Read - < 1 minute
ಲಾಸ್‌ಏಂಜಲೀಸ್: ಮಿಸ್ಟರ್ ಆಂಡ್ ಮಿಸ್ಸೆಸ್ ಸ್ಮಿತ್ ಖ್ಯಾತಿಯ ಹಾಲಿವುಡ್‌ನ ಹಾಟ್ ಜೋಡಿ ಏಂಜಲಿನಾ ಜೂಲಿ ಹಾಗೂ ಬ್ರಾಡ್‌ಪಿಟ್ ದಾಂಪತ್ಯ ಮುರಿದು ಬಿದ್ದಿದೆ.
ಹೌದು ಏಂಜಲೀನಾ ಜೂಲಿ ವಿವಾಹ ವಿಚ್ಛೇದನ ನೀಡುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ೨೦೦೫ರಿಂದ ಜೊತೆಯಾಗಿ ಜೀವನ ಮಾಡ್ತಿದ್ದ ಜೂಲಿ ಹಾಗೂ ಬ್ರಾಡ್‌ಪಿಟ್ ೨೦೧೪ರಲ್ಲಿ ಮದುವೆಯಾಗಿದ್ದರು. ಕುಟುಂಬದ ಆರೋಗ್ಯದ ದೃಷ್ಟಿಯಿಂದ ಜೂಲಿ ಡಿವೋರ್ಸ್ ಪಡೆಯುತ್ತಿದ್ದಾರೆ ಎಂದು ಆಕೆಯ ವಕೀಲರು ತಿಳಿಸಿದ್ದಾರೆ.
ಏಂಜಲೀನಾ ದೂರಿನನ್ವಯ ಬ್ರಾಡ್ ಮಕ್ಕಳನ್ನ ಒಬ್ಬ ಒಳ್ಳೆಯ ತಂದೆಯಾಗಿ ನೋಡಿಕೊಳ್ಳುತ್ತಿಲ್ಲ. ಅಲ್ಲದೇ ಬ್ರಾಡ್ ದುಶ್ಚಟಗಳಿಗೆ ಒಳಗಾಗಿದ್ದು, ಇದರಿಂದ ಮಕ್ಕಳ ಭವಿಷ್ಯಕ್ಕೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. ಆದರೆ ಬ್ರಾಡ್ ಮುಂದಿನ ಚಿತ್ರದಲ್ಲಿ ಫ್ರೆಂಚ್ ನಟಿಯ ಜೊತೆಗೆ ಬಹಳ ಸಲುಗೆಯಿಂದ ನಟಿಸಿದ್ದು, ಆಕೆಯೊಂದಿಗೆ ಹೆಚ್ಚಾಗಿ ರೋಮ್ಯಾಂಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವುದಕ್ಕೆ ಏಂಜಲೀನಾ ವಿಚ್ಛೇದನ ಕೋರಿದ್ದಾರೆ ಎನ್ನಲಾಗಿದೆ.
ಜೂಲಿ ದಂಪತಿಗೆ ಅವಳಿ ಮಕ್ಕಳಿದ್ದಾರೆ. ಜೊತೆಗೆ ದತ್ತು ಪಡೆದ ೪ ಮಕ್ಕಳನ್ನ ಸೇರಿ ೬ ಮಕ್ಕಳನ್ನು ಸಾಕುವ ಹಕ್ಕನ್ನ ತನಗೆ ನೀಡಬೇಕೆಂದು ಏಂಜಲೀನಾ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಪತ್ನಿಯ ಡೈವೋರ್ಸ್ ನಿರ್ಧಾರಕ್ಕೆ ಪತಿ ಬ್ರಾಡ್‌ಪಿಟ್ ಮಾತ್ರ ಬೇಸರ ವ್ಯಕ್ತಪಡಿಸಿದ್ದಾರೆ.
Discussion about this post