ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ನಗರದ ವಾದಿ ಎ ಹುದಾ ಬಡಾವಣೆ 2ನೇ ಮುಖ್ಯ ರಸ್ತೆ 5ನೇ ಕ್ರಾಸ್ ನಲ್ಲಿ ಕೌಟಂಬಿಕ ಕಲಹದ ಹಿನ್ನೆಲೆಯಲ್ಲಿ, ಗಂಡನಿಂದಲೇ ಹೆಂಡತಿಗೆ ಚೂರಿಯಿಂದ ಇರಿದು ಕೊಲೆ #Wife Murder by Husband ಮಾಡಿರುವ ಘಟನೆ ನಡೆದಿದೆ.
ಎಸಿ ಮೆಕಾನಿಕ್ ಕೆಲಸ ಮಾಡುವ ಯೂಸೂಫ್ ರೌಫ್ (45) ಆರೋಪಿತ ಪತಿ. ರುಕ್ಸನಾ (38) ಕೊಲೆಗೀಡಾದ ಪತ್ನಿ ಎಂದು ಗುರುತಿಸಲಾಗಿದೆ. ತುಂಗಾನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಎಸ್ಪಿ ಜಿ ಕೆ ಮಿಥುನ್ ಕುಮಾರ್, ಡಿವೈಎಸ್ಪಿ ಬಾಬು ಅಂಜನಪ್ಪ, ಇನ್ಸ್’ಪೆಕ್ಟರ್ ಕೆ ಟಿ ಗುರುರಾಜ್ ಮತ್ತವರ ಸಿಬ್ಬಂದಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.
ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 















