ಕಲ್ಪ ಮೀಡಿಯಾ ಹೌಸ್ | ಕೊಡಗು |
ಇಲ್ಲಿನ ದುಬಾರೆ ಸಾಕಾನೆ ಶಿಬಿರದಲ್ಲಿ Dubare Elephant Camp ಎರಡು ಆನೆಗಳ ನಡುವೆ ನಡೆದಿದ್ದ ಕಾಳಗದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಇಂದು ಮೃತಪಟ್ಟಿದೆ.
ದುಬಾರೆ ಸಾಕಾನೆ ಶಿಬಿರದಲ್ಲಿ ಆನೆಗಳಿಗೆ ಪ್ರವಾಸಿಗರು ಸ್ನಾನ ಮಾಡಿಸುವ ವೇಳೆ ಬಲಿಷ್ಠ ಕಂಚನ್ ಆನೆ ಮಾರ್ತಾಂಡ ಆನೆಯ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಎರಡು ಆನೆಗಳು ನಡುವೆ ಕದನ ನಡೆದಿತ್ತು. ಘಟನೆಯಲ್ಲಿ ಮಾರ್ತಾಂಡ ಆನೆ ತೀವ್ರವಾಗಿ ಗಾಯಗೊಂಡಿತ್ತು.
ತೀವ್ರವಾಗಿ ಗಾಯಗೊಂಡಿದ್ದ ಮಾರ್ತಾಂಡ ಆನೆಗೆ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಇಂದು ಮೃತಪಟ್ಟಿದೆ.
ಸೋಮವಾರ ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆಗೆ ದುಬಾರೆ ಶಿಬಿರದ ಮಾರ್ತಾಂಡ Marthanda ಮತ್ತು ಕಂಜನ್ Kanjan ಎಂಬ ಎರಡು ಆನೆಗಳ ನಡುವೆ ಅನಿರೀಕ್ಷಿತವಾಗಿ ಕಾದಾಟ ಆರಂಭವಾಗಿತ್ತು.
Also read: ಸಾರಿಗೆ ನೌಕರರಿಗೆ ಹೈಕೋರ್ಟ್ ಶಾಕ್ | ಮುಷ್ಕರ ಕೈಬಿಡುವಂತೆ ಸೂಚನೆ | ನ್ಯಾಯಾಲಯ ಹೇಳಿದ್ದೇನು?
ಈ ಕಾಳಗದ ರಭಸಕ್ಕೆ ಸಿಲುಕಿ ಚೆನ್ನೈ ಮೂಲದ ಪ್ರವಾಸಿ ಮಹಿಳೆ ಜಿನ್ನು ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದರು.
ಪ್ರವಾಸಿ ಮಹಿಳೆಯ ಸಾವಿನ ಬೆನ್ನಲ್ಲೇ ಈಗ ಅರಣ್ಯ ಇಲಾಖೆಯ ಸಾಕಾನೆ ಮಾರ್ತಾಂಡ ಕೂಡ ಸಾವನ್ನಪ್ಪಿರುವುದು ಅರಣ್ಯ ಇಲಾಖೆಗೆ ಮತ್ತು ಪ್ರಾಣಿ ಪ್ರೇಮಿಗಳಿಗೆ ಭರಿಸಲಾಗದ ನಷ್ಟ ಉಂಟುಮಾಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















