ಕಲ್ಪ ಮೀಡಿಯಾ ಹೌಸ್ | ಸೊರಬ/ಶಿವಮೊಗ್ಗ |
ನೆಹರೂ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಹೊಸಬಾಳೆಯ ಶಕುಂತಲಾ ಪ್ರೌಢಶಾಲೆಯ ಮಕ್ಕಳು ವಿಭಾಗ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಶಿವಮೊಗ್ಗ ಹಾಗೂ ವಿವಿಧ ಕ್ರೀಡಾ ಸಂಸ್ಥೆಗಳ ಸಂಯೋಗದಲ್ಲಿ ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಮಕ್ಕಳು ಅನೇಕ ಪ್ರಶಸ್ತಿಗಳನ್ನು ಪಡೆಯುವುದರ ಜೊತೆಗೆ ತುಮಕೂರಿನಲ್ಲಿ ನಡೆಯುವ ವಿಭಾಗ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಗಳಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಶ್ರೀ ಶಕುಂತಲ ವಿದ್ಯಾ ಸಂಸ್ಥೆ, ಮುಟುಗುಪ್ಪೆ. ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕವೃಂದ ಹಾಗೂ ಎಲ್ಲಾ ಸಿಬ್ಬಂದಿ ವರ್ಗ ಮತ್ತು ಊರ ಗ್ರಾಮಸ್ಥರು ಹಾಗೂ ಪೋಷಕವೃಂದ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಬಾಲಕಿಯರ ವಿಭಾಗದಲ್ಲಿ
1) ವನಜಾಕ್ಷಿ 9ನೇ ತರಗತಿ: 4×100 ರೀಲೆ – ದ್ವಿತೀಯ
2) ನವ್ಯ 8ನೇ ತರಗತಿ: 3000 ಮೀಟರ್- ದ್ವಿತೀಯ, 4×100 ರಿಲೇ – ದ್ವಿತೀಯ, 4×400 ರಿಲೇ – ದ್ವಿತೀಯ
3) ಸೌಜನ್ಯ 9ನೇ ತರಗತಿ: 4×100 ರಿಲೇ – ದ್ವಿತೀಯ
4) ಭಾಗೀರಥಿ 9 ನೇ ತರಗತಿ: 800 ಮೀಟರ್ – ದ್ವಿತೀಯ, 4×100 – ದ್ವಿತೀಯ, 4×400 – ದ್ವಿತೀಯ
5) ಧನ್ಯ 9ನೇ ತರಗತಿ: 4×400 – ದ್ವಿತೀಯ
6) ಅನುಷ 8ನೇ ತರಗತಿ: 4×400 – ದ್ವಿತೀಯ
7) ಸ್ವಾತಿ 10ನೇ ತರಗತಿ: ಜಾವಲಿನ್ ಎಸೆತ – ತೃತೀಯ
ಬಾಲಕರ ವಿಭಾಗ
1) ರಾಕೇಶ್ 10ನೇ ತರಗತಿ: 1500 ಮೀಟರ್ – ದ್ವಿತೀಯ
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















