Read - < 1 minute
ನವದೆಹಲಿ: ಆ;30: ಅಮೆರಿಕ ಮೈತ್ರಿಕೂಟದಲ್ಲಿ ಸೇರ್ಪಡೆಯಾಗುವ ಭಾರತದ ಯತ್ನದ ಬಗ್ಗೆ ಚೀನಾ, ರಷ್ಯಾ ಮತ್ತು ಪಾಕಿಸ್ತಾನ ಕೆಂಡಾಮಂಡಲವಾಗಿವೆ ಎಂದು ಬೀಜಿಂಗ್ನ ಮಾಧ್ಯಮವೊಂದು ವರದಿ ಮಾಡಿದೆ.
ಭಾರತವು ಅಮೆರಿಕ ಜತೆ ಹೆಚ್ಚಿನ ಸಖ್ಯ ಬೆಳೆಸುತ್ತಿರುವುದರಿಂದ ಈ ಮೂರು ದೇಶಗಳನ್ನು ಕೆರಳಿಸಿವೆ. ಇದರಿಂದ ಏಷ್ಯಾದ ಭೌಗೋಳಿಕ-ರಾಜಕೀಯ ವೈರಿಗಳ ನಡುವೆ ಭಾರತ ಗಂಭೀರ ತೊಂದರೆಗಳಿಗೆ ಸಿಲುಕಲಿದೆ ಎಂದು ಚೀನಾ ಸಕರ್ಾರಿ ಸ್ವಾಮ್ಯದ ಮಾಧ್ಯಮ ಹೇಳಿದೆ.
ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಮತ್ತು ಅಮೆರಿಕದ ರಕ್ಷಣಾ ಸಚಿವ ಅಶ್ಟನ್ ಕಾರ್ಟರ್ ಅವರು ಮಹತ್ವದ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕುವ ಮುನ್ನವೇ ಚೀನಿ ಮಾಧ್ಯಮದ ಸಂಪಾದಕೀಯದಲ್ಲಿ ಈ ವಿಷಯ ಪ್ರಸ್ತಾಪವಾಗಿದೆ.
ಈ ಎರಡೂ ದೇಶಗಳ ಮಿಲಿಟರಿ ಸಹಕಾರ ಸಂಬಂಧ ಇನ್ನಷ್ಟು ಬಲಗೊಳ್ಳಲಿದೆ ಎಂಬ ಆತಂಕ ಚೀನಾ ಮತ್ತು ಪಾಕ್ಅನ್ನು ಕಾಡುತ್ತಿದೆ.
ಅಮೆರಿಕದತ್ತ ಭಾರತವು ವಾಲಿದರೆ ಅದು ತನ್ನ ಸ್ವಾತಂತ್ರವನ್ನು ಕಳೆದುಕೊಳ್ಳುತ್ತದೆ ಎಂದು ದೆಹಲಿಯನ್ನು ಬೀಜಿಂಗ್ ಟೀಕಿಸಿದೆ.
Discussion about this post