ಶಿವಮೊಗ್ಗ: ರಾಜ್ಯ ಪ್ರವಾಸೋದ್ಯಮ ಕ್ಷೇತ್ರಗಳ ಸಮಗ್ರ ಅಭಿವೃದ್ಧಿ ರಾಜ್ಯ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಪ್ರವಾಸಿ ಕ್ಷೇತ್ರವನ್ನು ಒಂದು ಉದ್ಯಮವನ್ನಾಗಿಸಿ, ಆ ಮೂಲಕ ಉದ್ಯೋಗ ಸೃಷ್ಠಿಗೂ ಸಹ ಯೋಜನೆ ರೂಪಿಸಲಾಗುತ್ತಿದೆ ಎಂದು ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಅಧ್ಯಕ್ಷ, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಟಾಸ್ಕ್ ಫೋರ್ಸ್ ಸದಸ್ಯ ಲಕ್ಷ್ಮೀ ನಾರಾಯಣ ಕಾಶಿ ಹೇಳಿದರು.
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಹಿನ್ನೆಲೆಯಲ್ಲಿ ಕಮಲಾ ನೆಹರು ಕಾಲೇಜಿನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರ ಮಾತನಾಡಿದರು.
ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿತವಾಗುತ್ತಿದೆ. ಇದರ ಭಾಗವಾಗಿ, ರಾಜ್ಯದ 40 ಸ್ಥಳಗಳನ್ನು ಗುರುತಿಸಲಾಗಿದ್ದು, ಇವನ್ನು ಸಕ್ಯೂಟ್,ಗಳಾಗಿ ಮಾಡಿ ಆದ್ಯತೆಯ ಮೇರೆಗೆ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗುವುದು. ಇದರಲ್ಲಿ ಶಿವಮೊಗ್ಗ ಜಿಲ್ಲೆಯೂ ಸಹ ಸೇರಿದ್ದು, ಇದೂ ಸಹ ಒಂದು ಸಕ್ಯೂಟ್ ಆಗಲಿದೆ ಎಂದರು.
ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಇದೇ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಠಿಗೂ ಸಹ ನಮಗೆ ವಿಫುಲ ಅವಕಾಶವಿದ್ದು, ಇದರ ಕಾರ್ಯಗತಕ್ಕೆ ಯೋಜಿಸಲಾಗಿದೆ. ಪ್ರಮುಖವಾಗಿ ಈ ಕ್ಷೇತ್ರದಲ್ಲಿ ಪರಿಣಿತ ಗೈಡ್’ಗಳ ಕೊರತೆಯಿದೆ. ಇರುವ ಕೆಲವರಿಗೆ ಮಾಹಿತಿಯ ಕೊರತೆಯಿದ್ದು, ಇದನ್ನು ಸರಿಪಡಿಸಲಾಗುವುದು. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸ್ಕಿಲ್ ಡೆವಲಪ್’ಮೆಂಟ್ ಇದಕ್ಕೆ ಪೂರಕವಾಗಿದೆ. ಹೀಗಾಗಿ, ಹೊಟೇಲ್ ಮ್ಯಾನೇಜ್’ಮೆಂಟ್ ಹಾಗೂ ಪ್ರವಾಸೋದ್ಯಮ ವಿದ್ಯಾರ್ಥಿಗಳು ಸ್ಕಿಲ್ ಡೆವಲಪ್’ಮೆಂಟ್ ಕೋರ್ಸ್‌ಗಳನ್ನು ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.ಪ್ರವಾಸಿ ಗೈಡ್ ಉದ್ಯೋಗದಲ್ಲಿ ಒಳ್ಳೆಯ ಆದಾಯವೂ ಸಹ ಇದ್ದು, ಯುವ ಜನತೆ ಇತ್ತ ಆಸಕ್ತಿ ವಹಿಸಬೇಕು. ಇದರಿಂದ ಜ್ಞಾನವೂ ಸಹ ಹೆಚ್ಚುತ್ತದೆ. ನಮ್ಮದೇ ದೇಶ, ನಮ್ಮದೇ ರಾಜ್ಯ ಹಾಗೂ ನಮ್ಮದೇ ಜಿಲ್ಲೆಯ ಪ್ರಾಮುಖ್ಯತೆ ನಮಗೆ ದೊರೆಯುತ್ತದೆ. ಇದಕ್ಕಾಗಿ ಕೌಶಲ್ಯಾಭಿವೃದ್ಧಿ ಮಾಡಿಕೊಳ್ಳಿ ಎಂದರು.
ಇನ್ನು, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಶೇಷ ಆಸಕ್ತಿ ವಹಿಸಿದ್ದು, ಇದರ ಯೋಜನೆಗಳ ಜಾರಿಗೆ ಯಾವುದೇ ರೀತಿಯಲ್ಲಿ ಹಣಕಾಸಿನ ಕೊರತೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂಬ ಭರವಸೆ ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಉತ್ಸಾಹಿ ಸಂಸದ ರಾಘವೇಂದ್ರ ಸಹ ನಮ್ಮ ಬೆನ್ನಿಗೆ ನಿಂತಿರುವುದು ಸಂತಸದ ವಿಚಾರ ಎಂದರು.
ನಮ್ಮ ಮಲೆನಾಡು ಹಾಗೂ ಭಾರತದ ಪ್ರಕೃತಿ ಸೌಂದರ್ಯದ ಮುಂದೆ ಜಗತ್ತಿನ ಯಾವುದೇ ಪ್ರಾಕೃತಿಕ ವೈಭವವಿಲ್ಲ. ಇದನ್ನು ನಮ್ಮ ಜನರು ಅರಿಯಬೇಕು. ಇಂತಹ ವಿಚಾರವನ್ನು ಪ್ರಪಂಚಕ್ಕೆ ಸಾರುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು ಈ ಬಾರಿಯ ಪ್ರವಾಸೋದ್ಯಮ ಆತಿಥ್ಯವನ್ನು ನಮ್ಮ ದೇಶಕ್ಕೇ ವಹಿಸಿಕೊಂಡಿದ್ದಾರೆ. ಇದು ದೇಶದ ಪ್ರವಾಸೋದ್ಯಮ ಕ್ಷೇತ್ರ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದ್ದು, ಸ್ವಾಗತಾರ್ಹ ನಿರ್ಧಾರವಾಗಿದೆ ಎಂದರು.
(ವರದಿ: ನಿರಂಜನಮೂರ್ತಿ)
Discussion about this post