ಬೆಂಗಳೂರು: ಲೋಕಸಭಾ ಚುನಾವಣೆಗೆ ರಾಜ್ಯದ ಪಾಲಿನ ಮತದಾನ ಮುಕ್ತಾಯವಾದ ಬೆನ್ನಲ್ಲೇ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನಗೆ ನೆಟ್ಟಿಗರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸತತವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಗರನ್ನು ಟೀಕಿಸುವ ರಮ್ಯಾ, ಪ್ರಜಾಪ್ರಭುತ್ವದ ಹಬ್ಬ ಚುನಾವಣೆಯಲ್ಲಿ ತಮ್ಮ ಮತ ಚಲಾವಣೆ ಮಾಡದೇ ಇರುವುದೇ ಇದಕ್ಕೆಲ್ಲಾ ಕಾರಣ.
Wayanad polling percentage 5.5 at 8:40am ahead of many other constituencies in Kerala #RGforWayanad #LokSabhaElection2019
— Divya Spandana/Ramya (@divyaspandana) April 23, 2019
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧಿಸಿರುವ ವಯನಾಡ್ ಕ್ಷೇತ್ರದ ಮತದಾನ ಪ್ರಮಾಣದ ಮಾಹಿತಿಯನ್ನು ಟ್ವಿಟರ್’ನಲ್ಲಿ ಹಂಚಿಕೊಂಡಿರುವ ರಮ್ಯಾಗೆ ಅಲ್ಲಿಯೇ ಟ್ವಿಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.
ವೋಟ್ ಹಾಕೋಕೆ ಯೋಗ್ಯತೆ ಇಲ್ಲ ಇನ್ನು ವೋಟ್ ನ ಬಗ್ಗೆ ಮಾತ್ನಡ್ತಾರೆ
— chowkidar VIGNESH K (@VIGNESH51927899) April 23, 2019
ಪ್ರಮುಖವಾಗಿ, ಎರಡೂ ಕಾಲುಗಳೂ ಇಲ್ಲದ ಯುವತಿಯೋರ್ವಳು ತಮ್ಮ ಕಾಲು ಬೆರಳಿಗೆ ಶಾಯಿ ಹಾಕಿಸಿಕೊಂಡು ಮತ ಚಲಾವಣೆ ಮಾಡಿದ್ದಾರೆ. ಈ ಫೋಟೋ ಹಾಕಿ ಈಕೆ ಪಾದಧೂಳಿಗೂ ನೀನು ಸಮವಲ್ಲ ಎಂದು ರಮ್ಯಾರನ್ನು ಟೀಕಿಸಲಾಗಿದೆ.
ನಿನ್ನ ಲೈಫ್ ಅನ್ನೋ ಡಿಕ್ಷನರಿಯಲ್ಲಿ ಮಾನ ಮರ್ಯಾದಿ ಅನ್ನೋ ಪದ ಇದ್ಯಾ.. ಹೋಗಿ ಮೊದಲು ವೋಟ್ ಮಾಡು pic.twitter.com/c9kJVKXl5o
— Purvi Raj Arasu ( ಪೂರ್ವಿ) 🇮🇳 (@purviraju1) April 23, 2019
ವೋಟ್ ಹಾಕೋ ಯೋಗ್ಯತೆ ಇಲ್ಲ, ಇನ್ನು ವೋಟ್ ಬಗ್ಗೆ ಮಾಡನಾಡುತ್ತೀಯಾ! ಸತತ ಮೂರನೆಯ ಬಾರಿ ವೋಟ್ ಮಾಡದ ಮಾಜಿ ಸಂಸದೆ! ಎಂದೆಲ್ಲಾ ಜನ ಕ್ಲಾಸ್ ತೆಗೆದುಕೊಂಡಿದ್ದರೆ, ಇನ್ನೊಬ್ಬ ಟ್ವಿಟ್ಟಿಗರು ಪ್ರಧಾನಿ ಮೋದಿ ಅವರ ತಾಯಿ ಫೋಟೋ ಹಾಕಿ ‘ಈ ವಯಸ್ಸಿನಲ್ಲೂ ಮೋದಿ ಅವರ ತಾಯಿ ಮತ ಹಾಕೋಕ್ಕೆ ಹೋಗುತ್ತಾರೆ ತಮಗೆ ಏನ್ ಆಗಿದೆ ಅಂತ’ ಎಂದು ಜಾಡಿಸಿದ್ದಾರೆ.
ನೀನ್ ಎಲ್ಲಾದ್ರೂ ವೋಟ್ ಮಾಡಿದ್ಯಾ ಅದ್ ಹೇಳೇ ಮೊದಲು..
ಮಂಡ್ಯದಲ್ಲಂತೂ ಹಾಕಲಿಲ್ಲ,ಬೇರೆ ಇನ್ನೇಲ್ಲದ್ರೂ address change ಮಾಡಿ, voter ID ಮಾಡಿಸ್ಕೊಂಡಿದ್ಯಾ ಹೆಂಗೆ..?
ನಿನ್ ಬಾಯಲ್ಲಿ polling vote percentage ಮಾತು..
— ಚೈತ್ರ ದೇವರಾಜ್ (@chaithradevraj) April 23, 2019
ಈ ವಯಸ್ಸಿನಲ್ಲೂ ಮೋದಿ ಅವರ ತಾಯಿ ಮತ ಹಾಕೋಕ್ಕೆ ಹೋಗುತ್ತಾರೆ ತಮಗೆ ಏನ್ ಆಗಿದೆ ಅಂತ pic.twitter.com/hxp5oQ8gxP
— Purvi Raj Arasu ( ಪೂರ್ವಿ) 🇮🇳 (@purviraju1) April 23, 2019
— Yogesh cv (@yogescv) April 23, 2019
Discussion about this post