ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪಠ್ಯಪುಸ್ತಕದಲ್ಲಿ ಯಾವಾಗಲೂ ಸತ್ಯವಿರಬೇಕೇ ವಿನಾ, ಐಡಿಯಾಲಜಿಗಳಲ್ಲ ಎಂದು ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ S L Bhyrappa ಹೇಳಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಾನು ಲೇಖಕನೇ ಹೊರತು ಕಾರ್ಯಕರ್ತ ಅಲ್ಲ. ಪ್ರಾಮಾಣಿಕವಾಗಿ ಹೇಳುವುದಾದರೆ ಪಠ್ಯದಲ್ಲಿ ಎಂದಿಗೂ ಸತ್ಯವಿರಬೇಕೇ ವಿನಾ, ಐಡಿಯಾಲಜಿಗಳಲ್ಲ ಎಂದಿದ್ದಾರೆ.
ವಾಜಪೇಯಿ ಅವರ ಅವಧಿಯಲ್ಲೂ ಸಹ ಪಠ್ಯಪುಸ್ತಕ ಪರಿಷ್ಕರಣೆ ಮಾಡಲಾಗಿತ್ತು. ಅಂದೂ ಸಹ ಹಲವು ಸಾಹಿತಿಗಳು ಪ್ರಶಸ್ತಿ ವಾಪ್ಸಿ ಅಭಿಯಾನ ಮಾಡಿದ್ದರು. ಆಗ ಪ್ರಶಸ್ತಿ ಜೊತೆ ಅದರ ಹಣವನ್ನೂ ಸಹ ವಾಪಾಸ್ ನೀಡಿ ಎಂದು ನಾನು ಹೇಳಿದ್ದೆ. ಆಗ 15 ದಿನದಲ್ಲಿ ಎಲ್ಲರೂ ಸುಮ್ಮನಾದರು ಎಂದು ಹಳೆಯ ವಿಚಾರಕ್ಕೆ ಮತ್ತೆ ಕುಟುಕಿದರು.
Also read: ಶಿವಮೊಗ್ಗದ ಪುಡ್ ಸೇಫ್ಟಿ ಕಚೇರಿ ಸಹಾಯಕಿ ಲೀಮಾ ಎಸಿಬಿ ಬಲೆಗೆ, ನ್ಯಾಯಾಂಗ ಬಂಧನ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post