಿತಿ ಪ್ರಕಟಿಸಿದ್ದು, ವಿವರಗಳು ಇಂತಿವೆ.
- 06507 ಸಂಖ್ಯೆಯ ಯಶವಂತಪುರ-ಮಡಗಾಂವ್ ವಿಶೇಷ ಎಕ್ಸ್’ಪ್ರೆಸ್ ರೈಲು 2026ರ ಫೆಬ್ರವರಿ 13ರ ಮಧ್ಯಾಹ್ನ 12.30 ಕ್ಕೆ
- ಯಶವಂತಪುರದಿಂದ ಹೊರಟು, ಮರುದಿನ ಬೆಳಿಗ್ಗೆ 06:45ಕ್ಕೆ ಮಡಗಾಂವ್ ತಲುಪಲಿದೆ.
- 06508 ಸಂಖ್ಯೆಯ ಮಡಗಾಂವ್-ಯಶವಂತಪುರ ವಿಶೇಷ ಎಕ್ಸ್’ಪ್ರೆಸ್ ರೈಲು 2026ರ ಫೆಬ್ರವರಿ 16ರ ಬೆಳಿಗ್ಗೆ 11:00 ಗಂಟೆಗೆ ಮಡಗಾಂವ್’ನಿಂದ ಹೊರಟು, ಮರುದಿನ ಬೆಳಿಗ್ಗೆ 04:45ಕ್ಕೆ ಯಶವಂತಪುರವನ್ನು ತಲುಪಲಿದೆ.
ಎಲ್ಲೆಲ್ಲಿ ನಿಲುಗಡೆ?
ಈ ವಿಶೇಷ ರೈಲುಗಳಿಗೆ ಚಿಕ್ಕಬಾಣಾವರ , ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಬಂಟವಾಳ, ಸುರತ್ಕಲ್, ಮುಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲಾ ಮತ್ತು ಕಾರವಾರ ನಿಲ್ದಾಣಗಳಲ್ಲಿ ನಿಲುಗಡೆಯನ್ನು ಒದಗಿಸಲಾಗಿದೆ.
ಎಷ್ಟು ಬೋಗಿ ಇರಲಿವೆ?
ಈ ರೈಲು 20 ಬೋಗಿಗಳನ್ನು ಒಳಗೊಂಡಿದ್ದು , ಇದರಲ್ಲಿ 1 ಪ್ರಥಮ ದರ್ಜೆ ಎಸಿ ಕಮ್ ಎಸಿ 2-ಟೈರ್ ಬೋಗಿ, 2 ಎಸಿ 2-ಟೈರ್ ಬೋಗಿಗಳು, 2 ಎಸಿ 3-ಟೈರ್ ಬೋಗಿಗಳು, 9 ಸ್ಲೀಪರ್ ಕ್ಲಾಸ್ ಬೋಗಿಗಳು, 4 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು 2 ಎಸ್’ಎಲ್’ಆರ್/ಡಿ ಬೋಗಿಗಳು ಸೇರಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















