ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ಚಾಮರಾಜೇಶ್ವರ ದೇವಸ್ಥಾನದ 200ನೇ ವರ್ಷದ ಸಂಭ್ರಮದ ಇತಿಹಾಸ, ಸಂಸ್ಕೃತಿ, ಪರಂಪರೆಯ ಬಗ್ಗೆ ಜಾಗೃತಿ ಅಭಿಯಾನ ಯಶಸ್ವಿಯಾಗಲಿ. ಚಾಮರಾಜೇಶ್ವರ ದೇವಸ್ಥಾನ ಹಾಗೂ ಅದರ ಸ್ಥಾಪನೆಯ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಯಶಸ್ವಿಯಾಗಲಿ ಎಂದು ತಾಲೂಕ ದಂಡಾಧಿಕಾರಿಗಳು ಹಾಗೂ ತಹಸಿಲ್ದಾರ್ ಗಿರಿಜಾದೇವಿಯವರು ಶುಭಹಾರೈಸಿದರು.
ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಜೈ ಹಿಂದ್ ಪ್ರತಿಷ್ಠಾನ, ಕನ್ನಡ ಸಂಘಟನೆಗಳು, ಋಗ್ವೇದಿ ಯುತ್ ಕ್ಲಬ್ ಹಮ್ಮಿಕೊಂಡಿದ್ದ ಶ್ರೀ ಚಾಮರಾಜೇಶ್ವರ ರಥೋತ್ಸವ ಸಂಭ್ರಮ ಇತಿಹಾಸ ಅರಿವು ಅಭಿಯಾನಕ್ಕೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಹಾಗೂ ಜಯಚಾಮರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಚಾಲನೆ ನೀಡಲಾಯಿತು.
ಚಾಮರಾಜನಗರದ ಶ್ರೀ ಚಾಮರಾಜೇಶ್ವರ ರಥೋತ್ಸವ ಜುಲೈ 28ರ ಮಂಗಳವಾರ ವೈಭವದಿಂದ ನಡೆಯಲಿದೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಯಶಸ್ವಿಗೊಳಿಸಿ ಕೊಡಿ ಎಂದು ತಿಳಿಸುತ್ತಾ ಕನ್ನಡ ಸಾಹಿತ್ಯ ಪರಿಷತ್ತು ಶ್ರೀ ಚಾಮರಾಜೇಶ್ವರ ಸ್ವಾಮಿ ರಥೋತ್ಸವದ ಇತಿಹಾಸವನ್ನು ಚಾಮರಾಜನಗರದ ವಿವಿಧ ಕಡೆ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಸಂತೋಷ ತಂದಿದೆ. ಪ್ರತಿಯೊಂದು ಸ್ಥಳದ ಇತಿಹಾಸವನ್ನು ತಿಳಿಯುವ ಕಾರ್ಯ ಆಗಲಿ ಎಂದು ತಿಳಿಸಿದರು.
Also read: ಪ್ರಾಮಾಣಿಕ ಪ್ರಯತ್ನದಿಂದ ಯಶಸ್ಸು ಸಾಧ್ಯ: ಚಂದ್ರಪ್ಪ ಎಸ್ ಗುಂಡಪಲ್ಲಿ ಅಭಿಮತ
ಶ್ರೀ ಚಾಮರಾಜೇಶ್ವರ ದೇವಸ್ಥಾನದ ಅರ್ಚಕರಾದ ಶ್ರೀ ರಾಮಕೃಷ್ಣ ಭಾರದ್ವಾಜ್ ರವರು ಮಾತನಾಡಿ ಶ್ರೀ ಚಾಮರಾಜೇಶ್ವರ ದೇವಸ್ಥಾನ ನಿರ್ಮಾಣವಾಗಿ 200 ವರ್ಷಗಳು ಆಗಿವೆ.ಈ ಸಂದರ್ಭದಲ್ಲಿ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಶಿವಲಿಂಗವನ್ನು ಶೃಂಗೇರಿ ಜಗದ್ಗುರುಗಳು ಆಶೀರ್ವದಿಸಿ ನೀಡಿದ ಪರಿಣಾಮವಾಗಿ ಶ್ರೀ ಚಾಮರಾಜೇಶ್ವರ ದೇವಸ್ಥಾನವನ್ನು ನಿರ್ಮಾಣ ಮಾಡಿ ತಮ್ಮ ತಂದೆ ಚಾಮರಾಜ ಒಡೆಯರ್ ಜನಿಸಿದ ಸ್ಥಳವನ್ನು ಶಾಶ್ವತವಾಗಿ ರಚನೆ ಮಾಡಿ ಅರಿ ಕೋಟಾ ರವಾಗಿದ್ದ ಗ್ರಾಮಕ್ಕೆ ಚಾಮರಾಜನಗರ ಎಂಬ ಹೆಸರನ್ನು ನೀಡಿದವರು. ಸುಜಾ ಚಾಮುಂಡೇಶ್ವರಿ ಹಾಗೂ ಕೆಂಪನಂಜಾಂಬ ಸಮೇತ ವಿಗ್ರಹ ಸ್ಥಾಪಿಸಿದರು. ರಾಜತ್ವ ಮತ್ತು ಈಶ್ವರತ್ವ ಇರುವ ಚಾಮರಾಜೇಶ್ವರ ಸಕಲರಿಗೂ ಇಷ್ಟಾರ್ಥಗಳನ್ನು ನೆರವೇರಿಸುವ ಭಗವಂತ ಎಂದರು.
ಸಭೆಯ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರು, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ ಋಗ್ವೇದಿ ವಹಿಸಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಶ್ರೀ ಚಾಮರಾಜೇಶ್ವರ ದೇವಸ್ಥಾನ ಮತ್ತು ಚಾಮರಾಜನಗರದ ಸಮಸ್ತ ಇತಿಹಾಸ, ಸಂಸ್ಕೃತಿ, ಪರಂಪರೆಯ ಬಗ್ಗೆ ಇತಿಹಾಸ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದು ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನ ವಿಶೇಷವಾಗಿ ರಚಿತವಾಗಿರುವ ದೇವಸ್ಥಾನ. ಆಷಾಢ ಮಾಸದಲ್ಲಿ ಹುಣ್ಣಿಮೆಯ ದಿನ ಜರುಗುವ ಶ್ರೀ ಚಾಮರಾಜೇಶ್ವರ ದೇವಸ್ಥಾನ ರಥೋತ್ಸವ ನವದಂಪತಿಗಳ ಆಗಮನದ ಮೂಲಕ ಸಂತೋಷ ಸಂಭ್ರಮವನ್ನು ಕಾಣುವ ರಥೋತ್ಸವವಾಗಿದೆ. ಸಕಲ ಸಂಪತ್ತು, ಸಮೃದ್ಧಿ,ಆರೋಗ್ಯ, ಲಭಿಸಲಿ.ಉತ್ತಮ ಮಳೆ ಬೆಳೆ ಆಗಲಿ.ಶ್ರೀ ಚಾಮರಾಜೇಶ್ವರ ದೇವಾಲಯಕ್ಕೆ ಭಕ್ತರು ಆಗಮಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕು ಎಂದು ತಿಳಿಸಿದರು.
ಗಾಯಕರಾದ ಸುರೇಶ್ ನಾಗ್ ಹರದನಹಳ್ಳಿ, ಅಪ್ಪು, ಮೆಲೋಡಿಸ್ ರಂಗಸ್ವಾಮಿ, ಶಿವಲಿಂಗ ಮೂರ್ತಿ.ಎಲ್ ಭಕ್ತಿಗೀತೆಗಳ ಗಾಯನ ನಡೆಸಿಕೊಟ್ಟರು. ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಲವು ವರ್ಷಗಳಿಂದ ಶ್ರೀ ಚಾಮರಾಜೇಶ್ವರ ರಥೋತ್ಸವವನ್ನು ನಿರ್ಮಿಸುವ ಕಾರ್ಯದಲ್ಲಿ ತೊಡಗಿರುವ ಮಹೇಶವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಶ್ರೀನಿವಾಸ ಗೌಡ, ಬಿಕೆ ಆರಾಧ್ಯ, ಮಹಮ್ಮದ್ ಗೌಸ್, ಶ್ರೀ ಚಾಮರಾಜೇಶ್ವರ ರಥೋತ್ಸವ ನಿರ್ಮಾಣದ ಸುರೇಶ್, ಸಿದ್ದು, ನಾಗರಾಜು ದೊಡ್ಡಮೋಳೆ, ಸಮಿತಿಯ ಸದಸ್ಯರು ಭಕ್ತರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









