ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇತ್ತೀಚೆಗಷ್ಟೇ ಅಕಾಲಿಕ ನಿಧನ ಹೊಂದಿದ ಶಿವಮೊಗ್ಗದ ಖ್ಯಾತ ಯುವ ಉದ್ಯಮಿ ಶರತ್ ಭೂಪಾಳಂ ಹಾಗೂ ಸರ್ಜಿ ತಾಯಿ ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾಗಿದ್ದ ಡಾ.ಹೆಚ್.ಎಸ್. ಸತೀಶ್ ಅವರ ಸ್ಮರಣಾರ್ಥ ರೌಂಡ್ ಟೇಬಲ್ಸ್ ಆಫ್ ಶಿವಮೊಗ್ಗ ಹಾಗೂ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಫೆ.19ರ ಭಾನುವಾರ ಬೆಳಗ್ಗೆ ಮ್ಯಾರಥಾನ್ ಹಾಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಖ್ಯಾತ ಯುವ ಉದ್ಯಮಿ ಶರತ್ ಭೂಪಾಳಂ ಅವರ ಸ್ಮರಣಾರ್ಥ ಅಂದು ಬೆಳಗ್ಗೆ 6 ಗಂಟೆಗೆ ಜೈಲ್ ರಸ್ತೆಯ ಫ್ರೀಡಂ ಪಾರ್ಕ್ ಆವರಣದಿಂದ ಶಿವಮೊಗ್ಗ ರನ್ ಹೆಸರಿನಲ್ಲಿ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ. ಭಾಗವಹಿಸುವ ಎಲ್ಲರಿಗೂ ಪ್ರಮಾಣಪತ್ರವನ್ನು ನೀಡಲಾಗುವುದು. ಮೊದಲು ನೋಂದಾಯಿಸಿದ 100 ಮಂದಿಗೆ ಉಚಿತವಾಗಿ ಟೀ ಶರ್ಟ್ ನೀಡಲಾಗುವುದು, ಅಲ್ಲದೇ ಸಸಿಗಳನ್ನು ವಿತರಿಸಲಾಗುವುದು.
Also read: ಅಕ್ರಮ ನಾಟ ಸಾಗಟ ಪತ್ತೆ ಹಚ್ಚಿದ ಎಸಿಎಫ್ ಪ್ರವೀಣ್ ಕುಮಾರ್ ಬಸ್ರೂರ್: ಸಾರ್ವಜನಿಕರಿಂದ ಪ್ರಶಂಸೆ
ಇದೇ ಸಂದರ್ಭ ಅಂದು ಬೆಳಗ್ಗೆ 11 ರಿಂದ 1.30 ತನಕ ಡಾ.ಹೆಚ್.ಎಸ್. ಸತೀಶ್ ಅವರ ಸ್ಮರಣಾರ್ಥ ಮಕ್ಕಳಿಗೆ ಫ್ಯಾಷನ್ ಶೋ ಸ್ಪರ್ಧೆ ನಡೆಯಲಿದೆ. ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಲಿಟಲ್ ಪ್ರಿನ್ಸ್ ಆಫ್ ಶಿವಮೊಗ್ಗ ಹಾಗೂ ಲಿಟಲ್ ಪ್ರಿನ್ಸಸ್ ಆಫ್ ಶಿವಮೊಗ್ಗ ಹೀಗೆ ಎರಡು ವಿಭಾಗದಲ್ಲಿ ವಿವಿಧ ವಯೋಮಿತಿಯಲ್ಲಿ ಸ್ಪರ್ಧೆಗಳು ನಡೆಯಲಿವೆ. 3 ರಿಂದ 5ವರ್ಷದವರಿಗೆ, 6 ರಿಂದ 10 ವರ್ಷದವರಿಗೆ ಹಾಗೂ 11 ರಿಂದ 15 ವರ್ಷದವರ ವಿಭಾಗದಲ್ಲಿ ಸ್ಪರ್ಧೆಗಳು ಜರುಗಲಿವೆ.
ನೂರು ರೂಪಾಯಿ ಪ್ರವೇಶ ಶುಲ್ಕವಿದೆ. ನೋಂದಣಿ ಮತ್ತು ಹೆಚ್ಚಿನ ಮಾಹಿತಿಗೆ 7406667848 ಅಥವಾ 7406667849 ನಂಬರ್ಗೆ ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post