ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದರೋಡೆ ಮಾಡಲು ಹೊಂಚು ಹಾಕಿದ್ದ ಖತರ್ನಾಕ್ ಗ್ಯಾಂಗೊಂದನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದು, ಮಾರಕಾಸ್ತ್ರಗಳೊಂದಿಗೆ ನಾಲ್ವರನ್ನು ಬಂಧಿಸಿದ್ದಾರೆ.
ಎನ್’ಟಿ ರಸ್ತೆಯ ಖಾಲಿ ಜಾಗವೊಂದರ ಬಳಿಯಲ್ಲಿನ ರಸ್ತೆಯಲ್ಲಿ ವಾಹನ ಹಾಗೂ ಜನರನ್ನು ತಡೆದು ದರೋಡೆ ಮಾಡಲು ಈ ಗ್ಯಾಂಗ್ ದರೋಡೆಗೆ ಹೊಂಚು ಹಾಕಿತ್ತು.
ಖಚಿತ ಮಾಹಿತಿ ಆಧರಿಸಿ ಪಿಎಸ್’ಐ ವಸಂತ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು, ಮಾರಕಾಸ್ತ್ರಗಳೊಂದಿಗೆ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಕಬ್ಬಿಣದ ರಾಡು, ಮಚ್ಚು, 50 ಗ್ರಾಂ ತೂಕದ ಖಾರದ ಪುಡಿ, ಸ್ಟೀಲ್ ಡ್ರಾಗರ್’ಗಳನ್ನು ವಶಕ್ಕೆ ಪಡೆಯಲಾಗಿದೆ.
Also read: ತರೀಕೆರೆ | ಪಟಾಕಿ ಸಿಡಿದು ಮೇಲಕ್ಕೆ ಹಾರಿ ಬಿದ್ದು ಯುವಕ ಸಾವು
ಬಂಧಿತ ಆರೋಪಿಗಳನ್ನು ಶಿವಮೊಗ್ಗದ ಸಾಗರ್(22), ಶ್ರೇಯಸ್(22), ಭದ್ರಾವತಿಯ ದೇವರಾಜ್(31) ಹಾಗೂ ನಾಗರಾಜ್(38) ಎಂದು ಗುರುತಿಸಲಾಗಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















