ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಲ್ಲಿನ ಮುಖ್ಯ ಬಸ್ ನಿಲ್ದಾಣದ ಬಳಿಯಲ್ಲಿ ಹಾಡಹಗಲೇ ಮಹಿಳೆಯೊಬ್ಬರನ್ನು ಅಪಹರಿಸಿರುವ #Kidnap ಆತಂಕಕಾರಿ ಘಟನೆ ಇಂದು ನಡೆದಿದೆ.
ಇಂದು ಮುಂಜಾನೆ ಬಸ್ ನಿಲ್ದಾಣದ ಬಳಿಯಿರುವ ಅಶೋಕ ಹೋಟೆಲ್ ಬಳಿಯಲ್ಲಿ ಇನ್ನೋವಾ ಕಾರಿನಲ್ಲಿ ಬಂದ ವ್ಯಕ್ತಿಗಳು ಏಕಾಏಕಿ ಅನಾಮತ್ತಾಗಿ ವಿವಾಹಿತ ಯುವತಿಯಯನ್ನು ಎಳೆದೊಯ್ದು, ಅಪಹರಣ ಮಾಡಿರುವ ಕುರಿತಾಗಿ ವರದಿಯಾಗಿದೆ.
ಸ್ಥಳದಲ್ಲೇ ಇದ್ದ ಬಾಲಕಿಯ ತಾಯಿ ತತಕ್ಷಣವೇ ದೊಡ್ಡ ಪೇಟೆ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಕ್ಷಿಪ್ರ, ತ್ವರಿತ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಒಂದು ಮಾಹಿತಿಯಂತೆ ಪತಿ ಬೇಡ ಎಂದು ಈಕೆ ತನ್ನ ತಂದೆ-ತಾಯಿಯೊಂದಿಗೆ ತುಂಗಾನಗರ ಠಾಣೆಯಲ್ಲಿ ದೂರು ನೀಡಿದ್ದರು. ಇಂದು ಬಸ್ ನಿಲ್ದಾಣದ ಬಳಿ ತೆರಳುವಾಗಿ ಈಕೆಯ ಪತಿಯೇ ಇನೋವಾ ಕಾರಿನಲ್ಲಿ ಬಂದು ಅಪಹರಿಸಿದ್ದಾನೆ ಎಂದು ಹೇಳಲಾಗಿದೆ.
ಈ ಕುರಿತಂತೆ ಆಕೆಯ ಪೋಷಕರು ಗಂಡನಿಂದಲೇ ಅಪಹರಣವಾಗಿದೆ ಎಂದು ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾಾರೆ.
Also read: ಶಿವಮೊಗ್ಗ | ಹಾಡಹಗಲೇ, ಜನನಿಬಿಡ ಪ್ರದೇಶದಲ್ಲಿ ಬಾಲಕಿಯ ಅಪಹರಣ: ಪೊಲೀಸರ ತ್ವರಿತ ತನಿಖೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post