ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬೆಂಗಳೂರು-ಶಿವಮೊಗ್ಗ #Shivamogga ನಡುವಿನ ಜನಶತಾಬ್ದಿ ರೈಲು #JanshatabdiTrain ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಕಡೂರಿನಲ್ಲಿ ನಿಲುಗಡೆಯಾದ ಪರಿಣಾಮ ಬರೋಬ್ಬರಿ 2.5 ಗಂಟೆ ತಡವಾಗಿ ತಲುಪಲಿದೆ ಎಂದು ವರದಿಯಾಗಿದೆ.
ಸಂಜೆ ಬೆಂಗಳೂರಿನಿಂದ ಹೊರಟ ರೈಲು ರಾತ್ರಿ 9.40ಕ್ಕೆ ಶಿವಮೊಗ್ಗಕ್ಕೆ ತಲುಪಬೇಕಿತ್ತು. ಆದರೆ, ತಾಂತ್ರಿಕ ದೋಷದ ಹಿನ್ನೆಲೆಯಲ್ಲಿಯೇ ತಡವಾಗಿ ಸಂಚರಿಸಿ ರಾತ್ರಿ 8.04ಕ್ಕೆ ಕಡೂರು ತಲುಪಬೇಕಿದ್ದ ರೈಲು 10.30ಕ್ಕೆ ತಲುಪಿದೆ. ಅಲ್ಲಿಂದಲೂ ತಡವಾಗಿ 11.30ಕ್ಕೆ ಬೀರೂರಿನಿಂದ #Birur ಹೊರಟಿದೆ.

ಸಾವಿರಾರು ಪ್ರಯಾಣಿಕರ ಪರದಾಟ
ಜನಶತಾಬ್ದಿ ರೈಲಿನಲ್ಲಿ ಸಾಮಾನ್ಯವಾಗಿ ಸಂಜೆ ಬೆಂಗಳೂರಿನಿAದ ಭದ್ರಾವತಿ, ಶಿವಮೊಗ್ಗಕ್ಕೆ ಸಾವಿರಾರು ಮಂದಿ ಪ್ರಯಾಣ ಮಾಡುತ್ತಾರೆ. ಆದರೆ, ಇಂದು ನಿಗದಿತ ಸಮಯಕ್ಕಿಂತಲೂ ಸುಮಾರು 2.45 ಗಂಟೆ ತಡವಾಗಿರುವ ಕಾರಣ ಸುಮಾರು ಸಾವಿರಾರು ಪ್ರಯಾಣಿಕರು ಪರದಾಡುವ ಸ್ಥಿತಿ ಉಂಟಾಗಿದೆ.
ರಾತ್ರಿ 12.30ಕ್ಕೆ ಶಿವಮೊಗ್ಗ ತಲುಪಿದರೂ ಅಲ್ಲಿಂದ ಮನೆಗಳಿಗೆ ತೆರಳುವ ಪ್ರಯಾಣಿಕರು ಸರಿಯಾಗಿ ಆಟೋ ಸಿಗದೇ ತೆರಳುವುದು ಇನ್ನೂ ಕಷ್ಟವಾಗುವ ಸಾಧ್ಯತೆಯಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post