ಶಿವಮೊಗ್ಗ: ಶತಾಯುಷಿ ನಡೆದಾಡುವ ದೇವರು ದಾಸೋಹ ಪರಮಪೂಜ್ಯ ಡಾ. ಶ್ರೀಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಅರವಿಂದ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಿವಾಸಿಗಳ ಸಂಘದ ಹಿರಿಯರು ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್, ಶ್ರೀಗಳ ಸಾಧನೆಯ ಹಾದಿ, ಸಮಾಜಕ್ಕೆ ಅವರು ಹಾಕಿಕೊಟ್ಟ ಸೇವಾ ಮಾರ್ಗವನ್ನು ನೆನಪಿಸಿಕೊಂಡರು.
ಸಂಘದ ಅಧ್ಯಕ್ಷ ಎಸ್. ತಂಗರಾಜ್, ಉಪಾಧ್ಯಕ್ಷ ಬಸವರಾಜ್, ಪ್ರಧಾನ ಕಾರ್ಯದರ್ಶಿ ಎಂ. ರವಿಕುಮಾರ್, ಎಲ್.ಕೆ. ನಾಗರಾಜ್, ಟಿ.ವಿ. ನಾಗರಾಜ್, ಚರಂತಿಮಠ ನಾಗರಾಜ್, ದತ್ತಾತ್ರಿ, ಮಹಿಳಾ ಸಂಘದ ನೇತ್ರಾವತಿ, ಚಂದ್ರಮ್ಮ, ಮಂಜಮ್ಮ ನಿವಾಸಿಗಳ ಸಂಘದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಸಿಹಿಮೊಗೆ ಸಂಯುಕ್ತ ವಿಶ್ರಾಂತ ನೌಕರರ ಸಂಘ
ಸಿದ್ಧಗಂಗೆಯ ಸಿದ್ಧಿ ಪುರುಷ, ಕರ್ನಾಟಕ ರತ್ನ, ಪದ್ಮಭೂಷಣ ಡಾ.ಶಿವಕುಮಾರಸ್ವಾಮಿ ಅವರು ಶಿವೈಕ್ಯರಾದ ಹಿನ್ನೆಲೆಯಲ್ಲಿ ನುಡಿನಮನ ಕಾರ್ಯಕ್ರಮ ನಡೆಯಿತು.
ಸಿಹಿಮೊಗೆ ಸಂಯುಕ್ತ ವಿಶ್ರಾಂತ ನೌಕರರ ಸಂಘದ ಕೃಷಿನಗರದ ಕಛೇರಿಯಲ್ಲಿ ನಡೆದ ಈ ನಮನಾಂಜಲಿ ಸಭೆಯಲ್ಲಿ ಶ್ರೀಗಳ ಕುರಿತು ಟಿ.ಜೆ. ರವಿಕುಮಾರ್, ಎಚ್.ಆರ್. ರವಿಕುಮಾರ್, ಡಾ. ಸುಧೀಂದ್ರ, ಮಂಜುನಾಥ ಶರ್ಮ, ಎಲ್. ಹನುಮಂತಪ್ಪ. ಡಾ.ಗಣೇಶ ಬಾಬು ಮಾತನಾಡಿದರು. ಅನೇಕ ಸಂಖ್ಯೆಯಲ್ಲಿ ಸದಸ್ಯರು ಹಾಜರಿದ್ದರು.
ಕರ್ನಾಟಕ ಜಾನಪದ ಪರಿಷತ್ತು
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯು, ಕರ್ನಾಟಕ ಜಾನಪದ ಪರಿಷತ್ತು ಜೊತೆಗೂಡಿ ಶರಾವತಿ ನಗರದ ಬಿ.ಜಿ.ಎಸ್. ವಸತಿಶಾಲಾ ಆವರಣದಲ್ಲಿ ಡಾ. ಶಿವಕುಮಾರ್ ಮಹಾ ಸ್ವಾಮಿಗಳ ಗೌರವಾರ್ಥ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು.
ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಡಿ. ಗಣೇಶ್, ಜಿಲ್ಲಾ ಕಾರ್ಯದರ್ಶಿ, ಉಪಾಧ್ಯಕ್ಷೆ ಭಾರತಿ ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ಎಸ್. ಶಿವಮೂರ್ತಿ, ಅರಣ್ಯ ಇಲಾಖೆಯ ನೌಕರರ ಮಹಾಮಂಡಲದ ರಾಜ್ಯ ಅಧ್ಯಕ್ಷರಾದ ರಘುರಾಮ ದೇವಾಡಿಗ ಸೇರಿದಂತೆ ಎರಡೂ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.
Discussion about this post