ಕಲ್ಪ ಮೀಡಿಯಾ ಹೌಸ್ | ನವದೆಹಲಿ |
2023ನೆಯ ಸಾಲಿನ ಏಷ್ಯನ್ ಗೇಮ್ಸ್’ನಲ್ಲಿ ನಡೆದ ಜಾವೆಲಿನ್ ಥ್ರೋ ಪುರುಷರ ವಿಭಾಗದಲ್ಲಿ ಭಾರತದ ನೀರಜ್ ಚೋಪ್ರಾ ಅವರು ಚಿನ್ನದ ಪದಕವನ್ನು ಗೆದ್ದಿದ್ದು, ಕಿಶೋರ್ ಜೆನಾ ಅವರು ಬೆಳ್ಳಿ ಪದಕ ತಮ್ಮದಾಗಿಸಿಕೊಳ್ಳುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ.
Historic GOLD & SILVER for India 🔥🔥🔥
Neeraj Chopra wins Gold & Kishore Jena wins Silver medal in Javelin Throw.
Neeraj with SB: 88.88m
Kishore with PB: 87.54m (Also qualifies for Paris Olympics. #AGwithIAS | #IndiaAtAsianGames #AsianGames2022 pic.twitter.com/CRxQN9ZxL0— India_AllSports (@India_AllSports) October 4, 2023
ಪುರುಷರ 4 x 400 ಮೀಟರ್ ರಿಲೇನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಬಂದಿದೆ.
ಫೈನಲ್’ನಲ್ಲಿ ಮುಹಮ್ಮದ್ ಅನಾಸ್ ಯಾಹಿಯಾ, ಅಮೋಜ್ ಜಾಕೋಬ್, ಮುಹಮ್ಮದ್ ಅಜ್ಮಲ್ ವರಿಯಥೋಡಿ, ರಾಜೇಶ್ ರಮೇಶ್ 3:01.58 ಟೈಮಿಂಗ್’ನೊಂದಿಗೆ ಮೊದಲ ಸ್ಥಾನ ಪಡೆದು ಚಿನ್ನದ ಬೇಟೆಯಾಡಿದ್ದಾರೆ.
✨ 𝗛𝗜𝗦𝗧𝗢𝗥𝗜𝗖 𝗠𝗢𝗠𝗘𝗡𝗧 𝗔𝗧 𝗧𝗛𝗘 𝗔𝗦𝗜𝗔𝗡 𝗚𝗔𝗠𝗘𝗦! ✨
With this gold in archery, 🇮🇳's medal tally at #AsianGames2022 now stands tall at an incredible 71 medals! 🇮🇳🏅
Our athletes' dedication and hard work have made this moment possible🔥
Let's keep the cheers… pic.twitter.com/mgrB9ackxV
— SAI Media (@Media_SAI) October 4, 2023
ಮಹಿಳೆಯರ 4 x 400 ಮೀಟರ್ ರಿಲೇನಲ್ಲಿ ಭಾರತಕ್ಕೆ ಬೆಳ್ಳಿ. ವಿತ್ಯಾ ರಾಮರಾಜ್, ಐಶ್ವರ್ಯ ಕೈಲಾಶ್ ಮಿಶ್ರಾ, ಪ್ರಾಚಿ, ಶುಭಾ ವೆಂಕಟೇಶನ್ ತಂಡ ಫೈನಲ್’ನಲ್ಲಿ 2:03.75 ಟೈಮಿಂಗ್ ನೊಂದಿಗೆ ಎರಡನೆಯ ಸ್ಥಾನ ಪಡೆದರು.
ಏಷ್ಯನ್ ಗೇಮ್ಸ್ 2023ರಲ್ಲಿ ಭಾರತ ಇಲ್ಲಿಯವರೆಗೂ 18 ಚಿನ್ನ, 31 ಬೆಳ್ಳಿ ಮತ್ತು 32 ಕಂಚಿನ ಪದಕದೊಂದಿಗೆ 81 ಪದಕಗಳನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ. ಕಳೆದ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಒಟ್ಟಾರೆ 70 ಪದಕಗಳನ್ನು ಮಾತ್ರ ಗೆದ್ದಿತ್ತು.
Discussion about this post