No Result
View All Result
Mysuru Project Assistant Job Kits Leap 22 K Salary
English Articles

Mysuru Job Alert : Project Assistant Vacancy, 22,000 Salary, Apply by Oct 10

by kalpa News
September 21, 2026
0

Kalpa Media House  |  Mysuru  | Applications have been invited for one Project Assistant post for the Optical Sensing Biotechnology...

Read moreDetails
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
  • Advertise With Us
  • Grievances
  • About Us
  • Contact Us
Monday, September 21, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಸದೃಢ ರಾಷ್ಟ್ರ ಕಟ್ಟುವ ವಿವೇಕಾನಂದರ ಕನಸನ್ನು ನನಸಾಗಿಸಲು ಯುವಜನತೆ ಕೈಜೋಡಿಸಬೇಕು: ಡಿಸಿ ಸೆಲ್ವಮಣಿ

kalpa News by kalpa News
January 17, 2024
in ಶಿವಮೊಗ್ಗ
0
ಸದೃಢ ರಾಷ್ಟ್ರ ಕಟ್ಟುವ ವಿವೇಕಾನಂದರ ಕನಸನ್ನು ನನಸಾಗಿಸಲು ಯುವಜನತೆ ಕೈಜೋಡಿಸಬೇಕು: ಡಿಸಿ ಸೆಲ್ವಮಣಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ   |

ಯಾವುದೇ ಕೆಲಸವನ್ನು ಬದ್ದತೆ ಮತ್ತು ಶ್ರದ್ದೆಯಿಂದ ಮಾಡುವುದೇ ನಾವು ದೇಶಕ್ಕೆ ನೀಡುವ ಕೊಡುಗೆ ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ DC Selvamani ನುಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ದೇಶೀಯ ವಿದ್ಯಾಶಾಲಾ ಸಮಿತಿ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಯುವ ಸೌರಭ ಕಾರ್ಯಕ್ರಮ ಹಾಗೂ ನೆಹರು ಯುವ ಕೇಂದ್ರದಿಂದ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುವಜನತೆಯ ಆದರ್ಶಪುರುಷ ಸ್ವಾಮಿ ವಿವೇಕಾನಂದರು. ನಮ್ಮ ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಯುವಜನರಿದ್ದು ಅವರು ದೇಶಕ್ಕೆ ಉತ್ತಮ ಕೊಡುಗೆಯಾಗಿ ರೂಪುಗೊಳ್ಳಬೇಕು. ಚೀನಾ ದೇಶಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿ, ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ. ಇಂತಹ ದೇಶದಲ್ಲಿ ಯುವಜನತೆಗೆ ಹೆಚ್ಚಿನ ಕೌಶಲ್ಯಗಳನ್ನು ನೀಡುವ ಮೂಲಕ ಮುಖ್ಯವಾಹಿನಿಗೆ ತರಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯುವಜನತೆಗೆ ಬಹಳಷ್ಟು ಯೋಜನೆಗಳನ್ನು ರೂಪಿಸಿದ್ದು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಹಾಗೂ ಸದೃಢ ರಾಷ್ಟ್ರ ಕಟ್ಟುವ ವಿವೇಕಾನಂದರ ಕನಸನ್ನು ನನಸು ಮಾಡಲು ಎಲ್ಲ ಯುವಜನತೆ ಕೈಜೋಡಿಸಬೇಕು ಎಂದರು.
ಸಾಗರದ ನಿವೃತ್ತ ಪ್ರಾಂಶುಪಾಲ ಪ್ರೊ.ಪಂಚಾಕ್ಷರಯ್ಯ ಹೆಚ್.ಬಿ ರಾಷ್ಟ್ರೀಯ ಯುವ ಸಪ್ತಾಹದ ಅಂಗವಾಗಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಸ್ವಾಮಿ ವಿವೇಕಾನಂದರು ಓರ್ವ ಮಹಾಚಿಂತಕ. ದೇಶಭಕ್ತ. ಯುವಜನತೆಯ ಪ್ರೇರಣೆ. ಇವರು ಮುಖ್ಯವಾಗಿ 3 ತತ್ವಗಳಲ್ಲಿ ನಂಬಿಕೆ ಇಟ್ಟವರು. ಆಶಾವಾದ, ಸ್ವಾವಲಂಬನೆ ಮತ್ತು ಸಮಾಜ ಬದಲಾವಣೆಗಾಗಿ ವೈಜ್ಞಾನಿಕ ಚಿಂತನೆ. ಭಾರತವನ್ನು ಅರ್ಥಪೂರ್ಣ, ಸೌಹಾರ್ಧಯುತ ಮತ್ತು ಸುಂದರಗೊಳಿಸುವುದು ನಮ್ಮೆಲ್ಲರ ಹೊಣೆ. ಹೀಗೆ ಮಾಡಲು ಯುವಜನತೆಯ ವ್ಯಕ್ತಿತ್ವ ವಿಕಸನವಾಗಬೇಕು, ಕ್ರಿಯಾಶೀಲರಾಗಬೇಕು. ಸಂಕಷ್ಟಗಳಿಗೆ ಪರಿಹಾರ ಕಂಡುಕೊಂಡು ಸ್ವಾವಲಂಬಿ ಜೀವನ ನಡೆಸುವುದನ್ನು ನಾವೆಲ್ಲ ಕಲಿಯಬೇಕು. ಅರಿವನ್ನು ಹೊಂದಬೇಕೆಂಬುದು ಸ್ವಾಮಿ ವಿವೇಕಾನಂದರ ಆಶಯವೆಂದರು.

ಜಿಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ಮಾತನಾಡಿ, ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ತುಂಬಾ ಪ್ರಮುಖವಾಗಿದ್ದು, ಈ ನಿಟ್ಟಿನಲ್ಲಿ ಯುವಜನತೆ ಗಮನ ಹರಿಸಬೇಕು. ಹಾಗೂ ನೆಹರು ಯುವ ಕೇಂದ್ರ ಯುವಜನತೆಯ ವ್ಯಕ್ತಿತ್ವ ವಿಕಸನಗೊಳಿಸುವಲ್ಲಿ, ರೂಪಿಸುವಲ್ಲಿ ಸಹಕರಿಸುತ್ತದೆ. ಇದರ ಸದುಪಯೋಗವನ್ನು ಯುವಜನತೆ ಪಡೆಯಬೇಕೆಂದರು.
Kalahamsa Infotech private limitedದೇಶೀಯ ವಿದ್ಯಾಶಾಲಾ ಸಮಿತಿ ಉಪಾಧ್ಯಕ್ಷರಾದ ಎಸ್.ಪಿ.ದಿನೇಶ್ ಮಾತನಾಡಿ, ವಿವೇಕಾನಂದರಂತಹ ಆದರ್ಶ ಪುರುಷರ ತತ್ವಗಳನ್ನು ಬಹುತೇಕ ಯುವಜನತೆ ಅಳವಡಿಸಿಕೊಳ್ಳುತ್ತಿಲ್ಲ ಅನ್ನೋದು ವೇದನೆ. ಪ್ರಸ್ತುತ ಮೊಬೈಲ್ ಯುವಮನಸ್ಸುಗಳನ್ನು ಹಾಳು ಮಾಡುತ್ತಿದ್ದು ಇದರ ಬಗ್ಗೆ ಎಚ್ಚೆತ್ತುಕೊಂಡು ತಂತ್ರಜ್ಞಾನವನ್ನು ಒಳ್ಳೆಯ ರೀತಿ ಬಳಕೆ ಮಾಡಿಕೊಳ್ಳಬೇಕು. ಈಗ ನಾವು ಕಲಿತಿದ್ದು ಮುಂದಿನ ಜೀವನಕ್ಕೆ ಅಡಿಪಾಯವಾಗುತ್ತದೆ. ಆದ್ದರಿಂದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದ ಅವರು ಸ್ವ್ವಾಮಿ ವಿವೇಕಾನಂದರು ನಮ್ಮ ದಾರಿದೀಪ. ಅವರ ಕೆಲವಾದರೂ ತತ್ವಗಳನ್ನು ಅಳವಡಿಸಿಕೊಳ್ಳೋಣ ಎಂದರು.

ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರದ ಯುವ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿಗಳು ಬ್ಯಾಡ್ಜ್ ಗಳನ್ನು ವಿತರಿಸಿದರು. ಹಾಗೂ ಮೈ ಭಾರತ್ ವಿಕಸಿತ್ ಭಾರತ್ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಜಿಲ್ಲೆಯನ್ನು ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿದ ಅಲ್ತಾಫ್ ರೆಹಮಾನ್ ರನ್ನು ಸನ್ಮಾನಿಸಲಾಯಿತು.

Also read: ಶಿಕ್ಷಕರು ಉತ್ತಮ ನಡವಳಿಕೆಯನ್ನು ರೂಢಿಸಿಕೊಳ್ಳಿ: ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಸಲಹೆ

ಯುವ ಸೌರಭ ಕಾರ್ಯಕ್ರಮದಲ್ಲಿ ಸಾಗರದ ಸುಹಾನ್ ಸಯ್ಯದ್ ಮತ್ತು ತಂಡ ಸುಗಮ ಸಂಗೀತ, ಶಿರಸಿಯ ರಜತ್ ಹೆಗಡೆ ಮತ್ತು ತಂಡ ಜನಪದ ಗೀತೆಗಳು, ಶಿವಮೊಗ್ಗದ ಮನು ಕಲಾ ಕೇಂದ್ರವರು ಸಮೂಹ ನೃತ್ಯ, ಶಿವಮೊಗ್ಗದ ರೋಹನ್ ಮತ್ತು ತಂಡ ಕರಗ ನೃತ್ಯ, ಭದ್ರಾವತಿಯ ರಂಗನಾಥ್ ಮತ್ತು ತಂಡ ಡೊಳ್ಳು ಕುಣಿತ, ಬೆಂಗಳೂರಿನ ಪ್ರಶಾಂತ್ ಶೆಟ್ಟಿ ಮತ್ತು ತಂಡ ‘ಸತಿ’ ನಾಟಕ ಪ್ರದರ್ಶಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉಮೇಶ್ ಹೆಚ್ ಸ್ವಾಗತಿಸಿದರು. ಡಿವಿಎಸ್ ಸಂಸ್ಥೆಯ ಕಾರ್ಯದರ್ಶಿ ಎಸ್.ರಾಜಶೇಖರ್, ಕುವೆಂಪು ವಿವಿ ಎನ್‍ಎಸ್‍ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ನಾಗರಾಜ್ ಪರಿಸರ, ನೆಹರು ಯುವ ಕೇಂದ್ರದ ಯುವ ಅಧಿಕಾರಿ ಉಲ್ಲಾಸ್ ಕೆಟಿಕೆ ಡಿವಿಎಸ್ ಪ್ರಾಂಶುಪಾಲ ಡಾ.ಎಂ. ವೆಂಕಟೇಶ್ ಪಾಲ್ಗೊಂಡಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: DC SelvamaniKannada NewsKannada News LiveKannada News Online ShivamoggaKannada News WebsiteKannada WebsiteLatest News KannadaLocal NewsMalnad NewsNews in KannadaNews KannadaShimogaShivamogga Newsಜಿಲ್ಲಾಧಿಕಾರಿ ಡಾ. ಸೆಲ್ವಮಣಿಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಶಿಕ್ಷಕರು ಉತ್ತಮ ನಡವಳಿಕೆಯನ್ನು ರೂಢಿಸಿಕೊಳ್ಳಿ: ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಸಲಹೆ

Next Post

ಮದುವೆಗೆ ಹೆಣ್ಣು ಕೊಡುತ್ತಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಯುವಕ

kalpa News

kalpa News

Next Post
IIT Mumbai student suicide chatgpt exam mobile use

ಮದುವೆಗೆ ಹೆಣ್ಣು ಕೊಡುತ್ತಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಯುವಕ

Leave a Reply Cancel reply

Your email address will not be published. Required fields are marked *

No Result
View All Result
Mysuru Project Assistant Job Kits Leap 22 K Salary
English Articles

Mysuru Job Alert : Project Assistant Vacancy, 22,000 Salary, Apply by Oct 10

by kalpa News
September 21, 2026
0

Kalpa Media House  |  Mysuru  | Applications have been invited for one Project Assistant post for the Optical Sensing Biotechnology...

Read moreDetails
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL