No Result
View All Result
Mysuru Ninada Griha Sangeet Concert On August 16th
English Articles

Mysuru to Host Hindustani Classical Vocal Concert on August 16

by kalpa News
August 11, 2026
1

Kalpa Media House  |  MYSURU | A Hindustani classical vocal concert by renowned Gwalior gharana musician Pandit M.P. Hegde of...

Read moreDetails
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
  • Advertise With Us
  • Grievances
  • About Us
  • Contact Us
Wednesday, August 12, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ರಾಷ್ಟ್ರೀಯ

ಬ್ರೇಕ್‌ಥ್ರೂ | ದೇಶ ಭದ್ರತೆಯ ಜೋಜಿಲಾ ಸುರಂಗ ಕಾಮಗಾರಿಯಲ್ಲಿ ಐತಿಹಾಸಿಕ ಸಾಧನೆ

ವಿಶ್ವದ ಅತಿ ಉದ್ದದ ಏಕ ಟ್ಯೂಬ್ ದ್ವಿಮುಖ ರಸ್ತೆ ಸುರಂಗ ಯಶಸ್ವಿ ಛೇದ

kalpa News by kalpa News
June 9, 2026
in ರಾಷ್ಟ್ರೀಯ
0
ಬ್ರೇಕ್‌ಥ್ರೂ | ದೇಶ ಭದ್ರತೆಯ ಜೋಜಿಲಾ ಸುರಂಗ ಕಾಮಗಾರಿಯಲ್ಲಿ ಐತಿಹಾಸಿಕ ಸಾಧನೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶ್ರೀನಗರ  |

ಜಮ್ಮು-ಕಾಶ್ಮೀರ ಮತ್ತು ಲಡಾಖ್ ನಡುವಿನ ಸಂಪರ್ಕ ವ್ಯವಸ್ಥೆಯ ನವ ಅಧ್ಯಾಯ ಬರೆಯುವ ಜೋಜಿಲಾ ರಸ್ತೆ ಸುರಂಗ ಯೋಜನೆ ಮಹತ್ವದ ಮೈಲಿಗಲ್ಲು ತಲುಪಿದೆ. ಮೇಘಾ ಎಂಜಿನಿಯರಿಂಗ್ ಅಂಡ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ #MEIL ಸಂಸ್ಥೆಯು 13.153 ಕಿಲೋ ಮೀಟರ್ ಉದ್ದದ ಜೋಜಿಲಾ ಸುರಂಗದ #ZojilaTunnel ಅಂತಿಮ ಛೇಧ (ಬ್ರೇಕ್ ಥ್ರೂ) ಸಾಧಿಸುವ ಮೂಲಕ ವಿಶ್ವದ ಅತಿ ಎತ್ತರದಲ್ಲಿ ನಿರ್ಮಾಣವಾಗುತ್ತಿರುವ ಅತಿ ಉದ್ದದ ಏಕ-ಕೊಳವೆ ದ್ವಿಮುಖ ರಸ್ತೆ ಸುರಂಗದ ಉತ್ಖನನ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಎನ್‌ಎಚ್‌ಐಡಿಸಿಎಲ್) ಪರವಾಗಿ ಎಂಇಐಎಲ್ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಕೈಗೊಂಡಿದ್ದು, ಬಾಲ್ತಾಲ್ ಮತ್ತು ಮೀನಮಾರ್ಗ್ ನಡುವಿನ ಹಿಮಾಲಯದ ತಂತ್ರಾತ್ಮಕ ಮಾರ್ಗದಲ್ಲಿ ವರ್ಷ ಪೂರ್ತಿ ಸಂಪರ್ಕ ಕಲ್ಪಿಸುವ ಉದ್ದೇಶದ ಕನಸನ್ನು ಇದು ನನಸಾಗಿಸಲಿದೆ.

Also Read>> ಫಿಲಿಪೈನ್ಸ್‌ನಲ್ಲಿ ಭೂಕಂಪ ದುರಂತ: ತನ್ನ ಜೀವ ಒತ್ತೆಯಿಟ್ಟು ಮೊಮ್ಮಗನನ್ನು ರಕ್ಷಿಸಿದ ಅಜ್ಜಿಯ ಸಾಹಸ

ಸಮುದ್ರ ಮಟ್ಟದಿಂದ ಸುಮಾರು 11,578 ಅಡಿ ಎತ್ತರದಲ್ಲಿರುವ ಜೋಜಿಲಾ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಈ ಸುರಂಗವು ಅತ್ಯಂತ ಕಠಿಣ ಭೌಗೋಳಿಕ ಹಾಗೂ ಹವಾಮಾನ ಪರಿಸ್ಥಿತಿಗಳ ನಡುವೆ ಸಾಕಾರಗೊಳ್ಳುತ್ತಿದೆ. ಯೋಜನೆ ಪೂರ್ಣಗೊಂಡ ಬಳಿಕ #Srinagar ಶ್ರೀನಗರ-ಕಾರ್ಗಿಲ್-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವರ್ಷಪೂರ್ತಿ ಸಂಚಾರ ಸಾಧ್ಯವಾಗಲಿದ್ದು, ಭಾರೀ ಹಿಮಪಾತ ಹಾಗೂ ಹಿಮಕುಸಿತದಿಂದ ಉಂಟಾಗುತ್ತಿದ್ದ ದೀರ್ಘಕಾಲದ ರಸ್ತೆ ಬಂದ್ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ.

ಬಾಲ್ತಾಲ್‌ನ ಪಶ್ಚಿಮ ಪ್ರವೇಶ ದ್ವಾರದಿಂದ ಮೀನಮಾರ್ಗ್’ನ ಪೂರ್ವ ಪ್ರವೇಶ ದ್ವಾರದವರೆಗೆ ನಿರ್ಮಾಣವಾಗುತ್ತಿರುವ ಮುಖ್ಯ ಸುರಂಗದ ಉತ್ಖನನವನ್ನು ಎರಡೂ ತುದಿಗಳಿಂದ ಏಕಕಾಲದಲ್ಲಿ ನಡೆಸಲಾಗಿತ್ತು. ಇದೀಗ ಅಂತಿಮ ಛೇದ (ಬ್ರೇಕ್‌ಥ್ರೂ) ಸಾಧನೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಸಾಕ್ಷಿಯಾದರು. ಇದರಿಂದ ಅತ್ಯಂತ ಸವಾಲಿನ ಉತ್ಖನನ ಹಂತ ಯಶಸ್ವಿಯಾಗಿ ಪೂರ್ಣಗೊಂಡಿದೆ.ಯೋಜನೆಯಲ್ಲಿ ನ್ಯೂ ಆಸ್ಟ್ರಿಯನ್ ಟನಲಿಂಗ್ ವಿಧಾನ (ಎನ್‌ಎಟಿಎಂ) ಅಳವಡಿಸಲಾಗಿದ್ದು, ಬದಲಾಗುವ ಶಿಲಾಸ್ತರಗಳು ಮತ್ತು ಭೌಗೋಳಿಕ ಅನಿಶ್ಚಿತತೆಗಳಿಗೆ ಹೊಂದಿಕೊಳ್ಳುವ ಈ ತಂತ್ರಜ್ಞಾನ ಸುರಕ್ಷಿತ ಹಾಗೂ ಸ್ಥಿರ ಸುರಂಗ ನಿರ್ಮಾಣಕ್ಕೆ ನೆರವಾಗಿದೆ. ನಿರಂತರ ಮೇಲ್ವಿಚಾರಣೆ, ತಕ್ಷಣದ ಬೆಂಬಲ ವ್ಯವಸ್ಥೆಗಳು ಮತ್ತು ವೈಜ್ಞಾನಿಕ ಮೌಲ್ಯಮಾಪನಗಳ ಮೂಲಕ ಸಂಕೀರ್ಣ ಹಿಮಾಲಯದ ಭೂಪ್ರದೇಶದಲ್ಲಿಯೂ ಕಾಮಗಾರಿ ಯಶಸ್ವಿಯಾಗಿ ಮುಂದುವರಿಯಿತು.

ಮುಖ್ಯ ಸುರಂಗದ ಜೊತೆಗೆ ಸಂಪರ್ಕ ರಸ್ತೆಗಳು, ಸೇತುವೆಗಳು, ಹಿಮರಕ್ಷಣೆ ವ್ಯವಸ್ಥೆಗಳು, ಕಟ್-ಅಂಡ್-ಕವರ್ ವಿಭಾಗಗಳು ಹಾಗೂ ಇತರೆ ಸುರಂಗ ಮೂಲಸೌಕರ್ಯಗಳ ನಿರ್ಮಾಣವೂ ಯೋಜನೆಯ ಭಾಗವಾಗಿದೆ. ಈ ಯೋಜನೆಯಿಂದ ಪ್ರವಾಸೋದ್ಯಮ, ವ್ಯಾಪಾರ, ಅಗತ್ಯ ಸೇವೆಗಳು ಮತ್ತು ಗಡಿ ಪ್ರದೇಶಗಳ ಸಂಪರ್ಕ ವ್ಯವಸ್ಥೆಗೆ ಮಹತ್ತರ ಉತ್ತೇಜನ ಸಿಗಲಿದೆ.

Also Read>> ILCAD 2026 Observed in Mysuru Division; SWR Promotes Level Crossing Safety

ಮೂಲಸೌಕರ್ಯ ಇತಿಹಾಸದಲ್ಲಿ ಐತಿಹಾಸಿಕ ದಿನ
ಈ ಸಾಧನೆ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ #NitinGadkari ನಿತಿನ್ ಗಡ್ಕರಿ ಪ್ರತಿಕ್ರಿಯಿಸಿ, “ಭಾರತದ ಮೂಲಸೌಕರ್ಯ ಇತಿಹಾಸದಲ್ಲಿ ಇದು ಐತಿಹಾಸಿಕ ದಿನವಾಗಿದೆ. ಜೋಜಿಲಾ ಸುರಂಗ ಪೂರ್ಣಗೊಂಡ ಬಳಿಕ ವಿಶ್ವದಾಖಲೆ ನಿರ್ಮಿಸಲಿದೆ. ಇದು ಲಡಾಖ್ ಮತ್ತು ಜಮ್ಮು-ಕಾಶ್ಮೀರದ #JammuKashmir ಜನರಿಗೆ ಜೀವನಾಡಿಯಾಗಲಿದೆ. ಮೈನಸ್ 4 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲೂ ಎಂಜಿನಿಯರ್‌ಗಳು ಮತ್ತು ಕಾರ್ಮಿಕರು ಹಗಲಿರುಳು ಶ್ರಮಿಸಿ ಈ ಸಾಧನೆ ಮಾಡಿದ್ದಾರೆ. ಯೋಜನೆಯಲ್ಲಿ ಶೇ.80ರಷ್ಟು ಸ್ಥಳೀಯರು ಕೆಲಸ ನಿರ್ವಹಿಸಿರುವುದು ವಿಶೇಷ” ಎಂದು ಹರ್ಷ ವ್ಯಕ್ತಪಡಿಸಿದರು.

ಹಲವು ಸಂಕೀರ್ಣ ಪರಿಸ್ಥಿತಿಯಲ್ಲೂ ನಿರ್ದಿಷ್ಟ ಅವಧಿಯಲ್ಲಿ ಕಾಮಗಾರಿ ಪೂರೈಸಿರುವ ಎಂಇಐಎಲ್ ಕಾರ್ಯಕಾರಿ ನಿರ್ದೇಶಕ ಕೃಷ್ಣರೆಡ್ಡಿ ಮತ್ತು ಯೋಜನಾ ವ್ಯವಸ್ಥಾಪಕ ಹರ್‌ಪಾಲ್ ಸಿಂಗ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿ, ಆರಂಭದಲ್ಲಿ ಈ ಯೋಜನೆಗೆ 12 ಸಾವಿರ ಕೋಟಿ ರೂ. ವ್ಯಯಿಸುವ ಡಿಪಿಆರ್ #DPR ಸಿದ್ದಪಡಿಸಲಾಗಿತ್ತು. ನಾಲ್ಕು ಬಾರಿ ಟೆಂಡರ್ ಆಹ್ವಾನಿಸಿದರೂ ಕಾರ್ಯಸಾಧುವಾಗಿರಲಿಲ್ಲ, ನಂತರ ಎಂಇಐಎಲ್ ಕಡಿಮೆ ಮೊತ್ತಕ್ಕೆ ಕಾಮಗಾರಿ ಕೈಗೊಂಡ ಪರಿಣಾಮ ಸರ್ಕಾರವು ಅಂದಾಜು 4 ಸಾವಿರ ಕೋಟಿ ರೂ.ಗಳನ್ನು ಉಳಿಸುವಂತಾಯಿತು ಎಂದರು.ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮಾತನಾಡಿ, “ಲಡಾಖ್ ಮತ್ತು ಜಮ್ಮು-ಕಾಶ್ಮೀರ ಜನರ ಬಹುಕಾಲದ ಕನಸು ನನಸಾಗಿದೆ. ಉತ್ತಮ ಸಾರಿಗೆ, ಪ್ರವಾಸೋದ್ಯಮ ಮತ್ತು ಹೊಸ ಆರ್ಥಿಕ ಅವಕಾಶಗಳ ಮೂಲಕ ಈ ಸುರಂಗ ಪ್ರದೇಶದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಿದೆ” ಎಂದರು.

ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, “ಲಡಾಖ್‌ಗೆ #Ladakh ವರ್ಷಪೂರ್ತಿ ಸಂಪರ್ಕ ಕಲ್ಪಿಸುವ ಕನಸು ಇದೀಗ ನನಸಾಗುತ್ತಿದೆ. ಸವಾಲಿನ ಪರಿಸ್ಥಿತಿಗಳಲ್ಲಿಯೂ ಕೆಲಸ ಮಾಡಿದ ಎಂಜಿನಿಯರ್‌ಗಳು ಮತ್ತು ಕಾರ್ಮಿಕರ ಶ್ರಮ ಶ್ಲಾಘನೀಯ” ಎಂದು ಹೇಳಿದರು.

Also Read>> ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ನಮ್ಮ ವಿರುದ್ಧ ಸುಳ್ಳು ಆರೋಪ | ಪಾಕ್ ವಿರುದ್ಧ ಭಾರತ ಚಾಟಿ

ಯೋಜನೆಯು 1 ಕೋಟಿ ಸುರಕ್ಷಿತ ಮಾನವ-ಗಂಟೆಗಳ ಸಾಧನೆಯನ್ನು ಕೂಡ ದಾಖಲಿಸಿದ್ದು, ಸುರಕ್ಷತೆ ಮತ್ತು ಗುಣಮಟ್ಟದ ಮೇಲಿನ ಎಂಇಐಎಲ್‌ನ ಬದ್ಧತೆಯನ್ನು ಪ್ರತಿಬಿಂಬಿಸಿದೆ. ಇದೀಗ ಉತ್ಖನನ ಕಾರ್ಯ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸುರಂಗದ ಒಳಭಾಗದ ಲೈನಿಂಗ್, ವಿದ್ಯುತ್-ಯಾಂತ್ರಿಕ ವ್ಯವಸ್ಥೆಗಳು ಹಾಗೂ ಇತರೆ ಅಂತಿಮ ಕಾಮಗಾರಿಗಳು ಮುಂದಿನ ಹಂತದಲ್ಲಿ ನಡೆಯಲಿವೆ.

ಜೋಜಿಲಾ ಸುರಂಗ ಯೋಜನೆಯು ಭಾರತದ ಉನ್ನತ ತಾಂತ್ರಿಕ ಸಾಮರ್ಥ್ಯ ಮತ್ತು ಹಿಮಾಲಯ ಪ್ರದೇಶದಲ್ಲಿ ಸಂಕೀರ್ಣ ಸುರಂಗ ನಿರ್ಮಾಣ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಸಾಮರ್ಥ್ಯದ ಪ್ರತೀಕವಾಗಿದ್ದು, ಕಾಶ್ಮೀರ ಮತ್ತು ಲಡಾಖ್ ನಡುವಿನ ನಿರಂತರ ಸಂಪರ್ಕದ ಕನಸನ್ನು ನನಸಾಗಿಸುವತ್ತ ಮಹತ್ವದ ಹೆಜ್ಜೆಯಾಗಿದೆ.ಯೋಜನೆಯ ಪ್ರಮುಖ ಅಂಶಗಳು

  • ಮುಖ್ಯ ಜೋಜಿಲಾ ಸುರಂಗದ ಉದ್ದ: 13.153 ಕಿ.ಮೀ.
  • ಒಟ್ಟು ಯೋಜನಾ ಉದ್ದ: 30.894 ಕಿ.ಮೀ.
  • ಸ್ಥಳ: ಬಾಲ್ತಾಲ್-ಮೀನಮಾರ್ಗ್, ಜಮ್ಮು-ಕಾಶ್ಮೀರ ಮತ್ತು ಲಡಾಖ್
  • ನಿರ್ಮಾಣ ಸಂಸ್ಥೆ: ಎಂಇಐಎಲ್
  • ಗ್ರಾಹಕ ಸಂಸ್ಥೆ: ಎನ್‌ಎಚ್‌ಐಡಿಸಿಎಲ್
  • ನಿರ್ಮಾಣ ವಿಧಾನ: ಎನ್‌ಎಟಿಎಂ
  • ಉದ್ದೇಶ: ಶ್ರೀನಗರ-ಲಡಾಖ್ ನಡುವೆ 365 ದಿನ ಸಂಪರ್ಕ
  • ಸುರಕ್ಷತಾ ಸಾಧನೆ: 1 ಕೋಟಿ ಸುರಕ್ಷಿತ ಮಾನವ-ಗಂಟೆಗಳು

Also Read>> ಬಾಗಲಕೋಟೆ : ನೀರಿನ ಟ್ಯಾಂಕ್‌ಗೆ ಬಿದ್ದು 18 ತಿಂಗಳ ಮಗು ಸಾವು, ಉಪ್ಪಿನಲ್ಲಿಟ್ಟು ಬದುಕಿಸಲು ಪೋಷಕರ ಯತ್ನ

ಪ್ರಮುಖ ಮೈಲಿಗಲ್ಲುಗಳು

  • ಯೋಜನೆ ಆರಂಭ: ಅಕ್ಟೋಬರ್ 1, 2020
  • ನಿಲ್ಗ್ರಾರ್ ಸುರಂಗದಲ್ಲಿ ಮೊದಲ ಸ್ಫೋಟ: ಅಕ್ಟೋಬರ್ 14, 2020
  • ಮೊದಲ ಹಂತದ ಕಾಮಗಾರಿ ಪೂರ್ಣ: ಮಾರ್ಚ್ 15, 2025
  • ಜೋಜಿಲಾ ಮುಖ್ಯ ಸುರಂಗದ ಅಂತಿಮ ಬ್ರೇಕ್‌ಥ್ರೂ: ಜೂನ್ 9, 2026

ವಿಶ್ವದ ಅತಿ ಎತ್ತರದ ಮತ್ತು ಅತಿ ಉದ್ದದ ಏಕ-ಕೊಳವೆ (ಟ್ಯೂಬ್) ದ್ವಿಮುಖ ರಸ್ತೆ ಸುರಂಗವಾಗಿ ಹೊರಹೊಮ್ಮುತ್ತಿರುವ ಜೋಜಿಲಾ ಯೋಜನೆ, ಉತ್ತರ ಭಾರತದ ಸಂಪರ್ಕ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದ್ದು, ಕಾಶ್ಮೀರ-ಲಡಾಖ್ ಅಭಿವೃದ್ಧಿಗೆ ಹೊಸ ವೇಗ ನೀಡಲಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2024/04/VID-20240426-WA0008.mp4

Tags: BaltalBreakthroughHimalayaJammu KashmirKannada News WebsiteKargilLadakhLatest News KannadaLehNitin GadkariSrinagarZojila Tunnelಕಾರ್ಗಿಲ್ಜಮ್ಮು ಕಾಶ್ಮೀರಜೋಜಿಲಾ ಸುರಂಗನಿತಿನ್ ಗಡ್ಕರಿಬಾಲ್ತಾಲ್‌ಬ್ರೇಕ್ ಥ್ರೂಲಡಾಖ್ಲೇಹ್ಶ್ರೀನಗರಹಿಮಾಲಯ ಪ್ರದೇಶ
Share207Tweet129Send
Aniruddha Vasishta S R

Aniruddha Vasishta S R

Editor-in-Chief

Previous Post

18-Month-Old Girl Dies After Falling Into Water Tank in Bagalkot

Next Post

MEIL Scripts Himalayan History with Final Breakthrough of Zojila Tunnel

kalpa News

kalpa News

Next Post
ಬ್ರೇಕ್‌ಥ್ರೂ | ದೇಶ ಭದ್ರತೆಯ ಜೋಜಿಲಾ ಸುರಂಗ ಕಾಮಗಾರಿಯಲ್ಲಿ ಐತಿಹಾಸಿಕ ಸಾಧನೆ

MEIL Scripts Himalayan History with Final Breakthrough of Zojila Tunnel

Leave a Reply Cancel reply

Your email address will not be published. Required fields are marked *

No Result
View All Result
Mysuru Ninada Griha Sangeet Concert On August 16th
English Articles

Mysuru to Host Hindustani Classical Vocal Concert on August 16

by kalpa News
August 11, 2026
1

Kalpa Media House  |  MYSURU | A Hindustani classical vocal concert by renowned Gwalior gharana musician Pandit M.P. Hegde of...

Read moreDetails
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL