ಮಾರ್ಗಶಿರ ಶುದ್ಧ ಏಕಾದಶಿ ಎಂದು ಶ್ರೀಕೃಷ್ಣ ಭಗವದ್ಗೀತೆಯನ್ನು ಉಪದೇಶಿಸಿದ ದಿನವಾಗಿದೆ. ಇದರ ಅಂಗವಾಗಿ ಡಿ.21ರಿಂದ 23ರವರೆಗೆ ಭಗವದ್ಗೀತೆ ಆಧಾರಿತ ವಿಶೇಷ ವಿಶ್ಲೇಷಣಾತ್ಮಕ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗಿದೆ. 21ರಂದು ಸಂಜೆ 6ಕ್ಕೆ ಶ್ರೀಮನ್ ಮದ್ವಸೇವಾ ಸಮಿತಿಯ ನಿರ್ದೇಶಕ ಎಂ.ಜಿ.ರಾಮಚಂದ್ರಮೂರ್ತಿ ಈ ಕಾರ್ಯಕ್ರಮವನ್ನು ಉದ್ಘಾಟಿಸುವರು. ಭಗವದ್ಗೀತೆ, ಭಕ್ತಿಯೋಗ ವಿಷಯ ಕುರಿತು ಪುತ್ತೂರಿನ ವಾಗ್ಮಿ ಲಕ್ಷ್ಮೀಶ ತೋಳ್ಪಾಡಿ ವಿಶೇಷ ಉಪನ್ಯಾಸ ನೀಡುವರು ಎಂದರು.
Also read: ಅಪರಾಧ ಚಟುವಟಿಕೆಗಳ ನಿಯಂತ್ರಿಸಲು ಸಾರ್ವಜನಿಕ ಸಹಕಾರ ಅಗತ್ಯ: ಎಸ್‌ಪಿ ಮಿಥುನ್ ಕುಮಾರ್
22ರಂದು ಸಂಜೆ 6ಕ್ಕೆ ಭಗವದ್ಗೀತೆ ಮತ್ತು ಕರ್ಮಯೋಗ ಕುರಿತು ತೋಳ್ಪಾಡಿಯವರೇ ಉಪನ್ಯಾಸ ನೀಡುತ್ತಾರೆ. 23ರಂದು ಸಂಜೆ ಕಾಸರಗೋಡಿನ ಶಿಕ್ಷಕ ಹಾಗೂ ವಾಗ್ಮಿ ಸುಬ್ರಾಯ ನಂದೋಡಿ ಭಗವದ್ಗೀತೆ-ಜ್ಞಾನಯೋಗ ಕುರಿತು ಉಪನ್ಯಾಸ ನೀಡುವರು. ಸಮಾರೋಪ ಸಮಾರಂಭ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಮಹಾಸಭಾದ ಪದಾಧಿಕಾರಿಗಳು ಹಾಗೂ ಶಿವಮೊಗ್ಗ ಶೃಂಗೇರಿ ಮಠದ ಧರ್ಮಾಧಿಕಾರಿ ಡಾ.ಪಿ.ನಾರಾಯಣ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದರು.
ಕನ್ನಡ ಅಷ್ಟಾವಧಾನ : ಡಿ.24ರಂದು ಸಂಜೆ 5.30ಕ್ಕೆ ಅಭಿರುಚಿ ಭಾರತೀಯ ಸಾಂಸ್ಕøತಿ ವೇದಿಕೆಯಿಂದ ಕನ್ನಡ ಅಷ್ಟಾವಧಾನ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ನಿಷೇಧಾಕ್ಷರ ದತ್ತಪದಿ ಸಮಸ್ಯಾಪೂರ್ಣ, ಅಪ್ರಸ್ತುತ ಪ್ರಸಂಗ, ಆಶು ಕವಿತೆ, ಕಾವ್ಯವಾಚನ, ಸಂಖ್ಯಾಬಂಧ, ಚಿತ್ರಕವಿತೆ ಕಾರ್ಯಕ್ರಮಗಳು ಇರುತ್ತವೆ ಎಂದು ಕಾರ್ಯದರ್ಶಿ ಕೆ.ಜಿ.ಕುಮಾರಶಾಸ್ತ್ರಿ ತಿಳಿಸಿದರು.ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post