ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀವಿಜಯ ಕಲಾನಿಕೇತನದ ವತಿಯಿಂದ ಆಗಸ್ಟ್ 19, 20ರಂದು ಸಂಜೆ 6 ಗಂಟೆಗೆ ಅಂಬೇಡ್ಕರ್ ಭವನದಲ್ಲಿ ‘ವರ್ಷ ವೈಭವ – 2023ರ ಭಾಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಆ.19ರಂದು ‘ಮಾರ್ಗಂ’ ಅನ್ನು ಪ್ರಸ್ತುತ ಪಡಿಸಲಾಗುತ್ತದೆ. ಸಾಂಪ್ರದಾಯಿಕ ಪಂದನಲ್ಲೂರು ಶಾಸ್ತ್ರೀಯ ಪದ್ಧತಿಯಲ್ಲಿ ಶ್ರೀವಿಜಯದ ವಿದ್ಯಾರ್ಥಿಗಳು ನರ್ತಿಸಲಿದ್ದಾರೆ. ನೇರ ಹಿನ್ನೆಲೆ ಸಂಗೀತದಲ್ಲಿ ನಟ್ಟುವಾಂಗವನ್ನು ಗುರು ಡಾ. ಕೆ.ಎಸ್. ಪವಿತ್ರ ನಿರ್ವಹಿಸಲಿದ್ದಾರೆ.
ಹಿರಿಯ ರಂಗಕರ್ಮಿ ಉಷಾ ನಟೇಶ್ ಕಾಸರವಳ್ಳಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್. ಉಮೇಶ್ ಅವರು ಉಪಸ್ಥಿತರಿರುವರು. ಶ್ರೀವಿಜಯದ ಅಧ್ಯಕ್ಷ ಡಾ. ಕೆ.ಆರ್. ಶ್ರೀಧರ್ ಅಧ್ಯಕ್ಷತೆ ವಹಿಸಲಿದ್ದಾರೆ.
Also read: ಆ.20ರಂದು ಮುದ್ರಣ ಕ್ಷೇತ್ರದ ಇಂದಿನ ಸವಾಲುಗಳು-ಪರಿಹಾರ ಕುರಿತು ಸಂವಾದ
ಆಗಸ್ಟ್ 20ರ ಭಾನುವಾರ ಡಾ. ಹೆಚ್.ಎಸ್. ವೆಂಕಟೇಶಮೂರ್ತಿ ಅವರಿಂದ ರಚಿತವಾದ ಮಹಾಕಾವ್ಯ ‘ಬುದ್ಧಚರಣ’ ದ ನೃತ್ಯ ಪ್ರಸ್ತುತಿಯನ್ನು ಡಾ. ಕೆ.ಎಸ್.ಪವಿತ್ರಾ ಪ್ರಸ್ತುತಪಡಿಸಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ ಪೂರ್ವಾಧ್ಯಕ್ಷರಾದ ಪ್ರೊ. ಎಂ.ಎಲ್. ಸಾಮಗ ಅವರು ಉಪಸ್ಥಿತರಿರುವರು.
ಕರ್ನಾಟಕ ಸಂಘದ ಪೂರ್ವಾಧ್ಯಕ್ಷರಾದ ವಿಜಯಾ ಶ್ರೀಧರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕಾರ್ಯಕ್ರಮವು ಭಾರತೀಯ ಸಾಂಸ್ಕೃತಿಕ ನಿರ್ದೇಶನಾಲಯ, ನವದೆಹಲಿ ಸಹಕಾರದೊಂದಿಗೆ ನಡೆಯಲಿದೆ. ನೃತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಡಾ. ಕೆ.ಎಸ್.ಪವಿತ್ರಾ ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post