ಕಲ್ಪ ಮೀಡಿಯಾ ಹೌಸ್ | ಮುಂಬೈ |
ದೇಶವ್ಯಾಪಿ ಖಂಡನೆ ವ್ಯಕ್ತವಾಗಿರುವ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ NEET question paper leak Case ಭಾಗಿಯಾಗಿರುವ ಆರೋಪದಲ್ಲಿ ರೇಣುಕೈ ರಸಾಯನಶಾಸ್ತ್ರ ತರಗತಿಗಳ ಸಂಸ್ಥಾಪಕ ಶಿವರಾಜ್ ರಘುನಾಥ್ ಮೋಟೆಗಾಂವ್ಕರ್’ನನ್ನು ಸಿಬಿಐ CBI ಮಹಾರಾಷ್ಟ್ರದ ಲಾತೂರ್’ನಲ್ಲಿ ಬಂಧಿಸಿದೆ.
ಸಿಬಿಐ ಅಧಿಕಾರಿಗಳು ಶೋಧ ನಡೆಸಿದ ಸಮಯದಲ್ಲಿ ಮೋಟೆಂಗಾಂವ್ಕರ್ ಮೊಬೈಲ್’ನಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು ಪತ್ತೆಯಾಗಿದೆ. ಬಳಿಕ ಶಿವರಾಜನನ್ನು ಬಂಧಿಸಲಾಗಿದೆ.
ನೀಟ್ ಯುಜಿ ಪತ್ರಿಕೆ ಸೋರಿಕೆ ಮತ್ತು ಪ್ರಸರಣದಲ್ಲಿ ಭಾಗಿಯಾಗಿರುವ ಸಂಘಟಿತ ಗ್ಯಾಂಗ್ ಸಕ್ರಿಯ ಸದಸ್ಯ ಮೋಟೆಗಾಂವ್ಕರ್ ಎಂದು ಸಿಬಿಐ ಆರೋಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Also read: ದೇಶದ 18 ಮಹಾನಗರಗಳಲ್ಲಿ ವಾಟರ್ ಮೆಟ್ರೋ ಆರಂಭಿಸಲು ಕೇಂದ್ರ ಮಾಸ್ಟರ್ ಪ್ಲಾನ್
ಮೋಟೆಗಾಂವ್ಕರ್ ಇತರ ಆರೋಪಿಗಳೊಂದಿಗೆ ಪಿತೂರಿ ನಡೆಸಿ 2026ರ ನೀಟ್ ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮತ್ತು ಉತ್ತರಗಳನ್ನು ಎಪ್ರಿಲ್ 23ರಂದು ಪರೀಕ್ಷೆಗೆ ಮುಂಚಿತವಾಗಿ ಪಡೆದಿದ್ದಾರೆ. ಪತ್ರಿಕೆಯನ್ನು ಹಲವಾರು ವ್ಯಕ್ತಿಗಳಿಗೆ ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















