ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಾರ್ಯಾಚರಣೆಯ ಅಡಚಣೆಗಳಿಂದಾಗಿ ನೈಋತ್ಯ ರೈಲ್ವೆ South Western Railway 16525 ಸಂಖ್ಯೆಯ ಕನ್ಯಾಕುಮಾರಿ – ಕೆಎಸ್’ಆರ್ ಬೆಂಗಳೂರು ಎಕ್ಸ್’ಪ್ರೆಸ್ ರೈಲಿನ Kanyakumari – KSR Bengaluru Express train ಸಮಯವನ್ನು ಮೇ 26ರಿಂದ ಕನ್ಯಾಕುಮಾರಿ ನಿಲ್ದಾಣದಿಂದ ಪ್ರಯಾಣಿಸುವ ರೈಲಿಗೆ ಅನ್ವಯವಾಗುವಂತೆ ಪರಿಷ್ಕರಿಸಲಾಗಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಮಾಹಿತಿ ನೀಡಿದ್ದು, ಕನ್ಯಾಕುಮಾರಿಯಿಂದ ತಿರುಪತ್ತೂರುವರೆಗೆ ರೈಲಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ, ತಿರುಪತ್ತೂರು ನಂತರದ ನಿಲ್ದಾಣಗಳಲ್ಲಿ ರೈಲಿನ ಆಗಮನ ಮತ್ತು ನಿರ್ಗಮನ ಸಮಯಗಳನ್ನು ಪರಿಷ್ಕರಿಸಲಾಗಿದೆ: ಹೀಗಿದೆ ಡೀಟೇಲ್ಸ್:
ಕುಪ್ಪಂ ನಿಲ್ದಾಣದಲ್ಲಿ ರೈಲು 04:28/04:30 ಆಗಮನ/ನಿರ್ಗಮನ (ಹಿಂದಿನ ಸಮಯ 03:54/03:55). ಬಂಗಾರಪೇಟೆ 05:07/05:09 ಆಗಮನ/ನಿರ್ಗಮನ (ಹಿಂದಿನ ಸಮಯ 04:19/04:21). ಮಾಲೂರು 05:29/05:30 ಆಗಮನ/ನಿರ್ಗಮನ (ಹಿಂದಿನ ಸಮಯ 04:41/04:42). ವೈಟ್ ಫೀಲ್ಡ್ 05:59/06:01 ಗಂಟೆಗೆ ಆಗಮನ/ನಿರ್ಗಮನ (ಹಿಂದಿನ ಸಮಯ 04:56/04:57). ಕೃಷ್ಣರಾಜಪುರಂ 06:10/06:12 ಗಂಟೆಗೆ ಆಗಮನ/ನಿರ್ಗಮನ (ಹಿಂದಿನ ಸಮಯ 05:07/05:09). ಬೆಂಗಳೂರು ಕಂಟೋನ್ಮೆಂಟ್ 06:29/06:31 ಆಗಮನ/ನಿರ್ಗಮನ (ಹಿಂದಿನ ಸಮಯ 05:27/05:28).
ಕೆಎಸ್’ಆರ್ ಬೆಂಗಳೂರು ನಿಲ್ದಾಣಕ್ಕೆ ರೈಲು ಆಗಮನ ಸಮಯ 07:00 ಗಂಟೆ ಆಗಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಇಲಾಖೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















