No Result
View All Result
Blood Donation Camp Successfully Organised at Mysuru Division
English Articles

Blood Donation Camp Successfully Organised at Mysuru Division

by ಕಲ್ಪ ನ್ಯೂಸ್
June 16, 2026
0

Kalpa Media House  | Mysuru | South Western Railway, Mysuru Division, organised a Blood Donation Camp in collaboration with Railway...

Read moreDetails
yoga | Participate online

India Launches Worldwide Campaign for International Day of Yoga 2026

June 13, 2026
Elderly Woman Found Dead

Elderly Woman Found Dead in Decomposed State in Shivamogga

June 13, 2026
AN-32 of IAF has met with an accident in Assam

IAF Aircraft Crashes During Landing at Jorhat Airbase in Assam

June 13, 2026
ಪ್ರಧಾನಿ ನರೇಂದ್ರ ಮೋದಿಗೆ ರಾಮಚಂದ್ರಾಪುರ ಮಠದ ಶ್ರೀಗಳ ಅಭಿನಂದನೆ

Ramachandrapura Seer Hails PM Narendra Modi’s Leadership

June 10, 2026
  • Advertise With Us
  • Grievances
  • About Us
  • Contact Us
Friday, June 19, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Editorial

Just asking; ಕಾಂಗ್ರೆಸ್‌ನ ಅಸಹಿಷ್ಣುತೆ: ಪ್ರಣವ್ ಮುಖರ್ಜಿ ಜೀತಕ್ಕಿದ್ದಾರೆಯೇ?

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
June 6, 2018
in Editorial
0
Share on FacebookShare on TwitterShare on WhatsApp

ಆಚಾರ ಹೇಳುವುದಕ್ಕೆ, ಬದನೆಕಾಯಿ ತಿನ್ನುವುದಕ್ಕೆ ಎಂಬ ಮಾತೊಂದಿದೆಯಲ್ಲಾ.. ಅದು ಶೇ.100ರಷ್ಟು ಕಾಂಗ್ರೆಸ್‌ಗೆ ಅನ್ವಯವಾಗುತ್ತದೆ ಎನ್ನುವುದು ಸತ್ಯ.

ದೇಶದಲ್ಲಿ ಬುದ್ದಿಜೀವಿಗಳ, ಎಡಪಂಥೀಯ ಸಾಹಿತಿಗಳ ಹತ್ಯೆಗಳಾದ ದೇಶದಲ್ಲಿ ಮೋದಿ ಸರ್ಕಾರದ ಅಡಿಯಲ್ಲಿ ಅಸಹಿಷ್ಣುತೆ(intolerance) ತಾಂಡವವಾಡುತ್ತದೆ ಎಂದು ಬೊಬ್ಬಿರಿದು, ಪ್ರಶಸ್ತಿಗಳನ್ನು ಹಿಂತಿರುಗಿಸಿದ ಸಾಹಿತಿಗಳೆಷ್ಟು, ಜಸ್‌ಟ್ ಆಸ್ಕಿಂಗ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿ(ಜನರಿಂದ ಮುಖಕ್ಕೆ ಮಂಗಳಾರ ಮಾಡಿಸಿಕೊಂಡಿದ್ದು ಬೇರೆಯದೇ ವಿಚಾರ) ವ್ಯಕ್ತಿಗಳೆಷ್ಟು…

ಆದರೆ.. ಈಗ.. ಈಗ.. ಈಗ.. ಇವರೆಲ್ಲಾ ಬೆಂಬಲಿಸಿದ ಕಾಂಗ್ರೆಸ್ ಪಕ್ಷದಲ್ಲೇ ಅಸಹಿಷ್ಣುತೆ ಅಂದರೆ intolerance ತಾಂಡವವಾಡುತ್ತಿದೆಯೆಲ್ಲಾ. ಈಗ ಅವರೆಲ್ಲಾ ಎಲ್ಲಿ ಹೋಗಿದ್ದಾರೆ. ಯಾವ ವಿಚಾರ ಎಂದಿರಾ… ಇನ್ನಾರದ್ದೂ ಅಲ್ಲ, ಹಿರಿಯ ರಾಜಕಾರಣಿ, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ವಿಚಾರ.
ಹೌದು…ಕಾಂಗ್ರೆಸ್‌ನಿಂದ ಅಸಹಿಷ್ಣುತೆಯ ದೌರ್ಜನ್ಯಕ್ಕೆ ಈಗ ಒಳಗಾಗಿರುವವರು ಇವರೇ…

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂರನೆಯ ಸಂಘ ಶಿಕ್ಷಾ ವರ್ಗ ವಿದಾಯದ ಮುಖ್ಯ ಅತಿಥಿಯಾಗಿ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಆಹ್ವಾನಿತರಾಗಿದ್ದು, ಜೂನ್ 7ರ ನಾಳೆ ವರ್ಗವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಈ ವಿಚಾರ ಹೊರಬಿದ್ದ ನಂತರ ಆರ್‌ಎಸ್‌ಎಸ್ ಅನ್ನು ಖಂಡಾತುಂಡವಾಗಿ ವಿರೋಧಿಸುವ ಕಾಂಗ್ರೆಸ್ ಪ್ರಣವ್ ಮುಖರ್ಜಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಾರದು ಎಂದು ಆಂತರಿಕ ಒತ್ತಡ ಹೇರಲು ಆರಂಭಿಸಿತು. ನೂರಾರು ಫೋನ್ ಕರೆಗಳು, ಈ ಮೇಲ್‌ಗಳ ಮೂಲಕ ಒತ್ತಡ ಹೇರಿದ ಕಾಂಗ್ರೆಸ್ ಪ್ರಣವ್ ಅವರನ್ನು ಮಾನಸಿಕವಾಗಿ ಹಿಂಸಿಸಿದೆ ಎಂದರೆ ತಪ್ಪಲ್ಲ. ಎಲ್ಲಿಯವರೆಗೂ ಈ ಹಿಂಸೆ? ಅಂತರ ರಾಷ್ಟ್ರೀಯ ಮಾಧ್ಯಮಗಳೂ ಸಹ ಸುದ್ದಿ ಮಾಡುವವರೆಗೂ… ನಿಜಕ್ಕೂ ಹೇಸಿಗೆ ಅಲ್ಲವೇ?

ಅರೆ ಸ್ವಾಮಿ ಕಾಂಗ್ರೆಸ್ಸಿಗರೇ, ಪ್ರಣವ್ ಮುಖರ್ಜಿ ಅವರೇನು ನಿಮ್ಮ ಪಕ್ಷದ ಗುಲಾಮರೇ ಅಥವಾ ನಿಮ್ಮಲ್ಲಿ ಜೀತಕ್ಕಿದ್ದಾರೆಯೇ?

ಪ್ರಣವ್ ಮುಖರ್ಜಿ ಅವರು ಹಿರಿಯ, ಅನುಭವಿ ರಾಜಕಾರಣಿ, ದಶಕಗಳ ಕಾಲ ತಮ್ಮನ್ನು ಸಾರ್ವಜನಿಕ ಜೀವನದಲ್ಲೇ ತೊಡಗಿಸಿಕೊಂಡವರು. ಇಂತಹ ನಾಯಕರೊಬ್ಬರು ತಮ್ಮದೇ ಆದ ಚಿಂತನೆಗಳನ್ನು ಹೊಂದಿರುತ್ತಾರೆ. ಈ ರೀತಿಯ ಅನುಭವಿ ನಾಯಕರ ಮಾತುಗಳನ್ನು ಕೇಳುವ ಅವಕಾಶ ಎಲ್ಲೇ ದೊರೆತರೂ ಅದು ದೇಶದ ಪುಣ್ಯ.. ಅಲ್ಲದೇ, ಈ ದೇಶದ ಪ್ರಜೆಯೊಬ್ಬರು ತಮಗೆ ಬೇಕಾದ ರೀತಿಯ ಆಯ್ಕೆಗಳನ್ನು ಮಾಡಿಕೊಳ್ಳಲು ಸಂವಿಧಾನ ಅವಕಾಶವನ್ನೂ ಸಹ ನೀಡಿದೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಪಕ್ಷಕ್ಕೆ ಸೈದ್ದಾಂತಿಕ ವ್ಯತ್ಯಾಸವಿದೆ ಎಂಬ ಕಾರಣಕ್ಕಾಗಿ ಹಿರಿಯ ನಾಯಕರೊಬ್ಬರಿಗೆ ಈ ರೀತಿ ಹಿಂಸೆಗೆ ಗುರಿ ಮಾಡುವುದು ನಿಮ್ಮ ನೀಚತನಕ್ಕೆ ಸಾಕ್ಷಿಯಾಗುತ್ತದೆ.

ಹಿರಿಯ ನಾಯಕರೊಬ್ಬರ ನಿರ್ಧಾರವನ್ನು ಈ ರೀತಿ ವಿರೋಧಿಸುತ್ತಿರುವುದು ಆಶ್ಚರ್ಯವೇ ಆದರೂ, ಹಿಂಸಾತ್ಮಕ ಹಿಡನ್ ಅಜೆಂಡಾ ಹೊಂದಿರುವ ಕಮ್ಯುನಿಸಂನ್ನು ಹಾಸಿ ಹೊದ್ದುಕೊಂಡಿರುವ ಕಾಂಗ್ರೆಸ್‌ನಿಂದ ಇಂತಹ ಅಸಹಿಷ್ಣುತೆಯೇನೂ ಅನಿರೀಕ್ಷಿತವಲ್ಲ.

ಪ್ರಣವ್ ಮುಖರ್ಜಿ ಕಾಂಗ್ರೆಸ್‌ನಲ್ಲಿ ಈ ದೇಶ ಕಂಡ ಕೆಲವೇ ದಕ್ಷ ಹಾಗೂ ಪ್ರಾಮಾಣಿಕ ನಾಯಕರಲ್ಲಿ ಒಬ್ಬರು.. ಇಂತಹ ವ್ಯಕ್ತಿಗೆ ಕಾಂಗ್ರೆಸ್(ಯುಪಿಎ) ಸರ್ಕಾರ ರಚನೆಯಾಗುವ ವೇಳೆ ಅನ್ಯಾಯ ಮಾಡಿತು ಎನ್ನುವುದು ಇಂದಿಗೂ ದೇಶವಾಸಿಗಳ ಮನದಿಂದ ಮಾಸಿಲ್ಲ. 2013ರ ಚುನಾವಣೆಯ ವೇಳೆಯೂ ಸಹ ಕಾಂಗ್ರೆಸ ಪ್ರಣವ್ ದಾ ಅವರನ್ನು ಇದೇ ರೀತಿ ನಿರ್ಲಕ್ಷಿಸಿತ್ತು. ಈ ವಿಚಾರದಲ್ಲಿ ಜ್ಯೋರ್ತಿವಿಜ್ಞಾನಂ ಖ್ಯಾತಿಯ ಪ್ರಕಾಶ್ ಅಮ್ಮಣ್ಣಾಯ ಅವರು ದಕ್ಷರೊಬ್ಬರನ್ನು ಕಳಕೊಂಡು ಪರದಾಡಿದರೆ ಏನು ಪ್ರಯೋಜನ ಎಂಬ ಶೀರ್ಷಿಕೆ ಅಡಿಯಲ್ಲಿ 2013ರಲ್ಲೇ ಲೇಖನ ಬರೆದಿದ್ದರು.. ಓದುಗರ ಗಮನಕ್ಕೆ ಲೇಖನದ ಪ್ರತಿಯನ್ನು ಇಂದಿನ ಲೇಖನಕ್ಕೆ ಪೂರಕವಾಗಿ ಇಲ್ಲಿ ಪ್ರಕಟಿಸಲಾಗಿದೆ.

ವಾಸ್ತವವಾಗಿ, ಹಿಂಸೆಯನ್ನೇ ಹಿಡನ್ ಆಗಿ ಪ್ರತಿಪಾದಿಸುವ ಎಡಪಂಥೀಯವಾದದ ಮುಖವಾಡವಾಗಿರುವ ಕಾಂಗ್ರೆಸ್ ಹಾಗೂ ಪಟಾಲಂನ ಸಿದ್ದಾಂತವೇ ಹಾಗೆ… ತಮಗೆ ಬೇಡ, ತಮ್ಮ ಸಿದ್ದಾಂತಕ್ಕೆ ವಿರೋಧ ಎಂದರೆ ಸಾಕು. ಅವರನ್ನು ನಿರಂತರವಾಗಿ, ಬಹಿರಂಗವಾಗಿ ಟೀಕಿಸಿ, ಕಾಡಿ, ಮಾನಸಿಕ ಹಿಂಸೆಗೆ ಗುರಿಮಾಡಿ, ನಿರ್ಧಾರ ಬದಲಿಸುವಂತೆ ಮಾಡುವುದು ಇವರ ತಂತ್ರಗಳಲ್ಲಿ ಒಂದು.. ಎಡಪಂಥೀಯವಾದವೂ ಸಹ ವಿಶ್ವದಾದ್ಯಂತ ಇಂತಹ ಕೃತ್ಯವನ್ನೇ ಮಾಡಿಕೊಂಡು ಬಂದಿದೆ.

ಸುಮ್ಮನೆ ಹಿಂದಿನ ದಿನಗಳನ್ನು ನೋಡಿದರೆ, ವಿಭಿನ್ನ ಸಿದ್ದಾಂತಗಳನ್ನು ಒಂದೇ ವೇದಿಕೆಯಲ್ಲಿ ತರುವ ಪ್ರಯತ್ನಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಮಾಡಲಾಗಿದೆ.

ಹಿಂದೆ, ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತ ಅಭಯ್ ಬ್ಯಾಂಗ್ ಅವರೂ ಸಹ ಸಂಘ ಪರಿವಾರದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಂದಾದಾಗ ಇಂತಹುದ್ದೇ ಅಸಹಿಷ್ಣುತೆಯನ್ನು ಅವರ ಮೇಲೆ ಹೇರಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಜೈಪುರ ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಂಡು ಸಾಮಾಜಿಕ ಹಾಗೂ ರಾಷ್ಟ್ರೀಯ ಸಮಸ್ಯೆಗಳ ವಿಚಾರದಲ್ಲಿ ಆರ್‌ಎಸ್‌ಎಸ್ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸಂಘ ಪರಿವಾರದ ಮುಖಂಡ ದತ್ತಾತ್ರೇಯ ಹೊಸಬಾಳೆ ಅವರನ್ನು ಆಹ್ವಾನಿಸಲಾಗಿತ್ತು. ಆದರೆ, ಅಂದೂ ಸಹ ಎಡಪಂಥೀಯರು ಖಂಡಾತುಂಡವಾಗಿ ವಿರೋಧ ವ್ಯಕ್ತಪಡಿಸಿದ್ದರು. ಇಂತಹ ಸಾಕಷ್ಟು ಉದಾಹರಣೆಗಳಿವೆ.

ಇಲ್ಲಕ್ಕೂ ಮಿಗಿಲಾಗಿ, ಪ್ರಣವ್ ಮುಖರ್ಜಿ ಈ ದೇಶದ ಪ್ರಜೆ, ಮುತ್ಸದ್ದಿ ರಾಜಕಾರಣಿ, ನಮ್ಮ ದೇಶದ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿ, ತಮ್ಮ ಅಧಿಕಾರವಧಿಯಲ್ಲಿ ಎಲ್ಲೂ, ಎಂದೂ ಈ ದೇಶದ ಪ್ರಥಮ ಪ್ರಜೆಯ ಸ್ಥಾನಕ್ಕೆ ಚ್ಯುತಿ ಬಾರದಂತೆ ನೋಡಿಕೊಂಡವರು.

ಇನ್ನು, ಸಂವಿಧಾನ ಈ ದೇಶದ ಪ್ರತಿ ಪ್ರಜೆಗೂ ತನ್ನದೇ ಆದ ಆಯ್ಕೆಯ, ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ. ಅದರಂತೆ ತನ್ನ ಅಭಿಪ್ರಾಯ ವ್ಯಕ್ತಪಡಿಸಲು, ತಮಗೆ ಬೇಕಾದಂತೆ ನಿರ್ಧಾರ ಕೈಗೊಳ್ಳಲು ಎಲ್ಲರಂತೆ ಪ್ರಣವ್ ದಾ ಸಹ ಸ್ವತಂತ್ರ್ಯರು.. ಇದರಲ್ಲಿ ತಪ್ಪೇನಿದೆ?

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟೆವೆಂಬ ಅಹಃ ನಿಂದ ಮಾತನಾಡುವ ಕಾಂಗ್ರೆಸ್‌ನ ಚಾರಿತ್ರ್ಯವನ್ನು ಒಮ್ಮೆ ನೋಡಿದರೆ, ಇಂತಹುದ್ದೇ ದುರಂಹಂಕಾರ, ದಬ್ಬಾಳಿಕೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣಗಳ ಉದಾಹರಣೆಗಳು ಸಾಲು ಸಾಲಿವೆ.

ಆದರೆ, ಪ್ರಣವ್ ಮುಖರ್ಜಿಯಂತಹ ಮುತ್ಸದ್ದಿ ರಾಜಕಾರಣಿಯನ್ನೂ ಇವರು ಬಿಡುವುದಿಲ್ಲ ಎಂದರೆ… ಇವರದ್ದು ಸೈದ್ದಾಂತಿಕ ವಿರೋಧದ ಜೊತೆಯಲ್ಲಿ, ವೈಯಕ್ತಿಕ ದ್ವೇಷಗಳೂ ಸಹ ಆವರಿಸಿಕೊಂಡಿವೆ ಎಂದು ಪರಿಗಣಿಸುವುದು ಸೂಕ್ತ…

ಇಷ್ಟೆಲ್ಲಾ ಆದರೂ, ಪ್ರಣವ್ ದಾ ಮಾತ್ರ ತಮ್ಮ ನಿರ್ಧಾರ ಬದಲಾವಣೆ ಮಾಡದರೆ ಸಂಘ ಪರಿವಾರದ ಕಾರ್ಯಕ್ರಮದಲ್ಲಿ ನಾಳೆ ಪಾಲ್ಗೊಳ್ಳುವುದು ಉತ್ತಮ ಬೆಳವಣಿಗೆ ಎನ್ನಲಡ್ಡಿಯಿಲ್ಲ

Tags: congressDattatreya HosabaleFormer President Pranab MukherjeePranab MukherjeeRashtriya Swayamsevak Sangh (RSS)RSS
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಮೋದಿ-ಶಾ ಅವರನ್ನು ಸಿಬಿಐ ಬಂಧಿಸಬೇಕಂತೆ!

Next Post

ತಂದೆಗೇ ಎಚ್ಚರಿಕೆ ನೀಡಿದ ಪ್ರಣವ್ ಮುಖರ್ಜಿ ಪುತ್ರಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ತಂದೆಗೇ ಎಚ್ಚರಿಕೆ ನೀಡಿದ ಪ್ರಣವ್ ಮುಖರ್ಜಿ ಪುತ್ರಿ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿಕ್ಷಣ ಕ್ಷೇತ್ರ ನಿರ್ಲಕ್ಷ್ಯ: ಸರ್ಕಾರದ ವಿರುದ್ಧ ಎಂಎಲ್ಸಿ ಡಿ.ಎಸ್. ಅರುಣ್ ವಾಗ್ದಾಳಿ

ಶಿಕ್ಷಣ ಕ್ಷೇತ್ರ ನಿರ್ಲಕ್ಷ್ಯ: ಸರ್ಕಾರದ ವಿರುದ್ಧ ಎಂಎಲ್ಸಿ ಡಿ.ಎಸ್. ಅರುಣ್ ವಾಗ್ದಾಳಿ

June 19, 2026
ವಿಳಂಬವಿಲ್ಲದೆ ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ: ಶಾಸಕ ಚನ್ನಬಸಪ್ಪ

ವಿಳಂಬವಿಲ್ಲದೆ ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ: ಶಾಸಕ ಚನ್ನಬಸಪ್ಪ

June 19, 2026
Heart Attack

ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗೆ ಹೃದಯಾಘಾತ; ಚಿಕಿತ್ಸೆ ಫಲಕಾರಿಯಾಗದೆ ಸಾವು

June 19, 2026
Plant trees and protect environment

ಗಿಡ ನೆಟ್ಟು ಪರಿಸರ ರಕ್ಷಿಸಿ: ಪಿಎಸ್ಐ ನವೀನ್

June 19, 2026
Vande Bharat Express

ಜೂನ್ ಕೊನೆಯಲ್ಲಿ ಸಕಲೇಶಪುರ–ಸುಬ್ರಹ್ಮಣ್ಯ ವಂದೇ ಭಾರತ್ ಪ್ರಾಯೋಗಿಕ ಸಂಚಾರ

June 19, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL