ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜೀವನದಲ್ಲಿ ಬರುವ ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಸಾಮರ್ಥ್ಯವನ್ನು ಮಕ್ಕಳು ಬೆಳೆಸಿಕೊಳ್ಳಬೇಕು ಎಂದು ಶಾಲೆಯ ಪ್ರಾಂಶುಪಾಲರು ಪ್ರಿಯದರ್ಶಿನಿ ಮಕ್ಕಳಿಗೆ ಸಲಹೆ ನೀಡಿದರು.
ಜೈನ್ ಪಬ್ಲಿಕ್ ಶಾಲೆಯಲ್ಲಿ #Jain Public School ಮಕ್ಕಳ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮವು ಚಾಚಾ ನೆಹರು ಹಾಗೂ ಕರ್ನಾಟಕ ತಾಯಿಗೆ ಹೂಮಾಲೆ ಅರ್ಪಿಸಿ ಪೂಜೆ ಸಲ್ಲಿಸುವ ಮೂಲಕ ಭಕ್ತಿಪೂರ್ವಕವಾಗಿ ಆರಂಭವಾಯಿತು.
ಮುಖ್ಯ ಅತಿಥಿಗಳಾಗಿ ಸಹ್ಯಾದ್ರಿ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಲವಾ ಜಿ.ಆರ್. ಅವರು ಭಾಗವಹಿಸಿ ಮಕ್ಕಳಿಗೆ ಭಾಷೆಯ ಮಹತ್ವವನ್ನು ಮನದಟ್ಟು ಮಾಡಿದರು. ವಿದ್ಯಾರ್ಥಿಗಳು ಹಾಡು, ನೃತ್ಯ, ನಾಟಕ ಮತ್ತು ನಾಟಕೀಯ ಪ್ರದರ್ಶನಗಳನ್ನು ನೀಡಿದರು.
ಶಿಕ್ಷಕರು ವಿಶೇಷ ಅಸೆಂಬ್ಲಿ, ನೃತ್ಯ ಹಾಗೂ ಮೊಬೈಲ್ ವ್ಯಸನದ ಬಗ್ಗೆ ಚಿಂತನೀಯ ನಾಟಕವನ್ನು ಪ್ರದರ್ಶಿಸಿದರು. ಉಡುಗೊರೆ, ಸಿಹಿ ವಿತರಣೆ ಮತ್ತು ಕ್ಲಬ್ ಚಟುವಟಿಕೆಗಳೊಂದಿಗೆ ಬ್ಯಾಗ್‌ರಹಿತ ದಿನ ಅರ್ಥಪೂರ್ಣವಾಗಿ ಮುಕ್ತಾಯವಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















