ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇದಸೇ
ರಘುನಾಥಾಯ ನಾಥಾಯ ಸೀತಾಯ ಪತಯೇ ನಮಃ॥
ಈ ಶ್ಲೋಕವು ಪ್ರಸಿದ್ಧವಾದ ಶ್ಲೋಕ, ಎಲ್ಲರೂ ಕೇಳಿದ್ದೀರಿ, ಹೇಳಿದ್ದೀರಿ ಅಲ್ಲವೇ. ಆದರೆ ಆ ಪದ ಪ್ರಯೋಗಗಳಿಗೆ ಇರುವ ಗೂಡಾರ್ಥ ಮನಸ್ಸಿಗೆ ಮುದವನ್ನುಂಟು ಮಾಡಬಹುದು. ಶ್ರೀ ರಾಮಚಂದ್ರನನ್ನು ದಶರಥ ಚಕ್ರವರ್ತಿ ಮಾತ್ರ ರಾಮ ಎಂದು ಕರೆಯುತ್ತಿದ್ದನಂತೆ. ಆರೀತಿಯ ಅಧಿಕಾರ ತಂದೆಯಾದವನಿಗೆ ಮಾತ್ರ ಇರುವುದು. ಇನ್ನು ತಾಯಿ ಕೌಸಲ್ಯೆ ಮಗನನ್ನು ರಾಮಭದ್ರ ಎನ್ನುತ್ತಿದ್ದಲಂತೆ. ಅದು ವಾತ್ಸಲ್ಯ ಭರಿತವಾದ ಸಂಭೋಧನೆ.
ಚಿಕ್ಕಮ್ಮ ಕೈಕೇಯಿ ರಾಮಚಂದ್ರ ಎನ್ನುತ್ತಿದ್ದಳು. ಬಾಲ್ಯದಲ್ಲಿ ಬಾನಿನಲ್ಲಿರುವ ಚಂದ್ರ ಬೇಕೆಂದು ಅಳುತ್ತಿದ್ದ ಶ್ರೀ ರಾಮನಿಗೆ ಕೈಕೇಯಿ ಮಂತರೆಯರು ಕನ್ನಡಿಯೊಳಗೆ ಚಂದ್ರ ಬಿಂಬ ತೋರಿಸಿ ಸಮಾಧಾನ ಪಡಿಸುತ್ತಿದ್ದರು! ಆ ಕಾರಣದಿಂದ ರಾಮಚಂದ್ರ ಎಂಬ ಅನ್ವರ್ಥನಾಮ.
ಬ್ರಹ್ಮರ್ಷಿಗಳಾದ ವಸಿಷ್ಠರು ಶ್ರೀ ರಾಮನನ್ನು ಪರತತ್ವವೆಂದು ತಿಳಿದು ವೇದಸೇ ಎಂದು ಕರೆಯುತ್ತಿದರಂತೆ. ಆದರೆ ಅಯೋಧ್ಯೆಯ ಪುರಜನರೆಲ್ಲ ನಮ್ಮ ರಘುವಂಶದ ಅರಸು ಎಬರ್ಥದಲ್ಲಿ ರಘುನಾಥ ಎಂದು ಕರೆಯುತ್ತಿದ್ದರು. ಇನ್ನು ನಾಥ ಎಂಬಷ್ಟೆ ಕರೆಯುತ್ತಿದ್ದವಳು ಸೀತಾ ದೇವಿ ಮಾತ್ರ. ಹಾಗೆ ಕರೆಯುವುದು ಅವಳೊಬ್ಬಳ ಹಕ್ಕು! ಆದರೆ ಮಿಥಿಲೆಯ ಜನರೆಲ್ಲರೂ ನಮ್ಮ ಸೀತೆಯ ಗಂಡ ಎಂಬರ್ಥದಲ್ಲಿ ಅಭಿಮಾನದಿಂದ ಸೀತಾಯ ಪತಯೇ ಎನ್ನುತ್ತಿದ್ದರು. ಅಂತಹ ಶ್ರೀರಾಮನಿಗೆ ನಮಸ್ಕಾರ!
ಇದು ಬರೀ ಲೇಖನ ಮಾತ್ರವಲ್ಲದೇ ಒಂದು ದೇವರ ಶ್ಲೋಕದ ಅನ್ವರ್ಥನಾಮವೂ ಹೌದು. ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ನಿಮ್ಮಲ್ಲಿ ಇರುವ ಎಲ್ಲಾ ಸ್ನೇಹಿತರೊಂದಿಗೆ ಶೇರ್ ಮಾಡಿ.
ಧನ್ಯವಾದಗಳು, ಶುಭಮಸ್ತು, ಶ್ರೀಕೇಷ್ಣಾರ್ಪಣಮಸ್ತು
ಲೇಖನ: ಆಪ್ತಮಿತ್ರ ವಸಂತ್, ಬೆಂಗಳೂರು
Discussion about this post