ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಕಾಲುವೆ ದಾಟುವ ಕಾಮಗಾರಿ ಹೊನ್ನವಳ್ಳಿ ರೋಡ್ – ಅರಸೀಕೆರೆ ನಿಲ್ದಾಣಗಳ ನಡುವೆ ನಡೆಯುತ್ತಿರುವುದರಿಂದ, ಈ ಮಾರ್ಗದ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಮಾಹಿತಿ ನೀಡಿದ್ದು, ಈ ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳ ಸೇವೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸುವುದು, ಮಾರ್ಗ ಬದಲಾವಣೆ, ನಿಯಂತ್ರಣ, ಭಾಗಶಃ ರದ್ದು ಹಾಗೂ ಮರುನಿಗದಿ ಮಾಡಲಾಗಿದೆ ಎಂದು ತಿಳಿಸಿದೆ.
ಕೆಳಕಂಡ ರೈಲುಗಳು ಎರಡು ದಿನಗಳ ಕಾಲ ರದ್ದುಗೊಳಿಸಲಾಗಿವೆ
- ರೈಲು ಸಂಖ್ಯೆ 66577 ತುಮಕೂರು – ಶಿವಮೊಗ್ಗ ಟೌನ್ ಪ್ಯಾಸೆಂಜರ್ 02.06.2026 ಹಾಗೂ 16.06.2026 ರಂದು ರದ್ದು
- ರೈಲು ಸಂಖ್ಯೆ 66578 ಶಿವಮೊಗ್ಗ ಟೌನ್ – ತುಮಕೂರು ಪ್ಯಾಸೆಂಜರ್ 02.06.2026 ಹಾಗೂ 16.06.2026 ರಂದು ರದ್ದು
- ರೈಲು ಸಂಖ್ಯೆ 16567 ತುಮಕೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ 06.06.2026 ಹಾಗೂ 13.06.2026 ರಂದು ರದ್ದು
- ರೈಲು ಸಂಖ್ಯೆ 16568 ಶಿವಮೊಗ್ಗ ಟೌನ್ – ತುಮಕೂರು ಎಕ್ಸ್‌ಪ್ರೆಸ್ 07.06.2026 ಹಾಗೂ 14.06.2026 ರಂದು ರದ್ದು
- ರೈಲು ಸಂಖ್ಯೆ 12089 ಕೆಎಸ್‌ಆರ್ ಬೆಂಗಳೂರು – ಶಿವಮೊಗ್ಗ ಟೌನ್ ಜನಶತಾಬ್ದಿ ಎಕ್ಸ್‌ಪ್ರೆಸ್ 06.06.2026 ಹಾಗೂ 13.06.2026 ರಂದು ರದ್ದು
- ರೈಲು ಸಂಖ್ಯೆ 12090 ಶಿವಮೊಗ್ಗ ಟೌನ್ – ಕೆಎಸ್‌ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್ 07.06.2026 ಹಾಗೂ 14.06.2026 ರಂದು ರದ್ದು
- ರೈಲು ಸಂಖ್ಯೆ 56224 ಅರಸೀಕೆರೆ – ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್ 07.06.2026 ಹಾಗೂ 14.06.2026 ರಂದು ರದ್ದು
- ರೈಲು ಸಂಖ್ಯೆ 56223 ಕೆಎಸ್‌ಆರ್ ಬೆಂಗಳೂರು – ಅರಸೀಕೆರೆ ಪ್ಯಾಸೆಂಜರ್ 07.06.2026 ಹಾಗೂ 14.06.2026 ರಂದು ರದ್ದು
- ರೈಲು ಸಂಖ್ಯೆ 06581 ಕೆಎಸ್‌ಆರ್ ಬೆಂಗಳೂರು – ಚನ್ನಪಟ್ಟಣ ಪ್ಯಾಸೆಂಜರ್ 07.06.2026 ಹಾಗೂ 14.06.2026 ರಂದು ರದ್ದು
- ರೈಲು ಸಂಖ್ಯೆ 06582 ಚನ್ನಪಟ್ಟಣ – ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್ 07.06.2026 ಹಾಗೂ 14.06.2026 ರಂದು ರದ್ದು
ಕೆಳಕಂಡ ರೈಲುಗಳನ್ನು 2 ದಿನಗಳ ಕಾಲ ಮಾರ್ಗ ಬದಲಾಯಿಸಲಾಗಿದೆ
- ರೈಲು ಸಂಖ್ಯೆ 11022 ತಿರುನೆಲ್ವೇಲಿ ಜಂಕ್ಷನ್ – ದಾದರ್ ಸೆಂಟ್ರಲ್ ಎಕ್ಸ್‌ಪ್ರೆಸ್ 01.06.2026 ಮತ್ತು 15.06.2026 ರಂದು ಚಿಕ್ಕಬಾಣವರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮೂಲಕ ಸಂಚರಿಸಲಿದ್ದು . ತುಮಕೂರು ಮತ್ತು ತಿಪಟೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
- ರೈಲು ಸಂಖ್ಯೆ 56519 ಕೆಎಸ್‌ಆರ್ ಬೆಂಗಳೂರು – ಹೊಸಪೇಟೆ ಪ್ಯಾಸೆಂಜರ್ 02.06.2026 ಮತ್ತು 16.06.2026 ರಂದು ಚಿಕ್ಕಬಾಣವರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮೂಲಕ ಸಂಚರಿಸಲಿದ್ದು. ದೊಡ್ಡಬೆಲೆ, ಕ್ಯಾಯಸಂದ್ರ, ತುಮಕೂರು, ಗುಬ್ಬಿ, ಅಮ್ಮಸಂದ್ರ ಮತ್ತು ತಿಪಟೂರಿನಲ್ಲಿ ನಿಲುಗಡೆ ಇರುವುದಿಲ್ಲ.
- ರೈಲು ಸಂಖ್ಯೆ 12079 ಕೆಎಸ್‌ಆರ್ ಬೆಂಗಳೂರು – ಎಸ್‌ಎಸ್‌ಎಸ್ ಹುಬ್ಬಳ್ಳಿ ಜನಶತಾಬ್ದಿ ಎಕ್ಸ್‌ಪ್ರೆಸ್ 02.06.2026 ಮತ್ತು 16.06.2026 ರಂದು ಯಶವಂತಪುರ, ಚಿಕ್ಕಬಾಣವರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮೂಲಕ ಸಂಚರಿಸಲಿದ್ದು. ತುಮಕೂರು ಮತ್ತು ತಿಪಟೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
- ರೈಲು ಸಂಖ್ಯೆ 16536 ಪಂಢರಾಪುರ – ಮೈಸೂರು ಎಕ್ಸ್‌ಪ್ರೆಸ್ 06.06.2026 ಮತ್ತು 13.06.2026 ರಂದು ಅರಸೀಕೆರೆ, ಹಾಸನ, ನೆಲಮಂಗಲ, ಚಿಕ್ಕಬಾಣವರ ಮತ್ತು ಯಶವಂತಪುರ ಮೂಲಕ ಸಂಚರಿಸುಲಿದ್ದು. ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
- ರೈಲು ಸಂಖ್ಯೆ 20654 ಬೆಳಗಾವಿ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ 06.06.2026 ಮತ್ತು 13.06.2026 ರಂದು ಅರಸೀಕೆರೆ, ಹಾಸನ, ನೆಲಮಂಗಲ, ಚಿಕ್ಕಬಾಣವರ ಮತ್ತು ಯಶವಂತಪುರ ಮೂಲಕ ಸಂಚರಿಸಲಿದ್ದು. ತುಮಕೂರು ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ.
- ರೈಲು ಸಂಖ್ಯೆ 16546 ಸಿಂಧನೂರು – ಯಶವಂತಪುರ ಎಕ್ಸ್‌ಪ್ರೆಸ್ 06.06.2026 ಮತ್ತು 13.06.2026 ರಂದು ಅರಸೀಕೆರೆ, ಹಾಸನ, ನೆಲಮಂಗಲ ಮತ್ತು ಚಿಕ್ಕಬಾಣವರ ಮೂಲಕ ಸಂಚರಿಸಲಿದ್ದು. ತಿಪಟೂರು, ಅಮ್ಮಸಂದ್ರ, ಗುಬ್ಬಿ, ತುಮಕೂರು, ಕ್ಯಾಯತಸಂದ್ರ ಮತ್ತು ದೊಡ್ಡಬೆಲೆ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
- ರೈಲು ಸಂಖ್ಯೆ 17310 ವಾಸ್ಕೋ ಡ ಗಾಮಾ – ಯಶವಂತಪುರ ಎಕ್ಸ್‌ಪ್ರೆಸ್ 06.06.2026 ಮತ್ತು 13.06.2026 ರಂದು ಅರಸೀಕೆರೆ, ಹಾಸನ, ನೆಲಮಂಗಲ, ಚಿಕ್ಕಬಾಣವರ ಮತ್ತು ಯಶವಂತಪುರ ಮೂಲಕ ಸಂಚರಿಸಲಿದ್ದು. ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
ರೈಲುಗಳ ನಿಯಂತ್ರಣ
- ರೈಲು ಸಂಖ್ಯೆ 20689 ಯಶವಂತಪುರ – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ 02 ಮತ್ತು 16 ಜೂನ್ 2026 ರಂದು ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಿಸಲಿದೆ.
- ರೈಲು ಸಂಖ್ಯೆ 16568 ಶಿವಮೊಗ್ಗ ಟೌನ್ – ತುಮಕೂರು ಎಕ್ಸ್‌ಪ್ರೆಸ್ 02 ಮತ್ತು 16 ಜೂನ್ 2026 ರಂದು ಮಾರ್ಗಮಧ್ಯೆ 60 ನಿಮಿಷಗಳ ಕಾಲ ನಿಯಂತ್ರಿಸಲಿದೆ.
- ರೈಲು ಸಂಖ್ಯೆ 12090 ಶಿವಮೊಗ್ಗ ಟೌನ್ – ಕೆಎಸ್‌ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್ 02 ಮತ್ತು 16 ಜೂನ್ 2026 ರಂದು ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಿಸಲಿದೆ.
- ರೈಲು ಸಂಖ್ಯೆ 12726 ಧಾರವಾಡ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ 07 ಮತ್ತು 14 ಜೂನ್ 2026 ರಂದು ಮಾರ್ಗಮಧ್ಯೆ 75 ನಿಮಿಷಗಳ ಕಾಲ ನಿಯಂತ್ರಿಸಲಿದೆ.
- ರೈಲು ಸಂಖ್ಯೆ 26751 ಬೆಳಗಾವಿ – ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ 07 ಮತ್ತು 14 ಜೂನ್ 2026 ರಂದು ಮಾರ್ಗಮಧ್ಯೆ 30 ನಿಮಿಷಗಳ ಕಾಲ ನಿಯಂತ್ರಿಸಲಿದೆ.
ಭಾಗಶಃ ರದ್ದು
- ರೈಲು ಸಂಖ್ಯೆ 20652 ತಾಳಗುಪ್ಪ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಅರಸೀಕೆರೆ – ಕೆಎಸ್‌ಆರ್ ಬೆಂಗಳೂರು ನಡುವಿನ ಸೇವೆ ಭಾಗಶಃ ರದ್ದಾಗಲಿದೆ. ಈ ರೈಲು ಅರಸೀಕೆರೆಯಲ್ಲಿ ಕೊನೆಗೊಳ್ಳುತ್ತದೆ.
- ರೈಲು ಸಂಖ್ಯೆ 12725 ಕೆಎಸ್‌ಆರ್ ಬೆಂಗಳೂರು – ಧಾರವಾಡ ಎಕ್ಸ್‌ಪ್ರೆಸ್ ಕೆಎಸ್‌ಆರ್ ಬೆಂಗಳೂರು – ಅರಸೀಕೆರೆ ನಡುವೆ ಭಾಗಶಃ ರದ್ದಾಗಲಿದೆ. ಅರ್ಸಿಕೇರಿಯಿಂದ ತನ್ನ ಪ್ರಯಾಣ ಆರಂಭಿಸಲಿದೆ.
ರೈಲು ಮರುನಿಗದಿ
- ರೈಲು ಸಂಖ್ಯೆ 16239 ಚಿಕ್ಕಮಗಳೂರು – ಯಶವಂತಪುರ ಎಕ್ಸ್‌ಪ್ರೆಸ್ 07 ಮತ್ತು 14 ಜೂನ್ 2026 ರಂದು ಚಿಕ್ಕಮಗಳೂರಿನಿಂದ 120 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















