ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಐಸಿಎಐ(The Institute of Chartered Accountants of India) ನಡೆಸಿದ ಸಿಎ ಮಧ್ಯಂತರ ಪರೀಕ್ಷೆಯಲ್ಲಿ ಶಿವಮೊಗ್ಗದ ದಕ್ಷಾ ಕೋಚಿಂಗ್ ಅಕಾಡೆಮಿಯ ವಿದ್ಯಾರ್ಥಿ ಯಶವಂತ್ ಜೆ. ಘೋರ್ಪಡೆ ಉತ್ತೀರ್ಣರಾಗಿದ್ದು, ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಭಾರತೀಯ ಚಾರ್ಟೆಡ್ ಅಕೌಂಟೆಂಟ್’ಗಳ ಸಂಸ್ಥೆ(The Institute of Chartered Accountants of India) ನಡೆಸಿದ ಸಿಎ ಮಧ್ಯಂತರ ಪರೀಕ್ಷೆಯಲ್ಲಿ ಯಶವಂತ್ ಅವರು ಉತ್ತೀರ್ಣರಾಗಿದ್ದು, ಮುಂದಿನ ಹಂತದ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ.

ಈ ಕುರಿತಂತೆ ಮಾಹಿತಿ ನೀಡಿದ ದಕ್ಷಾ ಅಕಾಡೆಮಿಯ ಮುಖ್ಯಸ್ಥರು, ಯಶವಂತ್ ಅವರ ಸಾಧನೆಯಿಂದ ನಮ್ಮ ಸಂಸ್ಥೆಗೆ ಕೀರ್ತಿ ತಂದಿದೆ. ಅವರ ಮುಂದಿನ ಪರೀಕ್ಷೆ ಹಾಗೂ ಹಾದಿ ಸುಗಮವಾಗಿರಲಿ, ಯಶಸ್ಸು ದೊರೆಯಲಿ ಎಂದು ಹಾರೈಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post