Read - < 1 minute
ನವದೆಹಲಿ, ಅ.5: ಭಾರತೀಯ ಸೇನೆಯ ಗುಂಡಿಗೆ ತರಗೆಲೆಯಂತೆ ಉದುರಿಹೋದ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವನಿಯನ್ನು ಕಾಶ್ಮೀರದ ಮಣ್ಣಿನ ಮಗ, ಹುತಾತ್ಮ ಎಂದೆಲ್ಲಾ ಹೊಗಳಿರುವ ಪಾಕಿಸ್ಥಾನ ಪ್ರಧಾನಿ ನವಾಜ್ ಷರೀಫ್ ಹೇಳಿಕೆಗೆ ತಪರಾಕಿ ನೀಡಿದೆ. ಷರೀಫ್ ಮಾತು ಪಾಕಿಸ್ಥಾನ ಭಯೋತ್ಪಾದನೆಯೊಂದಿಗೆ ಹೊಂದಿರುವ ಸಂಬಂಧವನ್ನು ಸಾಬೀತುಮಾಡುತ್ತದೆ ಎಂದು ಲೇವಡಿ ಮಾಡಿದೆ.
ಈ ಕುರಿತಂತೆ ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಮಾತನಾಡಿದ್ದು, ಪಾಕಿಸ್ಥಾನ ಪಾರ್ಲಿಮೆಂಟ್ ಜಂಟಿ ಅಧಿವೇಶನದಲ್ಲಿ ಮಾತನಾಡಿದ ಷರೀಫ್, ವನಿ ಪರವಾಗಿ ಮಾತನಾಡಿರುವುದನ್ನು ನೋಡಿದರೆ, ಭಯೋತ್ಪಾದನೆಯೊಂದಿಗೆ ಪಾಕಿಸ್ಥಾನ ಸಂಬಂಧವನ್ನು ಹೊಂದಿರುವ ಪರಿಯನ್ನು ತೋರಿಸುತ್ತದೆ ಎಂದಿದ್ದಾರೆ.
ಪಾಕಿಸ್ಥಾನದ ಜಂಟಿ ಸಂಸತ್ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿರುವ ಷರೀಫ್, ಉರಿ ಸೆಕ್ಟರ್ ಮೇಲೆ ದಾಳಿ ವಿಚಾರದಲ್ಲಿ ಯಾವುದೇ ರೀತಿಯ ತನಿಖೆ ನಡೆದು ವರದಿ ಬರುವ ಮುನ್ನವೇ, ದಾಳಿ ನಡೆದ ಕೇವಲ ಒಂದು ಗಂಟೆಯಲ್ಲೇ ಭಾರತ ಪಾಕಿಸ್ಥಾನದ ವಿರುದ್ಧ ಬೊಟ್ಟು ಮಾಡಿ ತೋರಿಸಿ, ದಾಳಿಗೆ ಕಾರಣ ಪಾಕ್ ಎಂದು ಆರೋಪಿಸಿದೆ. ಯುಎನ್ಜಿಎನಲ್ಲಿ ನಾನು ಭಾಷಣ ಮಾಡುವ ವೇಳೆ ಇಲ್ಲಿ ಉರಿ ದಾಳಿ ನಡೆದಿದೆ. ಈ ಹಿನ್ನೆಲೆಯಲ್ಲಿ ಈ ದಾಳಿ ಕುರಿತಾಗಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಷರೀಫ್ ಹೇಳಿದ್ದಾರೆ.
ನಾವು ಯುದ್ಧಕ್ಕೆ ವಿರುದ್ಧವಾಗಿದ್ದು, ಶಾಂತಿಯನ್ನು ಬಯಸುತ್ತೇವೆ. ಕಾಶ್ಮೀರ ವಿವಾದವನ್ನು ನಾವು ಶಾಂತರೀತಿಯಂದ ಪರಿಹಾರ ಮಾಡಿಕೊಳ್ಳಲು ಇಚ್ಛಿಸುತ್ತೇವೆ. ನಾವು ಭಾರತಕ್ಕೆ ಅನುಕೂಲಕರವಾದ ಎಲ್ಲ ಕಾರ್ಯಗಳನ್ನು ಮಾಡಿದ್ದೇವೆ. ಆದರೆ, ಭಾರತ ನಮ್ಮ ವಿರುದ್ಧವೇ ಆರೋಪ ಮಾಡುತ್ತಿದೆ ಎಂದಿರುವ ಷರೀಫ್, ಭಾರತದೊಂದಿಗೆ ಶಾಂತಿಯುವಾಗಿ ಮಾತುಕತೆ ನಡೆಸಲು ನಾವು ಸರ್ವರೀತಿಯಲ್ಲೂ ಪ್ರಯತ್ನ ಮಾಡುತ್ತಿದ್ದೇವೆ ಎಂದಿದ್ದಾರೆ.

Discussion about this post