No Result
View All Result
swr vigilance awareness campaign 2026 hubballi dharwad
English Articles

SWR Vigilance Dept Organizes Inter-School Competitions to Promote Integrity & Ethical Values

by kalpa News
September 24, 2026
0

Kalpa Media House  |  Hubballi | The Vigilance Department of South Western Railway (SWR) organized a series of inter-school competitions...

Read moreDetails
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
  • Advertise With Us
  • Grievances
  • About Us
  • Contact Us
Saturday, September 26, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಆಯುರ್ವೇದ ಪದ್ದತಿ ಅಳವಡಿಕೆಯಿಂದ ಆರೋಗ್ಯ-ಆಯುಷ್ಯ ವೃದ್ದಿ: ಸುಜಾತ

8ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ

kalpa News by kalpa News
November 11, 2023
in ಶಿವಮೊಗ್ಗ
0
ಆಯುರ್ವೇದ ಪದ್ದತಿ ಅಳವಡಿಕೆಯಿಂದ ಆರೋಗ್ಯ-ಆಯುಷ್ಯ ವೃದ್ದಿ: ಸುಜಾತ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   | ಶಿವಮೊಗ್ಗ |

ಇಂದಿನ ಧಾವಂತದ ಜೀವನ ಶೈಲಿ ಅನಾರೋಗ್ಯಕ್ಕೆ ಕಾರಣವಾಗುತ್ತಿದ್ದು, ಆಯುರ್ವೇದ ಪದ್ದತಿ ಅಳವಡಿಕೆಯಿಂದ ಉತ್ತಮ ಆರೋಗ್ಯ-ಆಯುಷ್ಯವನ್ನು ನಮ್ಮದಾಗಿಸಿಕೊಳ್ಳಬಹುದು ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೆ.ಆರ್. ಸುಜಾತ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಹಾಗೂ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆ ಶಿವಮೊಗ್ಗ, ಜಿಲ್ಲಾ ಸರ್ಕಾರಿ ನೌಕರರ ಸಂಘ, ಖಾಸಗಿ ವೈದ್ಯಕೀಯ ಮಹಾವಿದ್ಯಾಲಯಗಳು, ನೀಮಾ ಜಿಲ್ಲಾ ಘಟಕ, ಎಎಫ್‍ಐ ಜಿಲ್ಲಾ ಘಟಕ ಹಾಗೂ ಜಿಲ್ಲೆಯ ಇತರೆ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಇಂದು ಸುವರ್ಣ ಸಾಂಸ್ಕøತಿಕ ಭವನದಲ್ಲಿ ಏರ್ಪಡಿಸಲಾಗಿದ್ದ 8ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಮತ್ತು ಧನ್ವಂತರಿ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಿಕ್ಕವರಿಂದ ಹಿಡಿದು ಎಲ್ಲರೂ ಇಂದು ಧಾವಂತದಲ್ಲಿ ಬದುಕುತ್ತಿದ್ದು, ಸುಸ್ಥಿರವಲ್ಲದ ಜೀವನ ಶೈಲಿಯಿಂದ ರೋಗ ಮತ್ತು ಕೊರಗಿನ ಜೀವನ ನಡೆಸುತ್ತಿದ್ದೇವೆ. ನಮ್ಮ ಪ್ರಕೃತಿಯನ್ವಯ ಬದುಕುವುದನ್ನು ಬಿಟ್ಟು ಅಕ್ಕಪಕ್ಕದವರನ್ನು ನೋಡಿ ಸ್ಪರ್ಧೆಯಲ್ಲಿ ಬದುಕುತ್ತಾ ಜೀವನಶೈಲಿಯನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ತ್ವರಿತ ಪರಿಣಾಮಕ, ಫಲಿತಾಂಶ ನೀಡುವ ಪದ್ದತಿಗೆ ಮಾರು ಹೋಗಿದ್ದೇವೆ. ಪ್ರಾಣಿಗಳು ಸದಾ ಪ್ರಕೃತಿಯೊಂದಿಗೆ ಇರುವುದರಿಂದ ಅವುಗಳಿಗೆ ವಯಸ್ಸಾದರೂ ಅದು ಗೊತ್ತಾಗುವುದಿಲ್ಲ. ಸದಾ ಚಟುವಟಿಕೆಯಿಂದ, ಆಯುಷ್ಯದಿಂದಿರುತ್ತವೆ. ಅದೇ ನಾವು ನೀಡುವ ಆಹಾರ ತಿನ್ನುವ ಜಾನುವಾರು ರೋಗಕ್ಕೀಡಾಗುತ್ತವೆ. ಮಕ್ಕಳನ್ನು ಸಹ ನಾವು ಧಾವಂತಕ್ಕೆ, ಸ್ಪರ್ಧೆಗೆ ತಳ್ಳುತ್ತಿರುವುದರಿಂದ ಒತ್ತಡಕ್ಕೀಡಾಗುತ್ತಿದ್ದಾರೆ. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಶುರುವಾಗುತ್ತಿವೆ. ಔಷಧಿಗಳ ಜಾಹಿರಾತು ಸಹ ಹೆಚ್ಚುತ್ತಿದ್ದು ದೊಡ್ಡ ವ್ಯಾಪಾರದಂತೆ ಆಗಿದೆ.

ಆದ್ದರಿಂದ ನಾವು ಆಯುರ್ವೇದ ಪದ್ದತಿಯೊಂದಿಗೆ ಉತ್ತಮ ಜೀವನಶೈಲಿ ಅಳವಡಿಸಿಕೊಂಡು ಅನುಸರಿಸಬೇಕು. ಆಯುರ್ವೇದ ವಿದ್ಯಾರ್ಥಿಗಳು, ಯುವಜನತೆ ಎಲ್ಲೆಡೆ ಆಯುರ್ವೇದ ಪದ್ದತಿ ಕುರಿತು ಅರಿವು ಮೂಡಿಸಿ, ಎಲ್ಲರಿಗೂ ತಲುಪಿಸಬೇಕೆಂದು ತಿಳಿಸಿದರು.
ಶಿವಮೊಗ್ಗ ತಾಲ್ಲೂಕು ತಹಶೀಲ್ದಾರರಾದ ನಾಗರಾಜ್ ಮಾತನಾಡಿ, ನಗರ ಮತ್ತು ಗ್ರಾಮೀಣ ಭಾಗದಲ್ಲೆಲ್ಲ ಆಯುರ್ವೇದ ಪದ್ದತಿಯನ್ನು ಪ್ರಚಾರ ಮಾಡಬೇಕು. ಎಲ್ಲರೂ ಆಯುರ್ವೇದ ವೈದ್ಯ ಪದ್ದತಿಯನ್ನು ಅಳವಡಿಸಿಕೊಂಡು ಆರೋಗ್ಯಕರ ಜೀವನ ನಡೆಸಬೇಕೆಂದು ಕರೆ ನೀಡಿದರು.
ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆಯ ಪ್ರಾಚಾರ್ಯರಾದ ಡಾ.ಎಂ.ಎಸ್.ದೊಡ್ಡಮನಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಆಯುರ್ವೇದ ಪದ್ದತಿ ಕುರಿತು ಉತ್ತಮ ಕಾರ್ಯಕ್ರಮಗಳನ್ನು ನೀಡಿದೆ. ಆಯುರ್ವೇದ ವೈದ್ಯರ ಮುಖಾಂತರ ಚಿಕಿತ್ಸಾ ವಿಧಾನಗಳನ್ನು ಅಳವಡಿಸಿಕೊಂಡು ಸಾರ್ವಜನಿಕರು ಉಪಯೋಗ ಪಡೆಯಬೇಕೆಂದರು.

ಡಾ. ರವಿಶಂಕರ್ ಉಡುಪ ಪ್ರಾಸ್ತಾವಿಕವಾಗಿ ಮಾತನಾಡಿ, ಐದು ಸಾವಿರದಷ್ಟು ಪುರಾತನವಾದ ವೈದ್ಯ ಪದ್ದತಿ ಆಯುರ್ವೇದ. ಆಯುಷ್ಯವಂತರಾಗಿರಲು ಆಯುರ್ವೇದ ಪದ್ದತಿಯನ್ನು ಅನುಸರಿಸಬೇಕು. ಆಯುರ್ವೇದ ಪದ್ದತಿ ಅಳವಡಿಕೆಯಿಂದ ಆರೋಗ್ಯ ಮತ್ತು ಆಯುಷ್ಯ ವೃದ್ದಿಯಾಗುತ್ತದೆ. ರೋಗ ಬರುವುದಕ್ಕೂ ಮುನ್ನ ಆರೋಗ್ಯ ಕಾಪಾಡುವುದು ಹಾಗೂ ರೋಗ ಬಂದ ನಂತರ ಚಿಕಿತ್ಸೆ ನೀಡುವುದು ಆಯುರ್ವೇದ ಪದ್ದತಿಯ ಧ್ಯೇಯವಾಗಿದೆ. ಇತ್ತೀಚಿನ ಚಿಕ್ಕ ವಯಸ್ಸಿನವರಲ್ಲಿಯೂ ಅಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿದ್ದು ಇದಕ್ಕೆ ಕೇವಲ ಚಿಕಿತ್ಸೆ ನೀಡಿದರೆ ಸಾಲದು, ಬದಲಾಗಿ ಆಹಾರ, ವಿಹಾರ, ಜೀವನಶೈಲಿ ಬದಲಾವಣೆ ಮಾಡುವುದು ಅಗತ್ಯ. ಆಯುರ್ವೇದದಿಂದ ಇದನ್ನು ಮಾಡಬಹುದು. ಈ ಪದ್ದತಿ ಎಲ್ಲ ಜನತೆಗೆ ತಲುಪಬೇಕೆಂಬ ಉದ್ದೇಶದಿಂದ ಸರ್ಕಾರ 2016 ರಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಧನ್ವಂತರಿ ಜಯಂತಿಯ ಶುಭದಿನದಂದು ಆಚರಿಸಲು ನಿರ್ಧರಿಸಿತು.
ಆಯುರ್ವೇದ ದಿನಾಚರಣೆ ಪ್ರಯುಕ್ತ ಸೆ.28 ರಿಂದ ನ.9 ರವರೆಗೆ ವಿದ್ಯಾರ್ಥಿಗಳಿಗಾಗಿ ಆಯುರ್ವೇದ, ರೈತರಿಗಾಗಿ ಆಯುರ್ವೇದ ಮತ್ತು ಸಾರ್ವಜನಿಕರ ಆರೋಗ್ಯಕ್ಕಾಗಿ ಆರೋಗ್ಯವೆಂಬ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಹಾಗೂ ಇಂದು ಉಚಿತ ಆರೋಗ್ಯ ಶಿಬಿರ ಮತ್ತು ಡಾ.ಪತಂಜಲಿ ಮತ್ತು ಡಾ.ರವಿರಾಜ್‍ರಿಂದ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

Also read: ಎಚ್ಚರ! ಪಟಾಕಿ ಮಳಿಗೆಯಲ್ಲಿ ಮಕ್ಕಳನ್ನು ಬಳಸಿಕೊಂಡರೆ ಬೀಳತ್ತೆ ಕೇಸ್

ಜಿಲ್ಲಾ ಆಯುಷ್ ಅಧಿಕಾರಿ ಡಾ.ಎ.ಎಸ್.ಪುಷ್ಪ, ಆಯುರ್ವೇದ ಮಹಾವಿದ್ಯಾಲಯದ ಆರ್‍ಎಂಓ ಹರ್ಷಪುತ್ರಾಯ, ನೋಡಲ್ ಅದಿಕಾರಿ ಡಾ.ಶಿವಾನಂದ್, ಡಾ.ಈರಣ್ಣ, ಡಾ.ಸಂತೋಷ್, ಡಾ.ರಾಘವೇಂದ್ರ, ಡಾ.ಹಿರೇಮಠ್, ಇತರೆ ವೈದ್ಯರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.

https://kalpa.news/wp-content/uploads/2023/05/VID-20230516-WA0005.mp4

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: KannadaNewsKannadaNewsLiveKannadaNewsOnline ShivamoggaKannadaNewsWebsiteKannadaWebsiteLatestNewsKannadaLocalNewsMalnadNewsNewsinKannadaNewsKannadaShimogaShivamoggaShivamoggaNewsಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್
Share198Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಎಚ್ಚರ! ಪಟಾಕಿ ಮಳಿಗೆಯಲ್ಲಿ ಮಕ್ಕಳನ್ನು ಬಳಸಿಕೊಂಡರೆ ಬೀಳತ್ತೆ ಕೇಸ್

Next Post

ವಿಜಯೇಂದ್ರ ಪದಗ್ರಹಣ ಯಾವಾಗ? ಎಲ್ಲಿ ನಡೆಯಲಿದೆ ಅದ್ದೂರಿ ಕಾರ್ಯಕ್ರಮ?

kalpa News

kalpa News

Next Post
ಅನಗತ್ಯ ಟೀಕೆಗಳಿಗೆ ಕಿವಿಗೊಡದೆ ಸಹನೆ, ಸೌಜನ್ಯದಿಂದ ವರ್ತಿಸಿ: ವಿಜಯೇಂದ್ರ ಮನವಿ

ವಿಜಯೇಂದ್ರ ಪದಗ್ರಹಣ ಯಾವಾಗ? ಎಲ್ಲಿ ನಡೆಯಲಿದೆ ಅದ್ದೂರಿ ಕಾರ್ಯಕ್ರಮ?

Leave a Reply Cancel reply

Your email address will not be published. Required fields are marked *

No Result
View All Result
swr vigilance awareness campaign 2026 hubballi dharwad
English Articles

SWR Vigilance Dept Organizes Inter-School Competitions to Promote Integrity & Ethical Values

by kalpa News
September 24, 2026
0

Kalpa Media House  |  Hubballi | The Vigilance Department of South Western Railway (SWR) organized a series of inter-school competitions...

Read moreDetails
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL