ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ಕರಾವಳಿ ಪ್ರದೇಶ ಮತ್ತು ರಾಜಧಾನಿ ಬೆಂಗಳೂರಿನ (Bengaluru) ನಡುವಿನ ರೈಲ್ವೇ ಸಂಪರ್ಕಕ್ಕೆ ಹೊಸ ಆಯಾಮ ನೀಡಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharta Train) ರೈಲಿನ ಪ್ರಾಯೋಗಿಕ ಸಂಚಾರವು ಜೂನ್ ಕೊನೆಯ ವಾರದಲ್ಲಿ ಸಕಲೇಶಪುರ–ಸುಬ್ರಹ್ಮಣ್ಯ ರಸ್ತೆ ಘಾಟ್ ವಿಭಾಗದಲ್ಲಿ ನಡೆಯುವ ಸಾಧ್ಯತೆಯಿದೆ.
ರೈಲ್ವೇ ಸಚಿವಾಲಯದ ಅಧೀನದಲ್ಲಿರುವ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (ಆರ್‌ಡಿಎಸ್‌ಒ) ಈ ಪ್ರಾಯೋಗಿಕ ಕಾರ್ಯಾಚರಣೆಯ ನೇತೃತ್ವ ವಹಿಸಿದೆ.
Also Read>> ವಿದ್ಯಾನಗರ ಮೇಲ್ಸೇತುವೆಯಲ್ಲಿ ಭೀಕರ ಅಪಘಾತ : 8 ಮಂದಿಗೆ ಗಾಯ, 4ರ ಸ್ಥಿತಿ ಗಂಭೀರ
Vande Bharat ಸುರಕ್ಷತೆಗಾಗಿ AEB ವ್ಯವಸ್ಥೆ
ಹಾಸನ–ಮಂಗಳೂರು ರೈಲು ಮಾರ್ಗದ 55 ಕಿಮೀ ಉದ್ದದ ಘಾಟ್ ವಿಭಾಗದಲ್ಲಿ ರೈಲುಗಳು ಗರಿಷ್ಠ 30 ಕಿ.ಮೀ ವೇಗದಲ್ಲಿ ಮಾತ್ರ ಸಂಚರಿಸಬೇಕೆಂಬ ನಿಯಮವಿದೆ. ಈ ಹಿನ್ನೆಲೆ, ವಂದೇ ಭಾರತ್ ರೈಲಿಗೆ ವಿಶೇಷ ಸ್ವಯಂಚಾಲಿತ ತುರ್ತು ಬ್ರೇಕಿಂಗ್ (AEB) ವ್ಯವಸ್ಥೆ ಅಳವಡಿಸಲಾಗಿದ್ದು, ವೇಗ ಮೀರಿದರೆ ಸ್ವಯಂಚಾಲಿತವಾಗಿ ನಿಯಂತ್ರಣಕ್ಕೆ ತರಲಿದೆ.
ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ (ಐಸಿಎಫ್) ಈ ವಿಶೇಷ ರೇಕ್ ಸಿದ್ಧವಾಗುತ್ತಿದ್ದು, ಮುಂದಿನ ವಾರ ನೈಋತ್ಯ ರೈಲ್ವೆಗೆ (South Western Railway) ಹಸ್ತಾಂತರವಾಗಲಿದೆ ಎಂದು ಮೈಸೂರು ವಿಭಾಗದ ಡಿಆರ್‌ಎಂ ಮುದಿತ್ ಮಿತ್ತಲ್ ತಿಳಿಸಿದ್ದಾರೆ.
ಜೂನ್ ಕೊನೆಯ ವಾರದಲ್ಲಿ Vande Bharat ಪ್ರಾಯೋಗಿಕ ಓಟ
ಇದೀಗ ಎರಡನೇ ಹಂತದಲ್ಲಿ ಎಲ್‌ಎಚ್‌ಬಿ ಬೋಗಿಗಳ ಪರೀಕ್ಷೆಗಳು ನಡೆಯಲಿದ್ದು, ಅಂತಿಮವಾಗಿ ಜೂನ್ ಕೊನೆಯ ವಾರದಲ್ಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ಓಟ ನಡೆಯಲಿದೆ.
Also Read>> ಅಧಿಕ ಮಾಸ ಮಹೋತ್ಸವ | ಮೈಸೂರಿನಲ್ಲಿ 33 ದಿನಗಳ ಆಧ್ಯಾತ್ಮಿಕ ಉತ್ಸವ ಸಂಪನ್ನ
ಇನ್ನೊಂದೆಡೆ, ರೈಟ್ಸ್ ಸಂಸ್ಥೆಯು 2025 ಡಿಸೆಂಬರ್ 28ರಂದು ಸುಬ್ರಹ್ಮಣ್ಯ ಘಾಟ್ (Subramanya Ghat) ವಿಭಾಗದ ವಿದ್ಯುದೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಿದೆ. ಎಲ್ಲಾ ಹಂತದ ಪರೀಕ್ಷೆಗಳು ಯಶಸ್ವಿಯಾದ ನಂತರ ಈ ಮಾರ್ಗದಲ್ಲಿ ಎಲೆಕ್ಟ್ರಿಕ್ ರೈಲು ಸಂಚಾರಕ್ಕೆ ಅನುಮತಿ ದೊರೆಯಲಿದ್ದು, ಬೆಂಗಳೂರು–ಮಂಗಳೂರು ನಡುವೆ ವಂದೇ ಭಾರತ್ ಸೇವೆ ಆರಂಭಕ್ಕೆ ದಾರಿ ಸುಗಮವಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

