ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸ್ನೇಹಿತರೊಂದಿಗೆ ಮಂಡಗದ್ದೆಯಲ್ಲಿ ಊಟ ಮುಗಿಸಿಕೊಂಡು ಬರುವಾಗ ಸಕ್ರೆಬೈಲು ಸಮೀಪದ ಹುಲಿಹಳ್ಳದಲ್ಲಿ ನಡೆದ ಅಪಘಾತದಲ್ಲಿ ಕಾರಿನಲ್ಲಿದ್ದ ಮಹೇಂದ್ರ ಅವರು ಸಾವು ಕಂಡಿದ್ದು, ಉಳಿದವರಿಗೆ ಗಂಭೀರ ಗಾಯಗಳಾಗಿರುವ ಘಟನೆ ವರದಿಯಾಗಿದೆ.
ಪ್ರಕರಣದ ವಿವರ:
ನಿನ್ನೆ ಸಂಜೆ 4-15ರ ಸಮಯದಲ್ಲಿ ಮಹೇಂದ್ರ ಅವರು ತನ್ನ ಸ್ನೇಹಿತರಾದ ಶ್ರೀನಿವಾಸ ಜಿ, ಯಶವಂತ, ರಾಘವೇಂದ್ರ, ಕಿಶೋರ್ ಅವರೊಂದಿಗೆ ಮಂಡಗದ್ದೆಯಿಂದ ಊಟ ಮುಗಿಸಿಕೊಂಡು ಶಿವಮೊಗ್ಗದ ಕಡೆ ಹೋಗುತ್ತಿರುವಾಗ ಸಕ್ರಬೈಲ್ ಹತ್ತಿರದ ಹುಲಿಹಳ್ಳದ ಸಮೀಪ ಎದುರುಗಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿ ಮಹೇಂದ್ರ ಮೃತಪಟ್ಟಿದ್ದು, ಇನ್ನುಳಿದವರಿಗೆ ಗಾಯಗಳಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










Discussion about this post