ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರಾವಳಿಯ ವೀರ, ಶ್ರೀಮಂತ ಐತಿಹಾಸಿಕ ಕ್ರೀಡೆ `ಕಂಬಳ’ #Kambala ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ನಡೆಯಲಿದ್ದು, ಇದರ ಟ್ರಾö್ಯಕ್ ನಿರ್ಮಾಣದ ಭೂಮಿಪೂಜೆಗೆ ದಿನಾಂಕ ನಿಗದಿಪಡಿಸಲಾಗಿದೆ.
ಫೆ. 10ರಂದು ಮಧ್ಯಾಹ್ನ 3 ಗಂಟೆಗೆ ಮಾಚೇನಹಳ್ಳಿಯ ತುಂಗಭದ್ರಾ ಜಂಕ್ಷನ್ ಪ್ರದೇಶದಲ್ಲಿ ಟ್ರಾö್ಯಕ್ ನಿರ್ಮಾಣವಾಗಲಿದ್ದು, ಇಲ್ಲಿಯೇ ಭೂಮಿಪೂಜೆಯೂ ಸಹ ನಡೆಯಲಿದೆ.
ಶಿವಮೊಗ್ಗದ ಸಾಂಸ್ಕೃತಿಕ ಪರಂಪರೆಯಲ್ಲಿ ಹೊಸ ಅಧ್ಯಾಯ ಸೃಷ್ಠಿಸಲಿರುವ ತುಳುನಾಡಿ ವೀರ ಜಾನಪದ ಪ್ರತಿಷ್ಠಿತ ಶ್ರೀಮಂತ ಐತಿಹಾಸಿಕ ಕ್ರೀಡೆ `ಕಂಬಳ’ ಇದೇ ಮೊದಲ ಬಾರಿಗೆ ನಗರದಲ್ಲಿ ನಡೆಯಲಿದೆ.
Also read: ನಮ್ಮ ಭಾರತದ ಕುಲಕಸುಬುಗಳ ಮೇಲೆ ಜಾಗತೀಕರಣದ ದುಷ್ಪರಿಣಾಮ
ಭೂಮಿ ಪೂಜೆ ಕಾರ್ಯಕ್ರಮದ ಜೊತೆಯಲ್ಲಿಯೇ ಕಂಬಳದ ಲೋಗೋ ಅಧಿಕೃತ ಅನಾವರಣ, ಅಧಿಕೃತ ವೆಬ್ ಸೈಟ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್ ಫಾಮ್’ಗಳ ಪ್ರಾರಂಭವೂ ಸಹ ನಡೆಯಲಿದೆ.
ಮಲೆನಾಡ ತುಂಗಭದ್ರಾ ಜೋಡುಕೆರೆ ಕಂಬಳದಲ್ಲಿ ನಮ್ಮ ಸಂಪ್ರದಾಯ ಅನಾವರಣಗೊಳ್ಳಲಿದ್ದು, ಪರಂಪರೆಯ ಪಯಣದಲ್ಲಿ ಸಾರ್ವಜನಿಕರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ ಎಂದು ತುಂಗಭದ್ರಾ ಜೋಡುಕೆರೆ ಕಂಬಳ ಸಮಿತಿ ಅಧ್ಯಕ್ಷ ಮುಚ್ಚೂರು ಕಲ್ಕುಡೆ ಲೋಕೇಶ್ ಶೆಟ್ಟಿ ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post