ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ #ActorDoddanna ಅವರ ಆರೋಗ್ಯದ ಕುರಿತಾಗಿ ಹಾಗೂ ಅವರು ನಿಧನರಾಗಿದ್ದಾರೆ ಎಂಬ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ #SocialMedia ಪೋಸ್ಟರ್’ಗಳು ಹರಿದಾಡುತ್ತಿದ್ದು, ಇವೆಲ್ಲವೂ ಸತ್ಯಕ್ಕೆ ದೂರವಾದ ವಿಚಾರವಾಗಿದೆ.
ಈ ಕುರಿತಂತೆ ಹಿರಿಯ ನಟ ದೊಡ್ಡಣ್ಣನವರ ಆಪ್ತರು ಅವರು ಸ್ವತಃ ದೊಡ್ಡಣ್ಣನವರೊಟ್ಟಿಗೆ ಮಾತನಾಡಿದ್ದು, ಅವರು ಆರೋಗ್ಯವಾಗಿದ್ದಾರೆ. ಅಲ್ಲದೇ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಹಾಗೂ ಪೋಸ್ಟರ್’ಗಳು ದುರುದ್ದೇಶದಿಂದ ಕೂಡಿದ್ದಾಗಿವೆ.
Also Read>> ಶಿವಮೊಗ್ಗ-ಮೈಸೂರು, ಯಶವಂತಪುರ ನಡುವಿನ 3 ರೈಲುಗಳ ಮಹತ್ವದ ತುರ್ತು ಅಪ್ಡೇಟ್
ಇತ್ತೀಚೆಗೆ ದೊಡ್ಡಣ್ಣ ಅವರ ಆರೋಗ್ಯ ಕುರಿತು ಅನೇಕ ವದಂತಿಗಳು ಮತ್ತು ಸುಳ್ಳು ವೀಡಿಯೋಗಳು ಹರಿದಾಡುತ್ತಿರುವ ನಡುವೆ, ಈಗ ಅವರ ಸಾವಿನ ಬಗ್ಗೆ ಕೂಡ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದೆ.
ಈ ಕುರಿತಂತೆ ದೊಡ್ಡಣ್ಣನವರ ಆಪ್ತ ಗೆಳಯರಾದ ಭದ್ರಾವತಿಯ ಎಂ.ವಿ. ರೇವಣಸಿದ್ದಯ್ಯ ಅವರು ಮಾತನಾಡಿದ್ದು, ದೊಡ್ಡಣ್ಣ ಅವರು ಸುಕ್ಷೇಮವಾಗಿದ್ದು, ಇತ್ತೀಚೆಗಷ್ಟೇ ದೂರವಾಣಿ ಮೂಲಕ ಮಾತನಾಡಲಾಗಿದೆ. ಫೋನ್ ಸ್ವೀಕರಿಸಿದ ತಕ್ಷಣವೇ ಅವರು ಹರ್ಷದಿಂದ ನಗುತ್ತ ಮಾತನಾಡಿದ್ದು, ಯಾವುದೇ ಆತಂಕಕ್ಕೆ ಕಾರಣವಿಲ್ಲ ಎಂದಿದ್ದಾರೆ.
ಈ ರೀತಿಯ ಸುಳ್ಳು ಸುದ್ದಿಗಳನ್ನು ಹರಡುವುದು ದುರುದ್ದೇಶಪೂರ್ಣವಾಗಿದ್ದು, ಸಮಾಜದಲ್ಲಿ ಅನಗತ್ಯ ಆತಂಕ ಸೃಷ್ಟಿಸುವ ಕೆಲಸವಾಗಿದೆ. ಇಂತಹ ವದಂತಿಗಳನ್ನು ನಂಬಬಾರದು ಮತ್ತು ಹಂಚಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.
Also Read>> ಮೈಸೂರು | ಎಲ್ಲ ವ್ರತಗಳಿಗಿಂತ ಏಕಾದಶಿ ವ್ರತವು ಅತ್ಯಂತ ಶ್ರೇಷ್ಠ | ಸತ್ಯಾತ್ಮ ತೀರ್ಥ ಸ್ವಾಮೀಜಿ
ಸಾರ್ವಜನಿಕರು, ಅಭಿಮಾನಿಗಳು ಇಂತಹ ಯಾವುದೇ ರೀತಿಯ ಸುಳ್ಳು ಸುದ್ಧಿ ಹಾಗೂ ಪೋಸ್ಟರ್’ಗಳನ್ನು ಯಾವುದೇ ರೀತಿಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬಾರದು ಎಂದು ಕಲ್ಪ ನ್ಯೂಸ್ ಮನವಿ ಮಾಡುತ್ತದೆ. ಅಲ್ಲದೇ, ಇಂತಹ ಯಾವುದೇ ಪೋಸ್ಟರ್’ಗಳನ್ನು ಶೇರ್ ಮಾಡುವ ಮುನ್ನ ಸತ್ಯಾಸತ್ಯತೆ ಪರಿಶೀಲಿಸುವುದು ಉತ್ತಮ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















