ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬನಶಂಕರಿಯ ಕಾವೇರಿನಗರದ ಕೃಷ್ಣಾ ಗ್ರಾಂಡ್ ಬಳಿಯ ಕೊಡಗು ಜಿಲ್ಲೆಯ ವಿರಾಜಪೇಟೆ ಮೂಲದ ದಂತ ವೈದ್ಯೆ ಶೈಮಾ ಮುತ್ತಪ್ಪ ಅವರು ತನ್ನ ಮಗಳು ಆರಾಧನಾ (9)ಳನ್ನು ನೇಣು ಬಿಗಿದು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೂರು ದಿನಗಳ ಹಿಂದೆ ನಡೆದಿರುವ ಈ ಶಂಕಾಸ್ಪದ ಆತ್ಮಹತ್ಯೆ ಪ್ರಕರಣವು ತಡವಾಗಿ ಬೆಳಕಿಗೆ ಬಂದಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
10 ವರ್ಷಗಳ ಹಿಂದೆ ದಂತ ವೈದ್ಯ ತರಬೇತಿಯ ವೇಳೆ ನಾರಾಯಣ್ ರನ್ನು ಪ್ರೀತಿಸಿ ಶೈಮಾ ಮುತ್ತಪ್ಪ ವಿವಾಹವಾಗಿದ್ದರು. ಪ್ರೇಮಾ ಅವರ ಪ್ರೇಮದ ವಿಚಾರ ಕುಟುಂಬಕ್ಕೆ ತಿಳಿದ ಸಂದರ್ಭದಲ್ಲೇ ಶೈಮಾ ತಾಯಿ ಸಹ ಮೃತಪಟ್ಟಿದ್ದರು. ನಂತರ ಕುಟುಂಬವನ್ನು ಒಪ್ಪಿಸಿ ವಿವಾಹವಾಗಿದ್ದರು.
Also read: Vishnu Ramachandran inducted on Indiassetz board as Chairman
ಪತಿ ನಾರಾಯಣ್ ಕ್ಲಿನಿಕ್ ಗೆ ತೆರಳಿದ್ದಾಗ ಈ ಕೃತ್ಯವೆಸಗಿರುವ ಶೈಮಾ, ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶೈಮಾ ಸಹೋದರ ಆಸ್ಟ್ರೇಲಿಯಾದಲ್ಲಿದ್ದಾರೆ.
ಇಂದು ಸಹೋದರ ಬಂದು ಪೊಲೀಸರಿಗೆ ದೂರು ನೀಡಿದ್ದು ಅದನ್ನು ಆಧರಿಸಿ ಪ್ರಕರಣ ದಾಖಲಿಸಿರುವ ಬನಶಂಕರಿ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post