ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದಾದ್ಯಂತ ಬೆಲೆ ಏರಿಕೆ ಬಿಸಿ ತಟ್ಟಿರುವ ಬೆನ್ನಲ್ಲೇ ನಂದಿನಿ ಹಾಲು #NandiniMilk ಪ್ರತಿ ಲೀಟರ್’ಗೆ 2 ರೂಪಾಯಿ ಏರಿಕೆ ಮಾಡಲಾಗಿದ್ದು, ನಾಳೆಯಿಂದಲೇ ಬೆಲೆ ಹೆಚ್ಚಳದ ಬಿಸಿ ತಟ್ಟಲಿದೆ.
ಈ ಕುರಿತಂತೆ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಭೀಮನಾಯ್ಕ್ ಮಾಹಿತಿ ನೀಡಿದ್ದು, ನಾಳೆಯಿಂದಲೇ ಬೆಲೆ ಏರಿಕೆಯಾಗಲಿದ್ದು, 44 ರೂ. ಆಗಲಿದೆ ಎಂದಿದ್ದಾರೆ.
ಪ್ರತಿ ಲೀಟರ್ ಹಾಲಿಗೆ 2 ರೂ. ಹಾಗೂ ಅರ್ಧ ಲೀಟರ್ ಹಾಲಿನ ದರ 22 ರೂ. ನಿಂದ 24 ರೂ.ಗೆ ಹೆಚ್ಚಿಸಲಾಗಿದೆ. ಆದರೆ ಗ್ರಾಹಕರಿಗೆ ಸಿಗುತ್ತಿದ್ದ 1,000 ಎಂಎಲ್ (1 ಲೀಟರ್) ಪ್ಯಾಕೆಟ್ ಹಾಲು ಇನ್ಮುಂದೆ 1,050 ಎಂಎಲ್ ಹಾಗೂ ಅರ್ಧ ಲೀಟರ್ ಪ್ಯಾಕೆಟ್ ಹಾಲು 550 ಎಂಎಲ್ ಹೆಚ್ಚುವರಿ ಸಿಗಲಿದೆ ಎಂದಿದ್ದಾರೆ.
ಕೆಎಂಎಫ್ #KMF ಇಡೀ ರಾಷ್ಟ್ರದಲ್ಲಿ ಅತಿ ದೊಡ್ಡ ಎರಡನೇ ದೊಡ್ಡ ಹಾಲಿನ ಮಂಡಳಿಯಾಗಿದ್ದು, 98 ಲಕ್ಷದ 17 ಸಾವಿರ ಲೀಟರ್ ಹಾಲು ನಮ್ಮಲ್ಲಿ ಶೇಖರಣೆ ಆಗುತ್ತಿದೆ. ಒಂದು ಕೋಟಿ ಲೀಟರ್ ಹಾಲಿನ ಶೇಖರಣೆ ಮಾಡಲು ಸಿದ್ಧರಾಗಿದ್ದೇವೆ ಎಂದಿದ್ದಾರೆ.
ಬೇರೆ ರಾಜ್ಯಗಳಲ್ಲಿನ ಹಾಲಿನ ದರ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಪ್ಯಾಕೆಟ್ ಹಾಲಿನ ಬೆಲೆ ಕಡಿಮೆ ಇದೆ ಎಂದು ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post