ಭದ್ರಾವತಿ: 111 ವರ್ಷ ಸಾರ್ಥಕ, ಆದರ್ಶನೀಯವಾಗಿ ಬದುಕಿ, ಇಡಿಯ ವಿಶ್ವಕ್ಕೆ ಅತ್ಯುತ್ತಮ ಸಂದೇಶ ಸಾರಿ, ಅಮರರಾಗಿರುವ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳಿಗೆ ಭದ್ರಾವತಿಯ ಶ್ರಿಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ದಾಸೋಹ ಸಮಿತಿ ವತಿಯಿಂದ ನಮನ ಸಲ್ಲಿಸಲಾಯಿತು.
ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದಲ್ಲಿ ಮಂಗಳವಾರದ ನಿಮಿತ್ತ ದಾಸೋಹವನ್ನು ಏರ್ಪಡಿಸಲಾಗಿತ್ತು. ಈ ವೇಳೆ ಅನ್ನದಾನದ ಮಹತ್ವವನ್ನು ವಿಶ್ವಕ್ಕೆ ಸಾರಿದ ಸಿದ್ದಗಂಗಾ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಶ್ರೀಗಳ ಸಾರ್ಥಕ ಬದುಕು ಹಾಗೂ ಸೇವೆಯನ್ನು ಕೊಂಡಾಡಲಾಯಿತು.
ಈ ವೇಳೆ, ದಾಸೋಹ ಸಮಿತಿ ಅಧ್ಯಕ್ಷ ಎಂ.ಎಸ್. ಜನಾರ್ಧನ ಅಯ್ಯಂಗಾರ್, ತಹಶೀಲ್ದಾರ್ ಎಂ.ಆರ್. ನಾಗರಾಜ್, ಉಪಾಧ್ಯಕ್ಷೆ ಆಶಾ ಪುಟ್ಟಸ್ವಾಮಿ, ಕಾರ್ಯದರ್ಶಿ, ಡಿ. ಸತ್ಯನಾರಾಯಣ ರಾವ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ನೂರಾರು ಮಂದಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.
Discussion about this post