ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಾನಗರ ಪಾಲಿಕೆಯ ವಾರ್ಡ್ ನಂ.01ರ ಸೋಮಿನಕೊಪ್ಪದಲ್ಲಿ ಮನೆ ಮುಂಭಾಗ ಆಟವಾಡುತ್ತಿದ್ದ ಬಾಲಕಿ ಹಾಗೂ ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮೇಲೆ ಬೀದಿ ನಾಯಿಯೊಂದು #DogBite ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ನಡೆದಿದೆ.
Also Read>> ಬಂಗಾಳದ ಬೀದಿ ಬದಿಯ ‘ಝಲ್ ಮುರಿ’ ಮತ್ತು ಮೋದಿಯವರ ಜನಸಾಮಾನ್ಯರೊಂದಿಗಿನ ಬಾಂಧವ್ಯ: ಒಂದು ವಿಶ್ಲೇಷಣೆ
4 ವರ್ಷದ ಇರ್ಜಾ ಕೌನೇನ್ ಹಾಗೂ ಕೃಷ್ಣಾನಾಯ್ಕ್ ಬೀದಿ ನಾಯಿ ದಾಳಿಗೆ ತುತ್ತಾದವರು. ಗಾಯಗೊಂಡಿರುವ ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮೇ 6ರ ಸಂಜೆ ಬಾಲಕಿ ಮೇಲೆ ನಾಯಿ ದಾಳಿ ನಡೆಸಿ, ಐದಾರು ಕಡೆ ಕಚ್ಚಿದೆ. ಬಾಲಕಿಯ ಕಿರುಚಾಟ ಗಮನಿಸಿ ನೆರೆಹೊರೆಯವರು ನಾಯಿಯನ್ನು ಓಡಿಸಿದ್ದಾರೆ.
ಇಂದು ಬೆಳಿಗ್ಗೆ ಕೃಷ್ಣಾನಾಯ್ಕ್ ಎಂಬುವರು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಅವರ ಕಾಲಿಗೆ ನಾಯಿ ಕಚ್ಚಿ ಗಾಯಗೊಳಿಸಿದೆ.
Also Read>> ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ್ದು ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ: ಗಣೇಶ್ ಆಕ್ರೋಶ
ಸೋಮಿನಕೊಪ್ಪದಲ್ಲಿ ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ತಕ್ಷಣವೇ ಇವುಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಅವರು ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Comments 1