ಕೊಚ್ಚಿ,ಅ.6:
ಕೇರಳದಲ್ಲಿ ಇತ್ತೀಚೆಗೆ ಕುಖ್ಯಾತ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ನ ಒಂದು ವಿಭಾಗವಾದ `ಅನ್ಸಾರ್-ಉಲ್-ಖಲೀಫಾ’ದ 10 ಮಂದಿ ಬಂತರಾದ ವಿಷಯಕ್ಕೆ ಸಂಬಂಸಿ ತಮಿಳುನಾಡಿನ ಕೊಯಂಬತ್ತೂರಿನ ಕಂಪ್ಯೂಟರ್ ಇಂಜಿನೀಯರ್ನೋರ್ವನನ್ನು ವಿಚಾರಣೆಗೊಳಪಡಿಸಲಾಗಿದ್ದು, ಏಳು ಮಂದಿ ಕಾಲೇಜು ವಿದ್ಯಾರ್ಥಿಗಳನ್ನು ತನಿಖಾವಿಧೇಯವಾಗಿ ಎನ್ಐಎ ಅಕಾರಿಗಳು ಬುಧವಾರದಂದು ವಶಕ್ಕೆ ತೆಗೆದುಕೊಂಡಿದ್ದಾರೆ.
ಕನಕಮಲೆ ಮತ್ತು ಕಲ್ಲಿಕೋಟೆಯಿಂದ ಬಂತರಾದವರ ಪೈಕಿ ಕೆಲವು ಮಂದಿ ಕೊಯಂಬತ್ತೂರಿನಲ್ಲಿ ಮೆಡಿಕಲ್ ರೆಪ್ರಸಂಟೇಟಿವ್ ಆಗಿ ದುಡಿದಿದ್ದರು ಎಂಬ ವಿಷಯವು ರಾಷ್ಟ್ರೀಯ ತನಿಖಾ ದಳ ನಡೆಸಿದ ತನಿಖೆಯಿಂದ ವ್ಯಕ್ತಗೊಂಡಿದೆ. ಅಲ್ಲದೆ ಕಣ್ಣೂರು ಪಾನೂರು ಬಳಿಯ ಕನಕಮಲೆಯಲ್ಲಿ ಬಂತನಾಗಿದ್ದ ಶಂಕಿತ ಉಗ್ರರ ಪೈಕಿ ತೃಶೂರಿನ ಟಿ.ಸ್ವಾಲಿನ್ಮುಹಮ್ಮದ್ ಎಂಬಾತ ಚೆನ್ನೈಯ ಪಂಚತಾರಾ ರಿಸೋರ್ಟ್ ಒಂದರಲ್ಲಿ ದುಡಿಯುತ್ತಿದ್ದ. ಚೆನ್ನೈಯ ಕೆಟ್ಟುವಾಕ್ಕಾ ಅಪಾರ್ಟ್ ಮೆಂಟ್ ನಲ್ಲಿ ಒಂದು ತಿಂಗಳಿಂದೀಚೆ ಪತ್ನಿ ಜೆನ್ಸಿನಾ ಮತ್ತು 3ರಹರೆಯದ ಪುತ್ರನೊಂದಿಗೆ ಈತ ವಾಸಿಸುತ್ತಿದ್ದನು ಎಂಬುವುದನ್ನು ತನಿಖಾಕಾರಿಗಳು ಪತ್ತೆಹಚ್ಚಿದ್ದಾರೆ. ಸ್ನೇಹಿತನೋರ್ವನನ್ನು ಭೇಟಿಯಾಗಲಿರುವುದಾಗಿ ತಿಳಿಸಿ ಈತ ಕೇರಳಕ್ಕೆ ತೆರಳಿದ್ದ ಎಂದು ಈತನ ಪತ್ನಿ ಜೆನ್ಸಿನಾ ತನಿಖೆಗಾಗಿ ಬಂದ ಅಕಾರಿಗಳಲ್ಲಿ ತಿಳಿಸಿದ್ದಾಳೆ.
ಎನ್ಐಎ ಅಕಾರಿಗಳ ಸೆರೆಗೀಡಾದ ಇನ್ನೋರ್ವ ಆರೋಪಿ ಅಬುಬಷೀರ್ ಕೂಡಾ ಕೊಯಂಬತ್ತೂರಿನಲ್ಲಿ ವಾಸವಾಗಿದ್ದನು. ಈತನಿಗೆ ಕೊಯಂಬತ್ತೂರಿನ ಕಂಪ್ಯೂಟರ್ ಇಂಜಿನೀಯರ್ ಓರ್ವ ಎಲ್ಲಾ ರೀತಿಯ ನೆರವು ನೀಡಿದ್ದನು. ಈತನ ಲ್ಯಾಪ್ಟೋಪ್ ದುರಸ್ತಿ, ಪ್ರೋಗ್ರಾಮ್ ಸೆಟ್ಟಿಂಗ್ ಎಲ್ಲಾ ಮಾಡಿಕೊಟ್ಟಿರುವುದು ಇದೇ ಇಂಜಿನೀಯರ್ ಎಂದು ಅಕಾರಿಗಳು ತಿಳಿಸಿದ್ದಾರೆ. ಈತನನ್ನು ಸಮಗ್ರವಾಗಿ ವಿಚಾರಣೆಗೊಳಪಡಿಸಲಾಗುತ್ತಿದೆ. ಕೇರಳದಲ್ಲಿ ಐಎಸ್ನ ಬೇರೂರುವಿಕೆ ಸಂಬಂಸಿದ ಇನ್ನಷ್ಟು ರಹಸ್ಯ ಮಾಹಿತಿಗಳು ರಾಷ್ಟ್ರೀಯ ತನಿಖಾ ದಳಕ್ಕೆ ದೊರೆತ್ತಿದ್ದು, ಇದನ್ನು ಅವರು ತನಿಖಾ ದೃಷ್ಟಿಯಿಂದ ಬಹಿರಂಗಪಡಿಸಲು ಇಚ್ಚಿಸಿಲ್ಲ. ಅಲ್ಲದೆ ಈ ಘಟನೆಗೆ ಸಂಬಂಸಿ ಇನ್ನಷ್ಟು ಮಂದಿಯ ಬಂಧನದ ಸಾಧ್ಯತೆ ಇರುವುದಾಗಿ ತಿಳಿದು ಬಂದಿದೆ.
ಇದೇ ವೇಳೆ ಕೇರಳದ ತಂಡದೊಂದಿಗೆ ಸಂಪರ್ಕದಲ್ಲಿದ್ದರೆನ್ನಲಾದ ನವಾಸ್, ರಹ್ಮಾನ್, ಸಫಿಯುಳ್ಳ, ನಾಸರ್, ವಹಾಬ್, ನಬೀಲ್, ನಿಸ್ವಾನ್ರಾನ್ ಎಂಬ ಕಾಲೇಜ್ ವಿದ್ಯಾರ್ಥಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ. ಇದರ ಪೂರ್ಣ ಮಾಹಿತಿಗಳನ್ನು ಇನ್ನೂ ಹೊರಬಿಟ್ಟಿಲ್ಲ.
Discussion about this post