ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ರಂಗಾಯಣ ಹಾಗೂ ಕಲಾವಿದರು- ರಂಗತಂಡಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ವಿಶ್ವರಂಗಭೂಮಿ ದಿನಾಚರಣೆ #World Theatre Day celebration ಅಂಗವಾಗಿ ಮಾರ್ಚ್ 27ರಂದು ಕಿರು ನಾಟಕ ಸ್ಪರ್ಧೆ ಆಯೋಜಿಸಲಾಗಿದೆ.
ನಾಟಕದ ಅವಧಿ ಕನಿಷ್ಠ 10 ನಿಮಿಷ. ಗರಿಷ್ಠ 15 ನಿಮಿಷದ ಒಳಗಿರಬೇಕು. ಒಂದು ತಂಡದಲ್ಲಿ ಕನಿಷ್ಠ ಇಬ್ಬರಿಂದ ಗರಿಷ್ಠ ಹತ್ತು ಮಂದಿ ಆನ್ ಸ್ಟೇಜ್ ಕಲಾವಿದರು ಇರಬಹುದು. ಐದು ಜನ ತಂತ್ರಜ್ಞರಿಗೆ ಅವಕಾಶವಿದೆ. ಒಂದು ನಾಟಕದಲ್ಲಿ ಅಭಿನಯ ಮಾಡಿದ ಕಲಾವಿದರು ಇನ್ನೊಂದು ನಾಟಕದಲ್ಲಿ ಅಭಿನಯಿಸುವಂತಿಲ್ಲ. ಈ ನಿಯಮ ತಂತ್ರಜ್ಞರಿಗೆ ಅನ್ವಯವಾಗದು.
ಪ್ರಥಮ ಬಹುಮಾನ ರೂ. 5 ಸಾವಿರ, ದ್ವಿತೀಯ ಬಹುಮಾನ ರೂ. 4 ಸಾವಿರ ಹಾಗೂ ತೃತೀಯ ಬಹುಮಾನ ರೂ. 3 ಸಾವಿರ ಹಾಗೂ ಟ್ರೋಫಿ, ಪ್ರಮಾಣ ಪತ್ರಗಳನ್ನು ಒಳಗೊಂಡಿರುತ್ತದೆ. ಪ್ರತಿ ತಂಡಕ್ಕೂ ಪ್ರಮಾಣಪತ್ರ ನೀಡಲಾಗುವುದು.
ಆಸಕ್ತರು ಮಾರ್ಚ್ 20ರ ಒಳಗಾಗಿ ಪ್ರವೇಶ ಶುಲ್ಕ 250 ರೂಪಾಯಿ ಪಾವತಿಸಿ ತಮ್ಮ ತಂಡವನ್ನು ನೋಂದಾವಣೆ ಮಾಡಬಹುದು. ಮಾಹಿತಿಗಾಗಿ ಸಂಪರ್ಕಿಸಿ: 9448138183, 9844518866, 9448414752.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















