ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಲ್ಲಿನ ಊರುಗಡೂರು ವೃತ್ತದಲ್ಲಿ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಶಬ್ಬೀರ್(32) ಎಂದು ಗುರುತಿಸಲಾಗಿದ್ದು, ಪ್ರೀತಿ ವಿಚಾರಕ್ಕೆ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಘಟನೆ ಕುರಿತಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರು ವಾಟ್ಸಪ್ ಮೂಲಕ ಮಾಹಿತಿ ನೀಡಿದ್ದಾರೆ.
ಮಾರಣಾಂತಿಕವಾಗಿ ಹಲ್ಲೆಗೊಳಗಾಗಿರುವ ಶಬ್ಬೀರನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಎಸ್’ಪಿ ಮಿಥುನ್ ಕುಮಾರ್, ಅಡಿಷನಲ್ ಎಸ್ಪಿ ಕಾರ್ಯಪ್ಪ, ತುಂಗ ನಗರ ಪೊಲೀಸ್ ಠಾಣೆಯ ಪಿಐ ಗುರುರಾಜ್ ಸ್ಥಳಕ್ಕೆ ಧಾವಿಸಿದ್ದಾರೆ.
ಫರ್ದೀನ್ ಎಂಬಾತ ಶಬ್ಬೀರ್ ಸಹೋದರಿ ಸಲ್ಮಿಯಾಳನ್ನು ಮದುವೆಯಾಗಿದ್ದನು. ಈ ಮದುವೆ ಕುರಿತಂತೆ ತಕರಾಗಿತ್ತು, ಈ ವಿವಾಹದ ಬಗ್ಗೆ ಕುಟುಂಬ ವಿರೋಧಿಸುತ್ತಿತ್ತು. ಅಣ್ಣ ಶಾಬಾಜ್ ಮತ್ತು ಸಂಬಂಧಿಕ ಶಬ್ಬೀರ್’ನ ಮೇಲೆ ತಂಗಿಯ ಪತಿಯ ಕಡೆಯವರು ಬಂದು ಹಲ್ಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮತ್ತೋರ್ವ ಇದರಲ್ಲಿಗಾಯಗೊಂಡಿದ್ದಾನೆ.
ಫರ್ದೀನ್ ಮತ್ತು ಸಲ್ಮಿಯಾ ಕೆಲವು ವರ್ಷಗಳಿಂದ ಕೆಲವು ವಿವಾದಗಳಿಂದಾಗಿ ಒಟ್ಟಿಗೆ ವಾಸಿಸುತ್ತಿರಲಿಲ್ಲ. ಶಬ್ಬೀರ್ ಮತ್ತು ಶಬಾಜ್ ಮತ್ತು ಆತನ ಸಹೋದರ ಫರ್ದೀನ್ ಅವರನ್ನು ಯಾವಾಗಲೂ ಬೆದರಿಸುತ್ತಿದ್ದರು. ಆದ್ದರಿಂದ ಈ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post