ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಪಿಇಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ #PESITM ಸಂಸ್ಥೆಯಲ್ಲಿ 16ನೇ ವರ್ಷದ ಪದವಿ ಪ್ರದಾನ ಹಾಗೂ ಉದ್ಯೋಗ ನೇಮಕಾತಿ ಪತ್ರ ವಿತರಣೆ ಸಮಾರಂಭವು ಸಂಸ್ಥೆಯ ಆವರಣದಲ್ಲಿರುವ ಪ್ರೇರಣಾ ಕನ್ವೆನ್ಷನ್ ಹಾಲ್‌ನಲ್ಲಿ ಭಾನುವಾರ ವಿಜೃಂಭಣೆಯಿಂದ ನಡೆಯಿತು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಫ್ಯಾನಾಟಿಕ್ಸ್ ಇಂಕ್ ಸಂಸ್ಥೆಯ ಸ್ಟ್ರಾಟಜಿ ಮತ್ತು ಅನಾಲಿಟಿಕ್ಸ್ ವಿಭಾಗದ ನಿರ್ದೇಶಕರಾದ ಚಂದ್ರಕಾಂತ್ ಬೊಬ್ಬಾ ಅವರು, ಮಾತನಾಡಿ, ವೃತ್ತಿಪರ ಶ್ರೇಷ್ಠತೆ, ನಿರಂತರ ಕಲಿಕೆ, ನವೋದ್ಯಮ ಮತ್ತು ನೈತಿಕ ನಾಯಕತ್ವದ ಮಹತ್ವವನ್ನು ಒತ್ತಿಹೇಳಿದರು.
Also Read>> ಶರಾವತಿ PSP ಯೋಜನೆ ಕುರಿತು CEC ಸದಸ್ಯರ ಭೇಟಿ | ಈಶ್ವರಪ್ಪ ನೇತೃತ್ವದಲ್ಲಿ ಪ್ರತಿನಿಧಿ ಮಂಡಳಿ ಚರ್ಚೆ
ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಆತ್ಮವಿಶ್ವಾಸದಿಂದ ಸ್ವೀಕರಿಸಿ ಸಮಾಜ ಮತ್ತು ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪದವಿ ಪ್ರಮಾಣಪತ್ರ ಹಾಗೂ ನೇಮಕಾತಿ ಪತ್ರ ವಿತರಣೆ
ಸಮಾರಂಭದಲ್ಲಿ ವಿವಿಧ ವಿಭಾಗಗಳ ಪದವೀಧರ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಜೊತೆಗೆ, ಪಿಇಎಸ್ ಸಂಸ್ಥೆಯ ಉದ್ಯೋಗ ಮತ್ತು ತರಬೇತಿ ವಿಭಾಗದ ಮೂಲಕ ವಿವಿಧ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಪಡೆದ ವಿದ್ಯಾರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲಾಯಿತು.
ಪಿಇಎಸ್‌ಐಟಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ಸ್ವಾಮಿ ಡಿ.ಆರ್ ಅವರು ಪದವೀಧರರಿಗೆ ಪ್ರಮಾಣವಚನ ಬೋಧಿಸಿ, ವೃತ್ತಿಪರ ನಿಷ್ಠೆ, ಜವಾಬ್ದಾರಿ ಹಾಗೂ ನಿರಂತರ ಜ್ಞಾನಾರ್ಜನೆಯ ಮಹತ್ವವನ್ನು ವಿವರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಪಿಇಎಸ್ ಟ್ರಸ್ಟ್‌ನ ಕುಲಸಚಿವರಾದ ಡಾ. ನಾಗರಾಜ್ ಆರ್ ವಹಿಸಿದ್ದರು. ಉಪ ಪ್ರಾಚಾರ್ಯರಾದ ಡಾ. ಶೇಖರ್ ಆರ್ ಅವರು ಎಲ್ಲರನ್ನು ಸ್ವಾಗತಿಸಿದರು.
Also Read>> ಫಿಟ್ಸ್ ಕಾಯಿಲೆಯಿಂದ ನೊಂದ ವ್ಯಕ್ತಿ ಕೆರೆಯಲ್ಲಿ ಆತ್ಮಹತ್ಯೆ
ಸ್ಮರಣೀಯ ಕಾರ್ಯಕ್ರಮ
ಈ ಸಮಾರಂಭದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕ ವೃಂದ, ಅಧ್ಯಾಪಕೇತರ ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪಿಇಎಸ್‌ಐಟಿಎಂನ 16ನೇ ಪದವಿ ಪ್ರದಾನ ಸಮಾರಂಭವು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ, ಪರಿಶ್ರಮ ಹಾಗೂ ಅವರ ಜೀವನದ ಹೊಸ ಅಧ್ಯಾಯದ ಆರಂಭವನ್ನು ಸಂಭ್ರಮಿಸುವ ಸ್ಮರಣೀಯ ಕಾರ್ಯಕ್ರಮವಾಗಿ ಪರಿಣಮಿಸಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿಸಂಪರ್ಕಿಸಿ: Whatsapp: 9008761663, 9481252093 – info@kalpa.news




















