ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ಪುನಾರಂಭಕ್ಕೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ #J P Nadda ಹೇಳಿದ್ದಾರೆ.
ಪೆಸಿಟ್ ಪ್ರೇರಣಾ ಸಭಾಂಗಣದಲ್ಲಿ ಆಯೋಜಿಸಿದ್ದ ವೃತ್ತಿಪರರ ಜೊತೆಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Also read: ಕೆ.ಎಸ್. ಈಶ್ವರಪ್ಪ ಅವರನ್ನು ಬೆಂಬಲಿಸಲು ತೀ.ನಾ. ಶ್ರೀನಿವಾಸ್ ನೀಡಿದ ಕಾರಣಗಳೇನು?
ಆದರೆ ದಕ್ಷಿಣ-ಉತ್ತರ ಭಾರತದ ವಿಭಜನೆಯ ಬಗ್ಗೆ ಕಾಂಗ್ರೆಸ್ಸಿಗರು ಮಾತನಾಡುತ್ತಾರೆ. ಅದರಲ್ಲೂ ಕರ್ನಾಟಕದ ಸಂಸತ್ ಸದಸ್ಯ ಮಾತನಾಡಿದ್ದು ನೋವು ತಂದಿದೆ. ಇಂತವರಿಗೆ ಸಾರ್ವಜನಿಕ ಕ್ಷೇತ್ರದಲ್ಲಿ ಅವಕಾಶ, ಮತ್ತೊಮ್ಮೆ ಲೋಕಸಭೆಗೆ ಅವಕಾಶ ನೀಡಬೇಕಾ ಎಂದು ಪ್ರಶ್ನೆ ಮಾಡಿದರು.

ಜಾತಿ ಯಾವುದು, ಪ್ರಾದೇಶಿಕತೆ ಯಾವುದು? ಎಂದು ನೋಡುವ ಕಾಲ ಒಂದಿತ್ತು. ಆದರೆ ಈಗ ಅದೆಲ್ಲಾ ಹೋಗಿದೆ. ರಾಜಕೀಯ ಸಂಸ್ಕøತಿ ಬದಲಾಗಿದೆ. ರಾಘವೇಂದ್ರ ಐದು ವರ್ಷಗಳ ಸಾಧನೆಯ ಬಗ್ಗೆ ಮಾತನಾಡುತ್ತಾರೆ. ಉಳಿದವರು ವಿಭಜನೆ ಬಗ್ಗೆ ಮಾತನಾಡುತ್ತಾರೆ. ರಷ್ಯಾ, ಚೀನಾ, ಜಪಾನ್ ಅಮೆರಿಕಾ ಎಲ್ವೂ ಆರ್ಥಿಕ ಸಂಕಷ್ಟ. 11 ನೇ ಸ್ಥಾನ. ಈಗ ಬ್ರಿಟನ್ ಹಿಂದಿಕ್ಕಿ ಐದನೇ ಸ್ಥಾನ. 2026 ರ ಹೊತ್ತಿಗೆ ಮೂರನೇ 138 ರಷ್ಟು ರಫ್ತು ಹೆಚ್ಚಳ ಆಗಿದೆ. ಪೆಟ್ರೋಕೆಮಿಕಲ್ 106 ರಷ್ಟು ಹೆಚ್ಚು ಆಗಿದೆ. ಗಣೇಶ ವಿಗ್ರಹ ಕೂಡಾ ಚೀನಾದಿಂದ ಬರುತ್ತಿತ್ತು. ಆಟಿಕೆಗಳು ಚೀನಾದಿಂದ ಬರುತ್ತಿತ್ತು.ವೀಗ ಇಲ್ಲಿಯೇ ಸ್ಟಿಲ್ ತಯಾರಿಕೆ ಎರಡನೇ ಸ್ಥಾನ ಇದ್ದೇವೆ ಎಂದರು.

ಹಿಂದೆ ಶಾಸಕ, ಸಂಸದರು ಪತ್ರ ಬರೆಯಬೇಕಿತ್ತು. ಯಾರಿಗಾದರೂ ಆರೋಗ್ಯ ರಕ್ಷಣೆ ಬೇಕೆಂದರೆ ಧನ ಸಹಾಯ ಮಾಡಲು. ಈಗ ಆಯುಷ್ಮಾನ್ ಭಾರತ್ ಅಡಿ ಚಿಕಿತ್ಸೆ. 70 ವರ್ಷ ದಾಟಿದ ಮಹಿಳೆಯರಿಗೆ 05 ಲಕ್ಷ ವರೆಗೆ ಉಚಿತ ಚಿಕಿತ್ಸೆ. ಹೆಲಿಕಾಪ್ಟರ್ ತಯಾರಿಕೆ ಕರ್ನಾಟಕ ಆಗಲಿದೆ.

ಅಂಬೇಡ್ಕರ್ ಖಚಿತವಾಗಿ ಧಾರ್ಮಿಕ ಮೀಸಲಾತಿ ಇಲ್ಲ ಎಂದು ಹೇಳಿದ್ದಾರೆ. ಆದರೆ ಒಬಿಸಿಯಲ್ಲಿ ಮುಸ್ಲಿಂ ಮೀಸಲಾತಿ ಸಿದ್ದರಾಮಯ್ಯ ನೀಡಿದ್ದಾರೆ. ನಾವು ಮುಸ್ಲಿಂ ವಿರೋಧಿ ಅಲ್ಲ. ಆದರೆ ಓಬಿಸಿಯಲ್ಲಿ ಮೀಸಲಾತಿ ಕೊಡಲು ವಿರೋಧ ಇದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post