ಕಲ್ಪ ಮೀಡಿಯಾ ಹೌಸ್ | ಸೊರಬ |
ರಾಜ್ಯವನ್ನು ಕಾಲುಬಾಯಿ ರೋಗ ಮುಕ್ತವನ್ನಾಗಿಸುವ ಸಂಕಲ್ಪ ಮಾಡೋಣ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ #Minister Madhu Bangarappa ಕರೆ ನೀಡಿದರು.
ಸೊರಬ ತಾಲೂಕಿನ ಗಿಣಿವಾಲ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಲಸಿಕಾದಾರರು ನಿಮ್ಮ ಮನೆ ಬಾಗಿಲಿಗೆ ಭೇಟಿ ನೀಡಿ ಜಾನುವಾರುಗಳಿಗೆ ಲಸಿಕೆ ಹಾಕಲಿದ್ದಾರೆ. ರೈತರು ನಿರ್ಲಕ್ಷ್ಯವಹಿಸದೇ ಅವರಿಗೆ ಸಹಕರಿಸಿ ರೋಗ ಬಾರದಂತೆ ಜಾನುವಾರುಗಳನ್ನು ರಕ್ಷಿಸಿಸುವಂತೆ ಹೇಳಿದರು.

ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್, ಪ್ರಸನ್ ಕುಮಾರ್ ಮಾಜಿ ತಾಲೂಕ ಪಂಚಾಯತ್ ಅಧ್ಯಕ್ಷರಾದ ಗಣಪತಿ ಹುಲ್ತಿಕೊಪ್ಪ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಕೆ .ಪಿ. ರುದ್ರಗೌಡ್ರು ಹಿಂದುಳಿದ ವರ್ಗಗಳ ರಾಜ್ಯ ಸಂಯೋಜಕ ಜಿ.ಡಿ. ಮಂಜುನಾಥ್ ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ರಮೇಶ ಶಂಕರಘಟ್ಟ ಹಾಪ್ ಕಾಮ್ಸ್ ನಿರ್ದೇಶಕರಾದ ಕೆ. ವಿ. ಗೌಡ್ರು, ರುದ್ರಗೌಡ ಪಾಟೀಲ್, ಬಗರ್ ಹುಕುಂ ಸಮಿತಿ ಅಧ್ಯಕ್ಷರಾದ ಶೇಖರ್ ಎಂ. ಡಿ. ಪ್ರಭಾಕರ್ ಚಿಕ್ಕಸವಿ ನಾಗರಾಜ್, ಪ್ರಕಾಶ್ ಎನ್.ಜಿ ನಾಗರಾಜ್, ಆರ್. ಮಂಜುನಾಥ್, ಸುರೇಶ್, ನಾಗಪ್ಪ ಮಾಸ್ಟ್ರು ತಾಲೂಕು ಮುಖ್ಯ ಪಶುವೈದ್ಯಾಧಿಕಾರಿಗಳಾದ ಎನ್ ಆರ್ ಪ್ರದೀಪ್ ಕುಮಾರ್ ಡಾಕ್ಟರ್ ಹನುಮಂತ ರಾವ್ ಡಾಕ್ಟರ್ ಮನೋಜ್ ಎಚ್. ಕೆ. ಬಿ.ಎಸ್. ಪ್ರಕಾಶ್, ಎಸ್, ರಂಗಪ್ಪ ಜನಪ್ರತಿನಿಧಿಗಳು, ಮುಖಂಡರು, ಗ್ರಾಮಸ್ಥರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post